Site icon Vistara News

Harangi Dam: ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಪ್ರವಾಸಿಗ

Harangi Dam Water

ಕೊಡಗು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ (Harangi Dam) ಮುಂಭಾಗದ ಸೇತುವೆ ಬಳಿ ನಡೆದಿದೆ. ಬೆಂಗಳೂರು ಮೂಲದ ಸಂದೀಪ್ ನೀರು ಪಾಲಾದ ಪ್ರವಾಸಿಗ. ಮೂವರು ಸ್ನೇಹಿತರೊಂದಿಗೆ ಆಗಮಿಸಿದ್ದ ಹಾರಂಗಿಗೆ ಸಂದೀಪ್ ಆಗಮಿಸಿದ್ದ. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಪ್ರವಾಸಿಗ ನೀರಿಗೆ ಬಿದ್ದಿದ್ದಾನೆ. ಸಂದೀಪ್ ಹುಡುಕಾಟದಲ್ಲಿ ತೊಡಗಿರುವ ಅಗ್ನಿಶಾಮಕ ದಳ ತೊಡಗಿದೆ.

ಮಕ್ಕಳಿಗೆ ಬಲವಂತವಾಗಿ ವಿಷ ಕುಡಿಸಿ ಕಿಡಿಗೇಡಿಗಳು ಪರಾರಿ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಂತಿದ್ದ ಮಕ್ಕಳಿಗೆ ಬಲವಂತದಿಂದ ವಿಷ (poisoning) ಕುಡಿಸಿ ಪರಾರಿ (Assault Case) ಆಗಿದ್ದಾರೆ.

ಕಳೆದ ಮಂಗಳವಾರ (ಆಗಸ್ಟ್‌ 1) ಚಾಕುಚೂರಿ ಹಿಡಿದು ಬಂದ ಇಬ್ಬರು ಕಿಡಿಗೇಡಿಗಳು 12 ವರ್ಷದ ಬಾಲಕಿಗೆ ವಿಷ ಕುಡಿಸಿ ಪರಾರಿ ಆಗಿದ್ದರು. ಇಂದು ಬೆಳಗ್ಗೆ ಮತ್ತೆ 15 ವರ್ಷ ವಯಸ್ಸಿನ ಬಾಲಕಿಗೆ ಬಲವಂತದಿಂದ ಎಳೆದುಕೊಂಡು ಹೋಗಿ ವಿಷ ಕುಡಿಸಿ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: Self Harming : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ

ಯಾರು ಇಲ್ಲದ ವೇಳೆ ಮನೆ ಬಳಿ ಬಂದು ವಿಷ ನೀಡಿದ್ದಾರೆ. ಇಬ್ಬರು ಬಾಲಕಿಯರು ಅಕ್ಕ- ತಂಗಿಯರಾಗಿದ್ದು, ದೇವನಹಳ್ಳಿ ಮಾನಸ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಜುಲೈ 27 ರಂದು ಅಣ್ಣೇಶ್ವರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಂತರ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಷ ಕುಡಿದು ಅಸ್ವಸ್ಥಗೊಂಡಿರುವ ಬಾಲಕಿಯ ತಾಯಿ ಅಣ್ಣೇಶ್ವರ ಗ್ರಾಪಂ ಸದಸ್ಯೆ ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version