Site icon Vistara News

Karnataka Election 2023: 80 ವರ್ಷ ದಾಟಿದವರಿಂದ ಏ.29ರಿಂದಲೇ ಮನೆಯಿಂದ ಮತದಾನ; ಗೌಪ್ಯತೆಗೇನು ಕ್ರಮ?

80 Years Above Voters will cast their votes from April 29 In Karnataka

80 Years Above Voters will cast their votes from April 29 In Karnataka

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣೆ (Karnataka Election 2023) ಆಯೋಗ ಕ್ರಮ ತೆಗೆದುಕೊಂಡಿದೆ. ಅದರಂತೆ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದಾರೆ. ಇವರು ಮತದಾನ ಮಾಡಲು ಚುನಾವಣೆ ಆಯೋಗವು ಕ್ರಮ ತೆಗೆದುಕೊಂಡಿದೆ. ಏಪ್ರಿಲ್‌ 29ರಿಂದ ಮೇ 6ರವರೆಗೆ 80 ವರ್ಷ ದಾಟಿದ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.

ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ಹೋಗಿ ಬ್ಯಾಲೇಟ್ ಪೇಪರ್‌ನಲ್ಲಿ ಮತ ಹಾಕಿಸಿಕೊಳ್ಳಲಿದ್ದಾರೆ. ಮೂರೂ ಪಕ್ಷಗಳ ಏಜೆಂಟ್‌ಗಳೊಂದಿಗೆ ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ತೆರಳಿ, ಅವರ ಸಮ್ಮುಖದಲ್ಲಿಯೇ ಮತ ಹಾಕಿಸಿಕೊಳ್ಳಲಿದ್ದಾರೆ.

ಜಿಲ್ಲಾವಾರು ಮತದಾರರ ಸಂಖ್ಯೆ

ಹಾಗೆಯೇ, 19,279 ಮತದಾರರು ವಿಶೇಷ ಚೇತನರು ಮನೆಯಿಂದ ವೋಟ್ ಮಾಡಲು ಅವಕಾಶ ಪಡೆದಿದ್ದಾರೆ. ಚುನಾವಣೆ ಅಧಿಕಾರಿಗಳು ಇವರಿಂದ ಮತ ಹಾಕಿಸಿಕೊಳ್ಳುವಾಗ ಗೌಪ್ಯತೆ ಕಾಪಾಡಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದಾರೆ. ಇವರಲ್ಲಿ ಪುರುಷರು 5,46,487 ಇದ್ದರೆ, ಮಹಿಳೆಯರ ಸಂಖ್ಯೆ 6,69,417 ಇದೆ. ಆದರೆ, 80 ಸಾವಿರಕ್ಕೂ ಅಧಿಕ ಜನ ಮಾತ್ರ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೇ 6ರ ಸಂಜೆ 6 ಗಂಟೆವರೆಗೆ ಹಿರಿಯ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇದನ್ನೂ ಓದಿ: Karnataka Election 2023: ರಾಜ್ಯದ ಒಟ್ಟು ಮತದಾರರು ಎಷ್ಟು? ಮೊದಲ ಬಾರಿಗೆ ವೋಟ್‌ ಹಾಕುವವರೆಷ್ಟು?

Exit mobile version