Site icon Vistara News

Abvp protest  | ರಿಸಲ್ಟ್‌ ಬಂದ್ರೂ ಸಿಗದ ಮಾರ್ಕ್ಸ್‌ ಕಾರ್ಡ್‌; ಬೀದಿಗಿಳಿದು ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ

avbp protest

ಉಡುಪಿ: ಪರೀಕ್ಷೆ ಫಲಿತಾಂಶ ಪ್ರಕಟಗೊಂಡು ತಿಂಗಳು ಕಳೆದರೂ ಮಾರ್ಕ್ಸ್‌ ಕಾರ್ಡ್‌ ದೊರೆತಿಲ್ಲ. ಜತೆಗೆ ಕೆಲವು ವಿಭಾಗಗಳ ಫಲಿತಾಂಶ ಪ್ರಕಟವಾಗಿಲ್ಲವೆಂದು ಮಂಗಳೂರು ವಿಶ್ವವಿದ್ಯಾಲಯದ ನಡೆ ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ (Abvp protest) ನಡೆಸಿದರು.

ಶನಿವಾರ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ಕುಂದಾಪುರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನಗರದ ಭಂಡಾರ್ಕಾರ್ಸ್ ಕಾಲೇಜು, ಬಿ.ಬಿ.ಹೆಗ್ಡೆ ಕಾಲೇಜು, ಕೋಟೇಶ್ವರ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜು ಸೇರಿದಂತೆ ಶಾರದಾ ಕಾಲೇಜು ಬಸ್ರೂರು, ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಷನಲ್ ಸರ್ಕಾರಿ ಪದವಿ ಕಾಲೇಜು ಬಾರ್ಕೂರು ಹಾಗೂ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | ಎಬಿವಿಪಿಗೆ ಬೆಣ್ಣೆ, ಸಿಎಫ್‌ಐ ಕಾರ್ಯಕರ್ತರಿಗೆ ಸುಣ್ಣ, ಯಾಕೆ ಹೀಗೆ ಎಂದು ಪ್ರಶ್ನಿಸಿದ ಕ್ಯಾಂಪಸ್‌ ಫ್ರಂಟ್‌

ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ತರಗತಿಗಳಿಗೆ ನಡೆದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಬಂದು ತಿಂಗಳು ಕಳೆದಿದೆ. ಆದರೆ, ಮಾರ್ಕ್ಸ್‌ ಕಾರ್ಡ್‌ ಕೈಸೇರಿಲ್ಲ. ಜತಗೆ ಈಗಾಗಲೇ ನಡೆಸಲಾದ ಪರೀಕ್ಷಗಳ ಕೆಲ ವಿಭಾಗಗಳ ಫಲಿತಾಂಶವು ಪ್ರಕಟವಾಗಿಲ್ಲವೆಂದು ಎವಿಬಿಪಿ ಕುಂದಾಪುರ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ ತಿಳಿಸಿದ್ದಾರೆ.

ಇದರಿಂದ ಕ್ಯಾಂಪಸ್‌ನಿಂದ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಿಗೆ ಉದ್ಯೋಗಕ್ಕೆ ಸೇರುವ‌ ಮುನ್ನ ಅಂಕಪಟ್ಟಿ ನೀಡಲು ಆಗದೇ, ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆಗಸ್ಟ್ 3ರಂದು ಪ್ರಕಟವಾದ ಪದವಿ ತರಗತಿಗಳ ಕೆಲವು ಫಲಿತಾಂಶದಲ್ಲಿ ದೋಷವಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ ಎಂದಿದ್ದಾರೆ.

ವಿಶ್ವವಿದ್ಯಾನಿಲಯದಿಂದ ಈ ಬಗ್ಗೆ ಸ್ಪಷ್ಟಿಕರಣ ಹಾಗೂ ವಿದ್ಯಾರ್ಥಿಗಳಿಗೆ ಆಗಸ್ಟ್ 11ರ ಒಳಗಾಗಿ ನ್ಯಾಯ ಒದಗಿಸದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಗುವುದು ಜಯಸೂರ್ಯ ಶೆಟ್ಟಿ ಎಚ್ಚರಿಕೆ ನೀಡಿದರು. ಇದೇ ವೇಳೆ ಕುಂದಾಪುರದ ಉಪವಿಭಾಗಾಧಿಕಾರಿ ಕೆ. ರಾಜು ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ಇದನ್ನೂ ಓದಿ | ಶಿಕ್ಷಕರ ಕೊರತೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Exit mobile version