ಬೆಂಗೂರು: ಬರೋಬ್ಬರಿ 40 ಬಾರಿ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಗೆ 12 ಸಾವಿರ ರೂ. ದಂಡ ವಿಧಿಸಿರುವ ಘಟನೆ ತಲಘಟ್ಟಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಚಾರ ನಿಯಮ ಉಲ್ಲಂಘಿಸಿ ಹೋಗುತ್ತಿದ್ದ ಬೈಕ್ ಸವಾರನನ್ನು ಪೊಲೀಸರು ಹಿಡಿದು ಪರಿಶೀಲಿಸಿದಾಗ ಭಾರಿ ಪ್ರಮಾಣ ದಂಡ (Traffic Fines) ಬಾಕಿ ಇರುವುದು ಕಂಡುಬಂದಿದೆ. ಬಳಿಕ ಅಲ್ಲಿಯೇ ದಂಡ ಕಟ್ಟಿಸಿಕೊಂಡು ಆತನನ್ನು ಬಿಡಲಾಗಿದೆ.
ಬೈಕ್ ಸವಾರ ಪದೇಪದೆ ಸಂಚಾರ ನಿಯಮ ಉಲ್ಲಂಘಿಸಿರುವುದು ಸಂಚಾರ ವಿಭಾಗದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ತಲಘಟ್ಟಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಸವಾರ ಹೋಗುತ್ತಿದ್ದಾಗ ಆತನನ್ನು ಪೊಲೀಸರು ಹಿಡಿದು ದಂಡ ವಸೂಲಿ ಮಾಡಿ, ಇನ್ನು ಮುಂದೆ ಕಡ್ಡಾಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದನ್ನೂ ಓದಿ | Road Accident : ಗೊಲ್ಲರದೊಡ್ಡಿ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು
ಗಂಡ ಬಾತ್‌ರೂಂನಲ್ಲಿ, ಹೆಂಡತಿ ಪ್ರಿಯತಮನ ಜತೆಯಲ್ಲಿ ಪರಾರಿ!
ಬೆಂಗಳೂರು: ಪತಿ ಬಾತ್‌ರೂಂನಲ್ಲಿದ್ದಾಗ ಪತ್ನಿ ಬಾಗಿಲಿಗೆ ಬೀಗ ಹಾಕಿ ಪ್ರಿಯತಮನ ಜತೆಗೆ ಪರಾರಿ (Escaped) ಆಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ (Rajarajeshwari nagar) ನಡೆದಿದೆ. ಕಾಣೆಯಾದ ಪತ್ನಿಗಾಗಿ ಠಾಣೆ ಮೆಟ್ಟಿಲೇರಿರುವ ಪತಿ ನನ್ನ ಹೆಂಡತಿಯನ್ನು ಹುಡುಕಿಕೊಡಿ (Wife missing) ಎಂದು ದೂರು ಕೊಟ್ಟಿದ್ದಾನೆ.
ರಮೇಶ್ (31) ಎಂಬಾತ ಅರ್ಪಿತಾ (25) ಎಂಬುವವರನ್ನು ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅರ್ಪಿತಾ ಕೆಲಸ ಮಾಡುತ್ತಿದ್ದಳು. ಈ ದಂಪತಿ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದರು. ಹೀಗಿರುವಾಗ ಕಳೆದ ಆಗಸ್ಟ್ 12ರಂದು ಬೆಳಗ್ಗೆ ಸುಮಾರು 6.30ರ ಸುಮಾರಿಗೆ ರಮೇಶ್ ಬಾತ್‌ರೂಂಗೆ ಹೋಗಿದ್ದಾರೆ. ಇತ್ತ ಅರ್ಪಿತಾ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾಳೆ.
ಇದನ್ನೂ ಓದಿ: Commission Politics : ರಾಜ್ಯಪಾಲರಿಗೆ ದಯಾಮರಣ ಪತ್ರ; ಕಾಮಗಾರಿಯನ್ನೇ ಮಾಡದ ಗುತ್ತಿಗೆದಾರರಿಗೆ ಕಾನೂನು ಸಂಕಷ್ಟ!
ಬಾತ್‌ರೂಂನಿಂದ ಹೊರ ಬಂದಾಗ ರಮೇಶ್ ಪತ್ನಿ ಅರ್ಪಿತ ಕಾಣದೆ ಇದ್ದಾಗ ಮನೆ ಪೂರ್ತಿ ಹುಡುಕಾಡಿದ್ದಾರೆ. ಮನೆ ಬಾಗಿಲು ತೆರಯಲು ನೋಡಿದಾಗ ಬೀಗ ಹಾಕಿರುವುದು ಗೊತ್ತಾಗಿದೆ. ಬಳಿಕ ಸ್ಥಳೀಯರ ಸಹಾಯದಿಂದ ಬಾಗಿಲು ಓಪನ್ ಮಾಡಿಸಿದ್ದಾರೆ. ಇತ್ತ ಕಾಣೆಯಾದ ಪತ್ನಿಗಾಗಿ ರಮೇಶ್ ಹುಡುಕಾಡಿ ಸುಸ್ತಾಗಿದ್ದಾರೆ.
ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಕಾರ್ತಿಕ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದಳು ಎಂದು ತಿಳಿದುಬಂದಿದೆ. ಕಡೆಗೆ ಆತನನ್ನು ವಿಚಾರಿಸಿದಾಗ ನಿಮ್ಮ ಹೆಂಡತಿ ಬಿಟಿಎಂ ಲೇಔಟ್‌ನಲ್ಲಿದ್ದಾರೆ, ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಆ ಬಳಿಕ ಆತನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ.
ಸದ್ಯ ಕಾರ್ತಿಕ್ ವಿರುದ್ಧ ರಮೇಶ್ ದೂರು ದಾಖಲಿಸಿದ್ದಾರೆ. ನನ್ನ ಹೆಂಡತಿಯನ್ನು ಕಾರ್ತಿಕ್ ಕರೆದುಕೊಂಡು ಹೋಗಿರುವ ಅನುಮಾನ ಇದೆ. ಕಾಣೆಯಾಗಿರುವ ನನ್ನ ಪತ್ನಿಯನ್ನು ಪತ್ತೆ ಮಾಡಿ ಎಂದು ರಮೇಶ್ ರಾಜರಾಜೇಶ್ವರಿ ನಗರದಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ