Site icon Vistara News

Cabinet Meeting: ವೈದ್ಯಕೀಯ ಅಭ್ಯರ್ಥಿಗಳ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆ ರದ್ದು! ರಾಜ್ಯ ಸಂಪುಟ ಒಪ್ಪಿಗೆ

7th Pay Commission

CM Siddaramaiah To Hike 27% Salary Of Karnataka Government Employees; Here Is 7th Pay Commission Salary Calculation

ಬೆಂಗಳೂರು: ಎಂಬಿಬಿಎಸ್‌ ಮತ್ತು ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳು (Medical Candidates) ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಹಾಗೂ ನಗರ ಸರ್ಕಾರಿ ಆಸ್ಪತ್ರೆಗಳಲ್ಲಿ (Rural Service) ಸೇವೆ ಮಾಡಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರವು ಕೈ ಬಿಡಲು ಮುಂದಾಗಿದೆ. ಈ ಕುರಿತಾದ ಕಾನೂನು ತಿದ್ದುಪಡಿ ಮಾಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (cm Siddaramaiah) ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ನಿರ್ಧರಿಸಲಾಗಿದೆ. ಸಂಪುಟದ ನಿರ್ಣಯಗಳ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಸಚಿವ ಎಚ್ ಕೆ ಪಾಟೀಲ್ (H K Patil) ಅವರು, ಗ್ರಾಮೀಣ ಮತ್ತು ನಗರದ ಪ್ರದೇಶ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕು ಎಂಬ ನಿಯಮವನ್ನು ಕೈ ಬಿಡಲಾಗುತ್ತಿದೆ. ಖಾಲಿ ಹುದ್ದೆಗಳಿಗೆ ಅಗತ್ಯವಿರುವಷ್ಟು ಮಾತ್ರ ಕಡ್ಡಾಯ ಸೇವೆಯನ್ನು ಪಡೆಯಲಾಗುವುದು. ಸುಗ್ರಿವಾಜ್ಞೆ ಮೂಲಕ ವಿಧೇಯಕ ಅನುಮೋದನೆ ಪಡೆಯಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ವಿವರಿಸಿದರು.

ನೈರುತ್ಯ ಮುಂಗಾರಿನಲ್ಲಿ ಮಳೆ ಕೊರತೆಯಿಂದ ಹಲವು ತಾಲೂಕು ಬರ ಘೋಷಣೆಯಾಗಿದೆ. ೧೯೫ ತಾಲೂಕುಗಳನ್ನು ಬರಪೀಡಿತ ತಾಲೂಕು ಅಂತ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ೨೧ ತಾಲೂಕುಗಳನ್ನು ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಲು ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫೀಕ್ಸ್ ಮಾಡಲಾಗಿದ್ದು, ಡಿಸೆಂಬರ್ 4 ರಿಂದ ಅಧಿವೇಶನಕ್ಕೆ ಕರೆಯಲು ಸಂಪುಟ ಒಪ್ಪಿಗೆ ನೀಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಡಿಸೆಂಬರ್ 4 ರಿಂದ 15 ರವರೆಗೆ ಅಧಿವೇಶನ ನಡೆಯಿಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಂಪುಟ ಸಭೆಯ ಕುರಿತು ಸಚಿವ ಎಚ್‌ ಕೆ ಪಾಟೀಲ್ ನೀಡಿದ ಮಾಹಿತಿ ಹೀಗಿದೆ…

ಬರದಿಂದಾಗಿ ಒಟ್ಟು ಕೃಷಿ ತೋಟಾಗಾರಿಕೆ ನಷ್ಟ 33,770 ಕೋಟಿ ರೂ. ಕೃಷಿ ತೋಟಗಾರಿಕೆ ನಷ್ಟಕ್ಕೆ ೪೪೧೪ ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ೫೩೨೬ ಕೋಟಿ ಒಟ್ಟೂ ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ ರಾಜ್ಯ ಮಂತ್ರಿಗಳು ಕೇಂದ್ರ ಮಂತ್ರಿಗಳನ್ನು ಒತ್ತಾಯ ಮಾಡುವುದಕ್ಕೆ ಪದೇ ಪದೇ ಸಮಯ ಕೇಳ್ತಿದ್ದಾರೆ.

೨೦೦೮-೦೯ ರಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕಾನೂನು ತರಲಾಗಿತ್ತು. ೧೦೦ ಗ್ರಾಮ ನ್ಯಾಯಾಲಯದ ಸ್ಥಾಪನೆಗೆ ಅನುಮತಿ ನೀಡಿದ ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ ನೀಡಿದೆ. 100 ಗ್ರಾಮ ಕೋರ್ಟ್ ಗಳ ಸ್ಥಾಪನೆಗೆ ಅಂದಾಜು ಲೆಕ್ಕಾಚಾರ ೨೫-೩೦ ಕೋಟಿ ಬರಬಹುದು. ಕೃಷಿ ಇಲಾಖೆಯಿಂದ ರಸಗೊಬ್ಬರ ದಾಸ್ತಾನಿಗೆ ೨೦೦ ಕೋಟಿ ರೂ ಬಂಡವಾಳ ಸಾಲ ತೆಗೆದುಕೊಳ್ಳಲು ಸರ್ಕಾರಿ ಖಾತರಿಗೆ ಅನುಮತಿ ನೀಡಲಾಗಿದೆ.

೧೧ ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸಾಮಾಗ್ರಿ ಒದಗಿಸಲು ೨೦ ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಾಹನಗಳ ಸಿಎನ್‌ಜಿ ಮತ್ತು ಗೃಹ ಬಳಕೆಯ ಪಿಎನ್.ಜಿ ಬಳಕೆಗೆ ರಾಜ್ಯ ಅನಿಲ ನೀತಿ ರೂಪಿಸಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯುಷನ್ ನೆಟವರ್ಕ್ ಪಾಲಿಸಿ ಗೆ ಅನುಮೋದನೆ ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪ ಅಸಂಖ್ಯಾತರಿಗೂ ವಿಸ್ತರಣೆ ಮಾಡಿದ ಆದೇಶಕ್ಕೆ ಸಂಪುಟ ನಿರ್ಧಾರ ಮಾಡಿದೆ.

ಅನ್ನಭಾಗ್ಯ ಕುರಿತು ಆಹಾರ ಇಲಾಖೆಯಿಂದ ಅಕ್ಕಿ ಒದಗಿಸುವ ವ್ಯವಸ್ಥೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಈಗ ಇರುವ ಪದ್ದತಿ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಐದು ಕೆಜಿ ಅಕ್ಕಿ ಕೊಡಬೇಕಾ ಅಥವಾ ನೀಡಲಾಗುತ್ತಿರುವ ಹಣ ಮುಂದುವರಿಸಬೇಕಾ ಎಂಬ ಚರ್ಚೆ ನಡೆಯಿತು. ಅಂತಿಮವಾಗಿ ಸದ್ಯದ ಪದ್ದತಿಯನ್ನೇ ಮುಂದುವರಿಸಲು ನಿರ್ಧರಿಸಲಾಯಿತು.

ನಗರಾಭಿವೃದ್ಧಿ ಇಲಾಖೆಯಿಂದ ಎನ್.ಜಿ.ಟಿ ಅನುಸರಣೆಗೆ ತ್ವರಿತ ಪರಿಸರ ಪರಿಹಾರ ನಿಧಿ ಅಡಿಯಲ್ಲಿ ೧೧೦ ಮಲ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪನೆ ಮಾಡಲು ಒಪ್ಪಿಗೆ ನೀಡಲಾಗಿದೆ. ೫೦,೦೦೦ ಕಡಿಮೆ ಇರುವ ಪಟ್ಟಣಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ. ೪೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸೆಸ್ ಪೂಲ್ ವೆಹಿಕಲ್ ಖರೀದಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version