ಬಳ್ಳಾರಿ: ತಲೆನೋವು ಶಮನಕ್ಕೆ ಬಳಸುವ ಮೆಂಥೋಪ್ಲಸ್ ಚಿಕ್ಕ ಡಬ್ಬಿ ನುಂಗಿ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ (Bellary News) ಕಂಪ್ಲಿ ಪಟ್ಟಣದ 5ನೇ ವಾರ್ಡ್‌ನ ಇಂದಿರಾನಗರದಲ್ಲಿ ನಡೆದಿದೆ. ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ (9ತಿಂಗಳು) ಮೃತ ಮಗು.
ಇದನ್ನೂ ಓದಿ | Anganawadi worker: ತಂಗಿಗೆ ನನ್ನ ಕೆಲಸ ಕೊಡಿ ಎಂದು ತನ್ನ ಬದುಕಿಗೆ ದುರಂತ ಅಂತ್ಯ ಹಾಡಿದ ಅಂಗನವಾಡಿ ಕಾರ್ಯಕರ್ತೆ!
ಆಟವಾಡುತ್ತಿದ್ದಾಗ ಮೆಂಥೋಪ್ಲಸ್ ಡಬ್ಬಿಯನ್ನು ಮಗು ನುಂಗಿದೆ. ನಂತರ ಉಸಿರಾಟಕ್ಕೆ ತೊಂದರೆ ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಮಗುವನ್ನು ಪೋಷಕರು ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು. ಇದ್ದ ಒಂದು ಮಗುವನ್ನೂ ಕಳೆದುಕೊಂಡಿದ್ದರಿಂದ ಪೋಷಕರ ಅಕ್ರಂದನ ಮುಗಿಲು ಮುಗಿಲುಮುಟ್ಟಿದೆ.
ಆಸ್ಪತ್ರೆಗೆ ಬರುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿತ್ತು. ಆದರೂ ಪಾಲಕರು ಕೋರಿದಾಗ, ಗಂಟಲಲ್ಲಿದ್ದ ಡಬ್ಬಿ ಹೊರ ತೆಗೆಯಲಾಯಿತು ಎಂದು ಮಕ್ಕಳ ವೈದ್ಯರು ತಿಳಿಸಿದರು.
ಕೋಪದಿಂದ ಅಜ್ಜಿಯ ಕೊಲೆ ಮಾಡಿದ, ಹೆಣ ಕಾರಿನಲ್ಲಿ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ!
ಮೈಸೂರು: ಕೆಆರ್‌ಎಸ್ ಹಿನ್ನೀರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕಿದ ಪ್ರಕರಣವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಸ್ವಂತ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ.
ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ (75) ಮೃತ ಮಹಿಳೆ. ಸುಪ್ರೀತ್ (23) ಅಜ್ಜಿಯನ್ನು ಕೊಂದ ಮೊಮ್ಮಗನಾಗಿದ್ದಾನೆ. ಮೈಸೂರು ತಾಲೂಕಿನ ಸಾಗರಕಟ್ಟೆ ಗ್ರಾಮದ ಬಳಿ ಮೇ 30ರಂದು ಶವ ಪತ್ತೆಯಾಗುವ ಮೂಲಕ ಘಟನೆ ತನಿಖೆಗೆ ಚಾಲನೆ ನೀಡಲಾಗಿತ್ತು. ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.
ಮೃತ ದೇಹದ ತಲೆ ಕೂದಲು ಹಾಗೂ ಕನ್ನಡಕದಿಂದ ಮೈಸೂರು ದಕ್ಷಿಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೇಂಟ್ ಜತೆಗೆ ಸಾಮ್ಯತೆ ಕಂಡುಬಂದಿತ್ತು. ಕೊಲೆ ಮಾಡಿದ ಮೊಮ್ಮಗನೇ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ನೀಡಿದ್ದ. ಆತನನ್ನು ವಿವರವಾದ ತನಿಖೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ.
ಇನ್ನೂ ಓದಿ | Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
ಅಜ್ಜಿ ಬೈಯುತ್ತಿದ್ದರು, ಹಾಗಾಗಿ ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಈ ಕೊಲೆಗಾರ ಮೊಮ್ಮಗ. ಮೇ 28ರಂದು ಮನೆಯಲ್ಲಿ ಮಾತಿಗೆ ಮಾತು ಬೆಳೆದು, ಬೈದ ಅಜ್ಜಿ ಸುಲೋಚನ ಅವರನ್ನು ಸುಪ್ರೀತ್ ತಳ್ಳಿದ್ದಾನೆ. ಹೊಡೆದು ಬೀಳಿಸಿ ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್‌ನಲ್ಲಿ ಹಾಕಿದ್ದ. ಶವವನ್ನು ಏನು ಮಾಡುವುದು ಎಂಬುದಕ್ಕೆ ಕೊರಿಯನ್ ವೆಬ್ ಸೀರಿಸ್ ನೋಡಿ ಪ್ರೇರಣೆ ಪಡೆದಿದ್ದಾನೆ. ಹೆಣ ಸುಟ್ಟು ಬಚಾವಾಗಲು ಯತ್ನಿಸಿದ್ದಾನೆ.
ಕಾರಿನಲ್ಲಿ ಕೆಆರ್‌ಎಸ್ ಹಿನ್ನೀರು ಪ್ರದೇಶಕ್ಕೆ ಶವ ಕೊಂಡೊಯ್ದು ಗುಂಡಿಯಲ್ಲಿ ಹಾಕಿ ಶವವನ್ನು ಸುಟ್ಟು ಹಾಕಿದ್ದಾನೆ. ಅದಕ್ಕೂ ಮುನ್ನ ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದು, ಹಾಗೇ ಪೊಲೀಸ್ ಠಾಣೆಗೂ ಹೋಗಿ ಕಂಪ್ಲೇಂಟ್ ನೀಡಿದ್ದಾನೆ!