Site icon Vistara News

Compensation: ಕೋಮುದ್ವೇಷಕ್ಕೆ ಬಲಿಯಾಗಿದ್ದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ

Masood Fazil Jaleel and Deepak Rao

#image_title

ಮಂಗಳೂರು: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರ ಕುಟುಂಬಕ್ಕೆ ರಾಜ್ಯ ಸರ್ಕಾರ, ತಲಾ 25 ಲಕ್ಷ ರೂ. ಪರಿಹಾರ (Compensation) ಘೋಷಣೆ ಮಾಡಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್, ಫಾಝಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ | Soujanya muder case : ಧರ್ಮಸ್ಥಳದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಸುಮಾರು ಎಂಟು ಮಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಮಸೂದ್ (21) ಎಂಬ ಯುವಕ 2022ರ ಜುಲೈ 19ರಂದು ಮೃತಪಟ್ಟಿದ್ದ. ಹಾಗೆಯೇ ಅದೇ ತಿಂಗಳ ಜಲೈ 28ರಂದು ಸುರತ್ಕಲ್‌ ಮಾರುಕಟ್ಟೆ ಬಳಿ ಫಾಝಿಲ್‌ನನ್ನು ಹತ್ಯೆ ಮಾಡಲಾಗಿತ್ತು. 2022ರ ಡಿಸೆಂಬರ್‌ 24ರಂದು ಸುರತ್ಕಲ್‌ನಲ್ಲಿ ಅಂಗಡಿ ಮಾಲೀಕ ಜಲೀಲ್‌ ಹತ್ಯೆಯಾಗಿತ್ತು. ಈ ಪ್ರಕರಣಗಳಿಗಿಂತ ಮೊದಲು 2018ರ ಜನವರಿ 3ರಂದು ಸುರತ್ಕಲ್‌ನಲ್ಲಿ ದೀಪಕ್‌ ರಾವ್‌ ಕೊಲೆಯಾಗಿತ್ತು.

Exit mobile version