ಬೆಂಗಳೂರು: ರೈಲ್ವೆ ಪೊಲೀಸ್ ಫೋರ್ಸ್(ಆರ್‌ಪಿಎಫ್) ಸಿಬ್ಬಂದಿ ಸಮಯೋಚಿತ ನಿರ್ಧಾರ ಮಾಡದೇ ಇದ್ದಲ್ಲಿ ಕೆ. ಆರ್. ಪುರಂ ರೈಲ್ವೆ ನಿಲ್ದಾಣದಲ್ಲಿ ನೂರಾರು ಜನರೆದುರೇ ವ್ಯಕ್ತಿಯೊಬ್ಬ ರೈಲಿಗೆ ಸಿಕ್ಕಿ ದುರ್ಮರಣಕ್ಕೀಡಾಗುತ್ತಿದ್ದ. ಆರ್‌ಪಿಎಫ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಿದೆ.
ಕೆ.ಆರ್. ಪುರಂ ನಿಲ್ದಾಣದಲ್ಲಿ ರೈಲೊಂದು ಆಗಮಿಸಬೇಕಿತ್ತು, ಜನರೆಲ್ಲರೂ ಕಾಯುತ್ತಿದ್ದರು. ಇದೇ ವೇಳೆ ವ್ಯಕ್ತಿಯೋರ್ವ ಹಳಿಯನ್ನು ದಾಟಲು ಪ್ಲಾಟ್‌ಫಾರಂನಿಂದ ಕೆಳಕ್ಕೆ ಇಳಿದಿದ್ದಾನೆ. ಈ ವೇಳೆಗೆ ರೈಲು ಆಗಮಿಸುತ್ತಿದ್ದದ್ದನ್ನು ನೋಡಿ ಮತ್ತೆ ಮೇಲೆ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಎತ್ತರ ಕಟ್ಟೆಯ ಮೇಲೆ ಹತ್ತಲಾಗದೆ ಹಳಿಯ ಮೇಲೆ ಬಿದ್ದಿದ್ದಾನೆ.
ಈ ವೇಳೆಗೆ ತುಸು ದೂರದಲ್ಲಿ ಸಾಗುತ್ತಿದ್ದ ಆರ್‌ಪಿಎಫ್ ಎಎಸ್‌ಐ ಜಿ.ಡಿ. ರವಿ ಈ ದೃಶ್ಯವನ್ನು ಕಂಡು ಅತ್ತಕಡೆಗೆ ಓಡಿದ್ದಾರೆ. ಕೆಲವೇ ಕ್ಷಣದಲ್ಲಿ ಅತ್ತ ಕಡೆಗೆ ಧಾವಿಸಿ 40 ವರ್ಷ ಆಸುಪಾಸಿನ ವ್ಯಕ್ತಿಯನ್ನು ಎಳೆದು ಪ್ಲಾಟ್‌ಫಾರಮ್‌ಗೆ ಬಿಟ್ಟಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದ ಇತರೆ ಆರ್‌ಪಿಎಫ್ ಸಿಬ್ಬಂದಿಯೂ ಸಹಾಯ ಮಾಡಿದ್ದಾರೆ.
ವ್ಯಕ್ತಿಯನ್ನು ಮೇಲೆತ್ತಿ ಕೆಲವೇ ಸೆಕೆಂಡ್‌ನಲ್ಲಿ ಚೆನ್ನೈ-ಮೈಸೂರು ಎಕ್ಸ್‌ಪ್ರೆಸ್ (12007) ರೈಲು ಅದೇ ಹಳಿಯ ಮೇಲೆ ಸಾಗಿದೆ. ಈ ಇಡೀ ದೃಶ್ಯ ರೈಲ್ವೆ ಪ್ಲಾಟ್‌ಫಾರಮ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಮಯಪ್ರಜ್ಞೆ ಹಾಗೂ ತನ್ನ ಜೀವವನ್ನೂ ಲೆಕ್ಕಿಸದೆ ವ್ಯಕ್ತಿಯನ್ನು ಬದುಕಿಸಿದ ಆರ್‌ಪಿಎಫ್ ಎಎಸ್‌ಐ ರವಿ ಹಾಗೂ ಇನ್ನಿತರ ಸಿಬ್ಬಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮೇಲೆ ಬಿದ್ದು, ಅಪಾಯದಿಂದ ಪಾರಾಗಿರುವ ಘಟನೆ ಕಂಡುಬಂದಿದೆ. ರೈಲು ಬರುವ ಕೆಲವೇ ಕ್ಷಣಗಳಿಗೂ ಮುನ್ನ ಆರ್‌ಪಿಎಫ್ ಸಿಬ್ಬಂದಿಯಿಂದ ಪ್ರಯಾಣಿಕನ ರಕ್ಷಣೆ ಮಾಡಲಾಗಿದೆ,
ವ್ಯಕ್ತಿಯನ್ನು ರಕ್ಷಣೆ ಮಾಡಿದ ಒಂದೆರಡು ಸೆಕೆಂಡ್‌ನಲ್ಲೆ ಅದೇ ಹಳಿಯ ಮೇಲೆ ಚೆನ್ನೈ-ಮೈಸೂರು (12007) ರೈಲು ಸಾಗಿದೆ. ಈ ಇಡೀ ದೃಶ್ಯ ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಮಯಪ್ರಜ್ಞೆ ಹಾಗೂ ತನ್ನ ಪ್ರಾಣವನ್ನೂ ಲೆಕ್ಕಿಸದೆ ಆರ್‌ಪಿಎಫ್ ಎಎಸ್‌ಐ ರವಿ ಹಾಗೂ ಇನ್ನಿತರೆ ಸಿಬ್ಬಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಪಾರ್ಸೆಲ್ ನೀತಿಯಲ್ಲಿ ಸುಧಾರಣೆ ಶೀಘ್ರ, ಮೊಬೈಲ್, ಸ್ಯಾನಿಟೈಸರ್ ಸಾಗಣೆಗೆ ಅವಕಾಶ