ಬೆಂಗಳೂರು: ಆಮ್ ಆದ್ಮಿ ಪಕ್ಷವನ್ನು ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷ ಎಂದು ಘೋಷಣೆ ಮಾಡಿರುವುದು, ಕರ್ನಾಟಕದ ಚುನಾವಣೆ ಹೊಸ್ತಿಲಲ್ಲಿ ಆ ಪಕ್ಷದ ವಿಶ್ವಾಸವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಪಕ್ಷದ ಸ್ಥಾನ ಸಿಕ್ಕಿರುವುದರಿಂದಾಗಿ ಮುಖ್ಯವಾಗಿ ಮತಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹೆಸರು ಪ್ರಾಮುಖ್ಯತೆ ಸೇರಿ ಅನೇಕ ಸೌಲಭ್ಯ ಪಡೆಯಲಿದೆ.
ಇದು ಪ್ರಚಾರ ಸಮಯದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲೂ ಅನುಕೂಲವಾಗುತ್ತದೆ. ಈಗಾಗಲೆ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಈ ಮೂಲಕ ಹೆಚ್ಚಿನ ಮತಗಳು ಹಾಗೂ ಕೆಲವು ಸ್ಥಾನಗಳನ್ನು ಪಡೆಯುವ ಪ್ರಯತ್ನದಲ್ಲಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕ ಹಿ೯ನ್ನೆಲೆಯಲ್ಲಿ ರಾಜ್ಯ ಆಪ್ ಅಧ್ಯಕ್ಷ ರಾಜ್ಯಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷ 10 ವರ್ಷ ಈ ಗುರಿ ಪೂರೈಸುತ್ತದೆ ಎಂದು ಕನಸಿನಲ್ಲಿ ಕೂಡ ಎಣಿಸಿರಲಿಲ್ಲ. ಹಣಬಲ, ಅಧಿಕಾರದ ಬಲ ಇಲ್ಲದಿದ್ದರೆ ಚುನಾವಣೆ ಗೆಲ್ಲಲಾಗದು ಎಂಬ ಮಾತಿತ್ತು. ಚುನಾವಣೆ ಗೆಲ್ಲಬಹುದು ಎಂದು ಆಮ್ ಆದ್ಮಿ ಪಕ್ಷ ಕಳೆದ 10 ವರ್ಷದಲ್ಲಿ ತೋರಿಸಿಕೊಟ್ಡಿದೆ.
ಸುಸಜ್ಜಿತ ಆಸ್ಪತ್ರೆ, ಶಾಲೆ ಸರ್ಕಾರ ನಿರ್ವಹಿಸಬಹುದು ಎಂದು ಆಪ್ ತೋರಿಸಿಕೊಟ್ಟಿದೆ. ಇದು ಆಮ್ ಆದ್ಮಿ ಪಕ್ಷದ ಗೆಲುವು. ಇದಕ್ಕೆ ಕರ್ನಾಟಕದ ಕಾನೂನು ಘಟಕ ಸಾಕಷ್ಟು ಶ್ರಮ ವಹಿಸಿದೆ. ಗುಜರಾತ್ ಚುನಾವಣೆಯಲ್ಲಿ ಎಲ್ಲ ಷರತ್ತು, ನಿಯಮ ಪಾಲಿಸಿದ್ರೂ 4 ತಿಂಗಳಿಂದ ರಾಷ್ಟ್ರೀಯ ಸ್ಥಾನಮಾನ ಘೋಷಣೆಯಾಗಿರಲಿಲ್ಲ. ಇದರ ಹಿಂದೆ ಬಿಜೆಪಿ ಪಕ್ಷದ ಷಡ್ಯಂತ್ರ ಇದೆ. ಆದ್ರೆ ಸುಪ್ರೀಂಕೋರ್ಟ್ ನಮ್ಮ ಪರ ತೀರ್ಪನ್ನು ಎತ್ತಿ ಹಿಡಿದಿದೆ. ದೇಶದಲ್ಲಿ 6 ಪಕ್ಷಕ್ಕೆ ಮಾತ್ರ ರಾಷ್ಟ್ರೀಯ ಸ್ಥಾನಮಾನವಿದೆ. ಇಂದು ಆಮ್ ಆದ್ಮಿ ಪಕ್ಷ ಈ ಸ್ಥಾನಕ್ಕೆ ತಲುಪಿರುವುದಕ್ಕೆ ಜನರ ಬೆಂಬಲ, ಸಹಕಾರವಿದೆ. ದೆಹಲಿಯಲ್ಲಿರುವ ಸರ್ಕಾರ ಕರ್ನಾಟಕದಲ್ಲಿ ಬರಲಿ ಎಂಬ ವಿಶ್ವಾಸವಿದೆ ಎಂದರು.
ರಾಜ್ಯ ಚುನಾವಣಾ ಸಿದ್ದತೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಆಮ್ ಆದ್ಮಿ ಪಕ್ಷದ ಮೇಲೆ ಜನರಿಗೆ ನೀರಿಕ್ಷೆಗಳಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಆಮ್ ಆದ್ಮಿ ಪಕ್ಷ ಘೋಷಿಸಿದೆ. ನಾವು ಅಧಿಕಾರಕ್ಕೆ ಬಂದ್ರೆ ನಮ್ಮ ಪ್ರಣಾಳಿಕೆ ಅನುಷ್ಠಾನ ಮಾಡ್ತೀವಿ. ನಮ್ಮ ಮೇಲಿರುವ ನಂಬಿಕೆ ಉಳಿಸಿಕೊಳ್ತೀವಿ ಎಂಬ ಭರವಸೆಯಿದೆ.
ರಾಷ್ಟ್ರೀಯ ಸ್ಥಾನಮಾನದ ಮೂಲಕವಾಗಿ ನಮ್ಮಗೊಂದು ಕೀರಿಟ ಸಿಕ್ಕಿದೆ. ಇಷ್ಟುದಿನ ಜನರಿಗೆ ಮೂರು ಪಕ್ಷ ಆಯ್ಕೆ ಅಂತ ಇದ್ರೂ ಅದು ಮೂರು ಪಕ್ಷ ಒಂದೇಯಾಗಿತ್ತು. ಈಗ ಜನರಿಗೆ ನಿಜವಾದ ಪರ್ಯಾಯ ಪಕ್ಷ ಸಿಕ್ಕಿದೆ. ಜನ ಪರ ಕಾರ್ಯಗಳಿಗೆ ಜನ ಮತ ನೀಡ್ತಾರೆ, ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕೆಲ ಪಕ್ಷಗಳು ಕೆಲವು ಸ್ಥಾನಮಾನ ಕಳೆದುಕೊಂಡು ರಾಜ್ಯ ಪಕ್ಷವಾಗಿ ಉಳಿದಿವೆ. ಇಂತಹ ಸಮಯದಲ್ಲಿ ಆಮ್ ಆದ್ಮಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಇದು ಸಾಮಾನ್ಯ ಜನರ ಗೆಲುವು. ಕೇಜ್ರಿವಾಲ್ ಅವರ ಶ್ರಮ ಇದಕ್ಕೆ ಕಾರಣ.
ಭ್ರಷ್ಟಾಚಾರ ಇಲ್ಲದ ಸರ್ಕಾರ ನಮ್ಮದು, ಹೀಗಾಗಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗಿವೆ. ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷವಾಗಿ ಘೋಷಿಸಿದೆ. ದೆಹಲಿ ಹಾಗೂ ಪಂಜಾಬ್ ನಲ್ಲಿ ಮಾಡಿರುವ ಸಾಧನೆಯೇ ಇದಕ್ಕೆ ಕಾರಣ. ಜನಸಾಮಾನ್ಯರು ಆಮ್ ಆದ್ಮಿ ಜೊತೆ ಕೈಜೋಡಿಸಿದ್ರೆ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಇದನ್ನೂ ಓದಿ: AAP National Party: ಹೋರಾಟದ ಹಾದಿ ಸಾಗಿ ರಾಷ್ಟ್ರೀಯ ಪಕ್ಷವಾದ ಆಪ್, ‘ಆಮ್ ಆದ್ಮಿ’ಯನ್ನು ಇದು ತಲುಪಿದ್ದು ಹೇಗೆ?