ನವ ದೆಹಲಿ: ಹಣಕಾಸು ಸಚಿವಾಲಯವು ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಗ್ರಾಮೀಣ ಪಂಚಾಯಿತಿಗಳಿಗೆ 4,189 ಕೋಟಿ ರೂ. ಅನುದಾನ ನೆರವನ್ನು (Grant) ಬಿಡುಗಡೆಗೊಳಿಸಿದೆ. ಕರ್ನಾಟಕಕ್ಕೆ 628 ಕೋಟಿ ರೂ, ತ್ರಿಪುರಾಕ್ಕೆ 44 ಕೋಟಿ ರೂ, ಉತ್ತರಪ್ರದೇಶಕ್ಕೆ 2,240 ಕೋಟಿ ರೂ, ಆಂಧ್ರಪ್ರದೇಶಕ್ಕೆ 569 ಕೋಟಿ ರೂ, ಗುಜರಾತ್‌ಗೆ 708 ಕೋಟಿ ರೂ. ಬಿಡುಗಡೆಯಾಗಿದೆ.
15 ನೇ ಹಣಕಾಸು ಆಯೋಗದ ಶಿಫಾರಸು ಮೇರೆಗೆ ಈ ಅನುದಾನ ಬಿಡುಗಡೆಯಾಗಿದೆ. ಕುಡಿಯುವ ನೀರಿನ ಪೂರೈಕೆ, ಮಳೆ ನೀರಿನ ಸಂಗ್ರಹ, ನೀರಿನ ಪುನರ್ಬಳಕೆ ಯೋಜನೆಗೆ ಈ ನೆರವು ಬಳಕೆಯಾಗಲಿದೆ.
ರಾಜ್ಯ ಸರ್ಕಾರಗಳು 10 ದಿನಗಳೊಳಗೆ ಅನುದಾನವನ್ನು ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಬೇಕೆಂದು ಸೂಚಿಸಲಾಗಿದೆ. 10 ದಿನಕ್ಕಿಂತ ತಡವಾದರೆ ರಾಜ್ಯ ಸರ್ಕಾರ ಬಡ್ಡಿ ಸಹಿತ ಬಿಡುಗಡೆಗೊಳಿಸಬೇಕಾಗುತ್ತದೆ.