ಬೆಳಗಾವಿ: ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಮಹಿಳೆಯ ಕೈಯಿಂದ 6 ತಿಂಗಳ ಮಗು ಜಾರಿ ಮೋರಿಗೆ ಬಿದ್ದು ಕೊಚ್ಚಿ ಹೋದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ಬುಧವಾರ ನಡೆದಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಂಬೈ ಸಮೀಪದ ಕಲ್ಯಾಣ ಹಾಗೂ ಠಾಕೂರ್ಲಿ ರೈಲ್ವೆ ನಿಲ್ದಾಣಗಳ ನಡುವೆ ರೈಲನ್ನು ಲೋಕೊಪೈಲಟ್ ನಿಲ್ಲಿಸಿದ್ದಾರೆ. ಈ ವೇಳೆ ರೈಲಿನಿಂದ ಮಗುವಿನೊಂದಿಗೆ ಮಹಿಳೆ ಇಳಿಯಲು ಮುಂದಾಗಿದ್ದಾರೆ. ಸೇತುವೆ ಮೇಲೆ ರೈಲು ನಿಂತಿದ್ದರಿಂದ ಹಳಿ ಪಕ್ಕದಲ್ಲಿ ಒಬ್ಬರು ಹೋಗುವಷ್ಟು ಮಾತ್ರ ಜಾಗವಿತ್ತು. ಹೀಗಾಗಿ ಇಳಿದು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮಹಿಳೆ ಕೈಯಿಂದ ಮಗು ಜಾರಿ ಮೋರಿಗೆ ಬಿದ್ದಿದೆ.
ಇದನ್ನೂ ಓದಿ | Murder Case: ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಮಗು ಮೋರಿಗೆ ಬಿದ್ದು ನಾಪತ್ತೆಯಾಗಿದ್ದರಿಂದ ಮಹಿಳೆ ಅಳುತ್ತಾ ಕೂಗಿಕೊಂಡಿದ್ದಾರೆ. ಹೀಗಾಗಿ ಸ್ಥಳೀಯರು ಮತ್ತು ಪೊಲೀಸರು ಧಾವಿಸಿ ಶೋಧ ಕಾರ್ಯ ನಡೆಸಿದರು. ಘಟನೆ ನಡೆದಾಗ ಮಹಿಳೆ ತಂದೆ ಜತೆಗಿದ್ದರು. ಮಹಿಳೆ ಕೈಯಿಂದ ಮಗು ಜಾರಿ ಬೀಳುವಾಗ ವ್ಯಕ್ತಿ ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ಅವರ ಕೈಯಿಂದಲೂ ಮಗು ಜಾರಿ ಬಿದ್ದಿದೆ.
ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಚಿಕ್ಕಬಳ್ಳಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ಗಡಿಗವಾರ್ಲಹಳ್ಳಿ ನಡೆದಿದೆ. ಕೋಡಿಗಲ್ ಗ್ರಾಮದ ನೈದಮ್ಮ, ನರಸಿಂಹಪ್ಪ ದಂಪತಿ ಪುತ್ರಿ ತನುಶ್ರೀ (14) ಮೃತ ಬಾಲಕಿ.
ಇದನ್ನೂ ಓದಿ | Heart Attack: ಟ್ಯೂಷನ್ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿ ಬುಧವಾರ ಬೆಳಗ್ಗೆ ಎಂದಾಗ ತನುಶ್ರೀ ಅಸ್ವಸ್ಥಗೊಂಡಿದ್ದಳು. ಹೀಗಾಗಿ ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಕೆಂಚಾರ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಗಿದೆ.