ಬಳ್ಳಾರಿ: ಮೊಮ್ಮಗಳು ಬಿದ್ದು ಮೃತ ಪಟ್ಟ ಬಾವಿಯಲ್ಲಿಯೇ 97 ವರ್ಷದ ಅಜ್ಜಿಯೂ ಬಿದ್ದು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಕೆ.ವೀರಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ವೀರಾಪುರ ಗ್ರಾಮದ ಮಹಾಲಿಂಗಮ್ಮ(97) ಮೃತೆ. ಒಂದೂವರೆ ವರ್ಷದ ಹಿಂದೆ ಗಂಡ-ಹೆಂಡತಿ ಮಧ್ಯೆ ಜಗಳವಾಗಿ ಶೋಭಾ ಎಂಬ ಗೃಹಿಣಿ ಕೆ.ವೀರಾಪುರ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ನೊಂದಿದ್ದ ಅಜ್ಜಿ ಮಹಾಲಿಂಗಮ್ಮ ಮೊಮ್ಮಗಳ ಹತ್ತಿರ ನಾನು ಹೋಗುತ್ತೇನೆ ಎಂದು ಆಗಾಗ ಹೇಳುತ್ತಿದ್ದಳು. ಸೋಮವಾರ ಬೆಳಗ್ಗೆ ಇವರು, ಮೊಮ್ಮಗಳು ಬಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿ.ಡಿ ಹಳ್ಳಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದು, ಪಿ.ಡಿ.ಹಳ್ಳಿಯಲ್ಲಿಯೇ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case | ಮುಸ್ಲಿಂ ಪತ್ನಿ ಬಲವಂತವಾಗಿ ಗೋಮಾಂಸ ತಿನ್ನಿಸಿದಳೆಂದು ಹಿಂದೂ ಪತಿ ಆತ್ಮಹತ್ಯೆ