Site icon Vistara News

Karnataka Election 2023: ಮುಂಡರಗಿ ಪಟ್ಟಣದ ಮತಗಟ್ಟೆ ಎದುರು 85ರ ಅಜ್ಜಿ ಧರಣಿ ಕುಳಿತಿದ್ದೇಕೆ?

85 year old woman hold protest in front of polling station in Mundargi

ಗದಗ, ಕರ್ನಾಟಕ: ತಾವು ಹೇಳಿದ ಗುರುತಿಗೆ ಅಧಿಕಾರಿ ಮತ ಹಾಕಲಿಲ್ಲ ಎಂದು ಆರೋಪಿಸಿರುವ 85 ವರ್ಷದ ಅಜ್ಜಿಯೊಬ್ಬಳು ಮತಗಟ್ಟೆ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ತಹಸೀಲ್ದಾರ್ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವೃದ್ಧೆ ಪಟ್ಟು ಹಿಡಿದಿದ್ದಾರೆ( protest). ವೃದ್ಧರು ಮತಚಲಾವಣೆ ವೇಳೆ ಅಧಿಕಾರಿಗಳ ನೆರವು ಪಡೆಯಬಹುದಾಗಿದೆ. ಆದರೆ, ಮತದಾರರು ಹೇಳಿದ ಗುರುತಿಗೆ ಮತವನ್ನು ಹಾಕಬೇಕಾಗುತ್ತದೆ(Karnataka Election 2023). ಇನ್ನೂ ಹೆಚ್ಚಿನ ಚುನಾವಣೆ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ಈ ಘಟನೆ ನಡೆದಿದೆ. 85 ವರ್ಷ ವಯಸ್ಸಿನ ಮುಕ್ತುಂಬೀ ದೊಡ್ಡಮನಿ ಅವರು ತಮ್ಮ ಮೊಮ್ಮಗನ ಜತೆಗೆ ವೋಟ್ ಮಾಡಲು ಆಗಮಿಸಿದ್ದರು. ತೀರಾ ವಯಸ್ಸಾದ ಕಾರಣ ಅವರು ನೆರವಿಗೆ ತಮ್ಮ ಮೊಮ್ಮಗನನ್ನು ಕರೆದುಕೊಂಡು ಬಂದಿದ್ದರು. ಆದರೆ, ಅಜ್ಜಿಯ ಜತೆಗೆ ಮೊಮ್ಮಗನನ್ನು ಅಧಿಕಾರಿಗಳು ಮತದಾನ ಕೇಂದ್ರದ ಒಳಕ್ಕೆ ಬಿಡಲಿಲ್ಲ. ಆಗ ಅಜ್ಜಿಯು ಅಧಿಕಾರಗಳ ನೆರವಿನಿಂದ ಮತ ಚಲಾಯಿಸಬೇಕಾಯಿತು.

ಇದನ್ನೂ ಓದಿ: Karnataka Election 2023: ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಸದಸ್ಯರಿಂದ ಏಕಕಾಲಕ್ಕೆ ಮತದಾನ!

ಆದರೆ, ಅಜ್ಜಿಯು ಈಗ ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾನು ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕಲಿಲ್ಲ ಎಂದು ಅಜ್ಜಿ ಆರೋಪಿಸಿದ್ದಾರೆ. ಅಧಿಕಾರಿಗಳು ಬೇರೆ ಗುರುತಿಗೆ ಮತ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ತಹಶೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಅಜ್ಜಿ ಪಟ್ಟು ಹಿಡಿದಿದ್ದಾರೆ. ಮತಗಟ್ಟೆ ಮುಂದೆಯೇ ಅಜ್ಜಿ ಧರಣಿ ಕುಳಿತಿದ್ದಾಳೆ.

Exit mobile version