ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಲಕಿನ ಬೈರಾಪುರ ಗ್ರಾಮದ ಸಮೀಪದಲ್ಲಿ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಪತ್ತೆಯಾಗಿದೆ (Abondoned child). ತಾಯಿಯೇ ಮಗುವನ್ನು ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಅಥವಾ ಆಕೆಗೆ ಸಂಬಂಧಿಸಿ ಬೇರೆಯವರು ಇಟ್ಟು ಹೋಗಿರುವ ಸಾಧ್ಯತೆಗಳಿವೆ.
ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹಸುಗೂಸನ್ನು ನೋಡಿದ ಬೈರಾಪುರ ಗ್ರಾಮಸ್ಥರು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಸಿಡಿಪಿಐ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪಂಚಾಯಿತಿ ಪಿಡಿಒ ತಕ್ಷಣ ಆಗಮಿಸಿ ಮಗುವನ್ನು ರಕ್ಷಣೆ ಮಾಡಿದರು. ಹೆರಿಗೆಯಾಗಿ ಕೇವಲ ಒಂದು ದಿನ ಆಗಿರಬಹುದು ಎಂದು ಹೇಳಲಾಗಿದೆ. ಮಗುವನ್ನು ಇಟ್ಟು ಹೋದ ಕೂಡಲೇ ಯಾರೋ ಗಮನಿಸಿದ್ದರಿಂದ ಮಗು ಯಾವುದೇ ಅಪಾಯಕ್ಕೆ ಗುರಿಯಾಗದೆ ಪ್ರಾಣ ಉಳಿಸಿಕೊಂಡಿದೆ.
ಮಗುವನ್ನು ಅಂಬ್ಯುಲೆನ್ಸ್ ಮೂಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ನಡುವೆ, ಆರೋಗ್ಯ ಮತ್ತು ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಮಗುವಿನ ಪತ್ತೆಗೆ ಮುಂದಾಗಿದೆ. ಮಗುವಿನ ತಾಯಿ ಯಾಕೆ ಮಗುವನ್ನು ಬಿಟ್ಟು ಹೋದಳು, ಅಕ್ರಮ ಗರ್ಭದಿಂದ ಹುಟ್ಟಿದ ಮಗುವೇ? ಬೇರೆ ಏನಾದರೂ ಸಮಸ್ಯೆ ಇದೆಯೇ? ಯಾರಾದರೂ ಒತ್ತಡ ಹಾಕಿ ಮಗುವನ್ನು ಬಿಟ್ಟು ಹೋಗುವಂತೆ ಮಾಡಿದರೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಸಿರಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Children drowned | ನಿರ್ಮಾಣ ಹಂತದ ಕಟ್ಟಡದ ಸಂಪ್‌ನಲ್ಲಿ ಬಿದ್ದು ಇಬ್ಬರು ಬಾಲಕರ ದುರ್ಮರಣ