ಬೆಂಗಳೂರು: ವಿಧಾನಸಭೆ ಚುನಾವಣೆಯ (Karnataka Election) ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ(AAP) ತನ್ನ ಕರ್ನಾಟಕದ ಘಟಕವನ್ನು ವಿಸರ್ಜಿಸಿ, ಹೊಸ ತಂಡವನ್ನು ನಿಯೋಜನೆ ಮಾಡಲು ಮುಂದಾಗಿದೆ ಎಂದು ಪಕ್ಷದ ಕರ್ನಾಟಕದ ಉಸ್ತುವಾರಿಯನ್ನು ಹೊತ್ತಿರುವ ದಿಲಿಪ್ ಪಾಂಡೆ ಅವರು ಹೇಳಿದ್ದಾರೆ. ಹಳೆ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಲಾಗಿದೆ. ಶೀಘ್ರವೇ ಹೊಸ ಪದಾಧಿಕಾರಿಗಳೊಂದಿಗೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಇತ್ತೀಚೆಗಷ್ಟೇ ಪಂಜಾಬ್‌ನಲ್ಲೂ ಗೆದ್ದು ಅಧಿಕಾರವನ್ನು ಹೊಂದಿದೆ. ಹಾಗೆಯೇ, ಮೊನ್ನೆಯಷ್ಟೇ ಮುಕ್ತಾಯವಾದ ಗುಜರಾತ್ ಚುನಾವಣೆಯಲ್ಲೂ ಆಪ್ ಶೇ.10ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡು ಗಮನ ಸೆಳೆದಿದೆ. ಈಗ ಸದ್ಯದಲ್ಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಚುನಾವಣೆ ಗೆಲ್ಲುವ ಗುರಿಯೊಂದಿಗೆ ಆಮ್ ಆದ್ಮಿ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲಿದೆ. ಅಸ್ತಿತ್ವದಲ್ಲಿರುವ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳ ತಂಡವನ್ನು ವಿಸರ್ಜಿಸಲಾಗಿದೆ. ಆಪ್ ಕರ್ನಾಟಕ ರಾಜ್ಯ ಘಟಕವು ಕಳೆದ 5 ತಿಂಗಳಿಂದ ಬಲವರ್ಧನೆ ಪ್ರಕ್ರಿಯೆಯಲ್ಲಿದೆ. ರಾಜ್ಯಾದ್ಯಂತ ಗ್ರಾಮ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಪಾಂಡೆ ತಿಳಿಸಿದರು.
ಇದನ್ನೂ ಓದಿ | Shivamogga News | ರಾಜ್ಯದ 224 ಕ್ಷೇತ್ರಗಳಲ್ಲೂ ಆಪ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು: ಭಾಸ್ಕರ್ ರಾವ್