Site icon Vistara News

Crime News : ಕೇಕ್ ತರಲು ತೆರಳಿದ್ದವನನ್ನು ಇರಿದು ಕೊಂದರು

crime new

crime new

ಬಳ್ಳಾರಿ: ವರ್ಷದ ಅಂತ್ಯ ದಿನದಂದೇ ಕ್ಷುಲಕ ಕಾರಣಕ್ಕೆ ಚಾಕು ಇರಿದು ಯುವಕನೊಬ್ಬನನ್ನು ಕೊಲೆ ಮಾಡಿದ (Crime News ) ಘಟನೆ ನಗರದ ವಡ್ಡರಬಂಡೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಹೋದಾಗ ಬೇಕರಿವೊಂದರ ಬಳಿ ಎರಡು ಗುಂಪು ನಡುವೆ ನಡೆದ ಗಲಾಟೆಯಲ್ಲಿ ಆರ್.ಕೆ.ಕಾಲೋನಿಯ ನಿವಾಸಿ ಸೈಯದುಲ್ಲಾ (24) ಮೃತಪಟ್ಟಿದ್ದಾನೆ. ಮತ್ತೋರ್ವ ಬಾಪೂಜಿ ನಗರದ ನಿವಾಸಿ ರಜಾಕ್ ವಲಿ (26) ತೀವ್ರ ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿತ್ತು. ಈ ವಿಚಾರವಾಗಿ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬ್ರೂಸ್ ಪೇಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ಗರ್ಲ್‌ ಫ್ರೆಂಡ್‌ಗೆ ಫೋನ್‌ ಮಾಡಿ ಟಾರ್ಚರ್‌ ಕೊಟ್ಟ ಗೆಳೆಯನಿಗೆ ಮಚ್ಚಿನೇಟು!

ಬೆಂಗಳೂರು: ಕಳೆದ ಡಿಸೆಂಬರ್ 19 ರಂದು ನಾಯಂಡಹಳ್ಳಿಯ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಕೆಲ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮಾರಕಾಸ್ತ್ರಗಳಿಂದ ಯುವಕನ ತಲೆಗೆ ಹಲ್ಲೆ ಮಾಡಿ, ಕೆಳಗೆ ಬಿದ್ದವನ ಮೇಲೆ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದು (Attempt To Murder) ಕಾಲ್ಕಿತ್ತಿದ್ದರು.

ಇದನ್ನೂ ಓದಿ : Road Accident: ಬಂಟ್ವಾಳದಲ್ಲಿ ಬೈಕ್ ಅಪಘಾತ; ರಂಗಭೂಮಿ ಕಲಾವಿದ ಗೌತಮ್ ಸಾವು

ಇರಿತಕ್ಕೊಳಗಾದ ಕಾರ್ತಿಕ್ ಎಂಬಾತ ರಕ್ತದ ಮಡುವಿನಲ್ಲೇ ಹೇಗೋ ಬೈಕ್ ರೈಡ್ ಮಾಡಿಕೊಂಡು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದ. ಪ್ರಾಣಾಪಾಯದಿಂದ ಪಾರಾಗಿದ್ದ. ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಚಂದ್ರಾಲೇಔಟ್ ಪೊಲೀಸರು ಕಾರ್ತಿಕ್‌ನಿಂದ ಹೇಳಿಕೆ ಪಡೆದಿದ್ದರು. ಆ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಧನುಷ್ ಹಾಗೂ ಶಾಬುದ್ದೀನ್ ಬಂಧಿತ ಆರೋಪಿಗಳು.

ಧನುಷ್ ಹಾಗೂ ಹಲ್ಲೆಗೊಳಗಾದ ಕಾರ್ತಿಕ್ ಒಂದೇ ಏರಿಯಾದವರು. ಜತೆಗೆ ಪರಿಚಯಸ್ಥರಾಗಿದ್ದ ಇವರು ಸ್ನೇಹಿತರು ಕೂಡ ಆಗಿದ್ದರು. ಈ ಕಾರ್ತಿಕ್‌ ಇತ್ತೀಚೆಗೆ ಧನುಷ್ ಪ್ರೀತಿ ಮಾಡುತ್ತಿದ್ದ ಯುವತಿಯ ಫೋನ್‌ ನಂಬರ್ ಕಲೆಕ್ಟ್ ಮಾಡಿಕೊಂಡಿದ್ದ. ಬಳಿಕ ಆಕೆಗೆ ಫೋನ್ ಮಾಡಿ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದ.ಕಾರ್ತಿಕ್‌ ಟಾರ್ಚರ್‌ ಅನ್ನು ಸಹಿಸಿಕೊಳ್ಳಲು ಆಗದೆ ಈ ವಿಚಾರವನ್ನು ಪ್ರಿಯಕರ ಧನುಷ್‌ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಳು.

ಈ ವಿಷಯ ತಿಳಿಯುತ್ತಿದ್ದಂತೆ ಧನುಷ್‌ ಕೆಂಡವಾಗಿದ್ದ. ತಾನು ಪ್ರೀತಿಸುತ್ತಿರುವ ಹುಡುಗಿಗೇ ಫೋನ್‌ ಮಾಡಿ ಕಾಟ ಕೊಡುತ್ತಿರುವ ಕಾರ್ತಿಕ್‌ಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ್ದ. ಕಾರ್ತಿಕ್‌ಗೆ ಬುದ್ಧಿ ಕಲಿಸಬೇಕೆಂದು ಧನುಷ್ ತನ್ನ ಸ್ನೇಹಿತ ಶಾಬುದ್ದೀನ್‌ ಸೇರಿಕೊಂಡು ಪ್ಲ್ಯಾನ್‌ ವೊಂದನ್ನು ಮಾಡಿದ್ದ. ಪ್ಲ್ಯಾನ್‌ನಂತೆ ಡಿಸೆಂಬರ್ 19 ರಂದು ಮನೆಯಲ್ಲಿದ್ದ ಕಾರ್ತಿಕ್‌ನನ್ನು ಮಾತಾಡುವ ನೆಪದಲ್ಲಿ ಕರೆಸಿಕೊಂಡಿದ್ದರು. ಬಳಿಕ ಧನುಷ್ ಹಾಗೂ ಶಾಬುದ್ದೀನ್ ಇಬ್ಬರು ಈ ಮೊದಲೇ ತಂದಿದ್ದ ಚಾಕು, ಚೂರಿ ತೆಗೆದು ಕಾರ್ತಿಕ್‌ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದರು.

ಆದರೆ ಕಾರ್ತಿಕ್‌ ನಾಸೀಬು ಚೆನ್ನಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರೂ, ರಕ್ತದ ಮಡುವಿನಲ್ಲೇ ಹೋಗಿ ಆಸ್ಪತ್ರೆಗೆ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಚಂದ್ರಾಲೇಔಟ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳಿಸಿದ್ದಾರೆ.

Exit mobile version