Site icon Vistara News

ACB raid | ಭ್ರಷ್ಟಾಚಾರಿಗೆ ಕೊನೆಯ ಚಾಟಿಯೇ ದಾಳಿ: ಎಸಿಬಿ ರೇಡ್‌ ಮಾಡೋದ್ಯಾಕೆ? ಇಲ್ಲಿದೆ ವಿವರ

ACB Raid

ಬೆಂಗಳೂರು: ಯಾವುದೇ ಅಧಿಕಾರಿ, ನೌಕರನ ಮೇಲೆ ಎಸಿಬಿ ಅಧಿಕಾರಿಗಳು ಯಾವ ಆಧಾರದಲ್ಲಿ ದಾಳಿ (ACB) raid ನಡೆಸುತ್ತಾರೆ ಎಂಬ ಕುತೂಹಲ ಜನ ಸಾಮಾನ್ಯರಲ್ಲಿ ಮೂಡೋದು ಸಹಜ. ಅಧಿಕಾರಿ ಅಥವಾ ನೌಕರನ ಮೇಲೆ ನಿರಂತರವಾಗಿ ಆರೋಪಗಳು ಬಂದರೆ ಆ ಮಾಹಿತಿ ಆಧರಿಸಿ ಎಸಿಬಿ (Anti Corruption Bureau ) ಅಧಿಕಾರಿಗಳು ಗುಪ್ತವಾಗಿ ಮಾಹಿತಿ ಕಲೆ ಹಾಕುತ್ತಾರೆ. ಸರಕಾರಿ ನೌಕರನ ಮೇಲೆ ದೂರು ಬಂದ ಬಳಿಕ ಮೊದಲು ಆ ದೂರನ್ನು ಪರಿಶೀಲನೆ ಮಾಡಿ ಮೊದಲು ಆತ ತಪ್ಪಿತಸ್ಥನೋ ಅಥವಾ ದೂರುದಾರ ಸುಮ್ಮನೆ ಆರೋಪ ಮಾಡುತ್ತಿದ್ದಾನೆಯೇ ಎಂಬುದರ ಬಗ್ಗೆ ತನಿಖೆ ಆಗುತ್ತದೆ.

ನಂತರ ಭ್ರಷ್ಟತೆಯ ಆರೋಪ ಹೊತ್ತ ಅಧಿಕಾರಿ ಎಲ್ಲೆಲ್ಲಿ ಕೆಲಸಗಳನ್ನ ಮಾಡುತ್ತಿದ್ದ, ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಆತನಿಗಿದ್ದ ಆಸ್ತಿ, ಆದಾಯದ ಮಾಹಿತಿ, ಈ ಹಿಂದೆ ಕಾರ್ಯನಿರ್ವಹಿಸಿದಲ್ಲಿ ಭ್ರಷ್ಟಾಚಾರದ ಆರೋಪವಿತ್ತಾ, ಭ್ರಷ್ಟಾಚಾರ ಮಾಡಿದ್ದರೆ ಆ ಲಂಚದ ಹಣದಲ್ಲಿ ಆತ ಏನೇನು ಆಸ್ತಿ ಖರೀದಿ ಮಾಡಿದ್ದಾನೆ, ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿಗಳೆಷ್ಟು? ಷೇರು ಮಾರುಕಟ್ಟೆಯಲ್ಲಿ ಆತ ಹೂಡಿಕೆ ಮಾಡಿದ್ದಾನಾ? ಬೇನಾಮಿ‌ ಹೆಸರಿನಲ್ಲಿ ಮಾಡಿರುವ ಆಸ್ತಿಗಳೆಷ್ಟು? ಪಿತ್ರಾರ್ಜಿತವಾಗಿ ಬಂದ ಆಸ್ತಿಗಳೆಷ್ಟು? ಸದ್ಯ ಕಾರ್ಯ ನಿರ್ವಹಿಸುತ್ತಿರುವಲ್ಲಿ ಆತನ ವರ್ಷದ ವರಮಾನವೆಷ್ಟು? ಅದನ್ನ ಯಾವ ಉದ್ದೇಶಕ್ಕಾಗಿ ನೀಡಿದ್ದು ಹಾಗೂ ನೀಡಿದವರು ಯಾರು? ಪತ್ನಿಯ ಹೆಸರಿನಲ್ಲಿರುವ ಆಸ್ತಿ , ಬ್ಯಾಂಕ್ ಅಕೌಂಟ್, ಆಕೆಯ ಹಿನ್ನಲೆ ಹೀಗೆ ಸುಧೀರ್ಘ ಅವಧಿಗಳಲ್ಲಿ ಮಾಹಿತಿಯನ್ನ ಕಲೆ ಹಾಕಲಾಗುತ್ತದೆ.

ಇದನ್ನೂ ಓದಿ | ACB raid | ದಾಳಿಗೊಳಗಾದವರ ಮನೆಯಲ್ಲಿ‌ ಸಿಗುತ್ತಿದೆ ಕೆಜಿ ಕೆಜಿ ಚಿನ್ನ, ಹತ್ತಾರು ಸೈಟ್‌, ಬಂಗಲೆ!

ತನ್ನ ಹಿಂದೆ ‘ಸ್ಪೈ’ ಇದ್ದಾನೆ ಎನ್ನುವ ವಿಚಾರ ಭ್ರಷ್ಟ ಅಧಿಕಾರಿಗೆ ಅಥವಾ ನೌಕರನಿಗೆ ತಿಳಿಯದ ಹಾಗೆ ಕಾರ್ಯ ನಿರ್ವಹಿಸಲಾಗುತ್ತದೆ. ಈ ಕಾರ್ಯ ಒಂದು ತಿಂಗಳಾದರೂ ಆಗಬಹುದು ಅಥವಾ ಒಂದು ವರ್ಷಗಳಾದರೂ ಆಗಬಹುದು. ಇಷ್ಟೆಲ್ಲಾ ನಡೆಸಿದ ಬಳಿಕ ಕೊನೆಯದಾಗಿ ಬಳಸುವ ಅಸ್ತ್ರವೇ ದಾಳಿ. ನ್ಯಾಯಾಲಯದ ವಿಚಾರಣೆ ವಾದ ವಿವಾದ ಹೊರತುಪಡಿಸಿದರೆ ಎಸಿಬಿ ಮಟ್ಟಿಗಿನ ಕಾರ್ಯಾಚರಣೆ ಇಷ್ಟು. ನಂತರ ಅವರನ್ನ ಬಂಧನ ಮಾಡುವುದು ಸ್ಪಷ್ಟನೆ ತೆಗೆದುಕೊಳ್ಳುವ ಕೆಲಸಗಳು ನಡೆಯುತ್ತದೆ. ದುಡ್ಡು ಕೊಡುವ ರೀತಿಯಲ್ಲಿ ಅಧಿಕಾರಿಗಳನ್ನ ಟ್ರ್ಯಾಪ್ ಮಾಡುವ ಕಾರ್ಯಾಚರಣೆ ಮಾಡಲಾಗುತ್ತದೆ. ಇದಕ್ಕೆಂದೇ ಎಸಿಬಿಯಲ್ಲಿದೆ ಸ್ಪೆಷಲ್ ಟೀಂ ಇರುತ್ತದೆ. ಅಧಿಕಾರಿಯ ವಿರುದ್ದ ನಿರಂತರ ಮೂಕರ್ಜಿಗಳ ಮುಖಾಂತರ ದೂರುಗಳು ಬಂದರೆ ಸ್ವತಃ ಎಸಿಬಿ ಅಧಿಕಾರಿಗಳೆ ಟ್ರ್ಯಾಪ್ ಕಾರ್ಯಾಚರಣೆಗೆ ಇಳಿಯುತ್ತಾರೆ.

ಕೃಷಿ ಹೆಸರಿನಲ್ಲಿ ಭ್ರಷ್ಟತೆಯನ್ನ ಮರೆ ಮಾಚುವ ಅಧಿಕಾರಿಗಳು

ಕೃಷಿಗೆ ತೆರಿಗೆ ವಿನಾಯಿತಿ ಇರುವುದೇ ಭ್ರಷ್ಟಾಚಾರಿಗಳಿಗೆ ಭಂಡ ಧೈರ್ಯ. ದಾಳಿ ನಡೆಸಿದಾಗ ನಮಗೆ ಕೃಷಿಯಿಂದ ಬಂದ ಆಸ್ತಿ ಎಂಬ ಸಬೂಬು ನೀಡುವುದು ಮಾಮುಲಿ. ಭ್ರಷ್ಟಾಚಾರ ಮಾಡಲೆಂದೆ ಕೆಲವರು ಕೃಷಿ ಭೂಮಿಯನ್ನ ಖರೀದಿ ಮಾಡುತ್ತಾರೆ. ಅದರಲ್ಲಿ‌ ಏನೂ ಕೆಲಸ ನಡೆಯದಿದ್ದರೂ ಕೃಷಿ ಭೂಮಿಯನ್ನ ತೋರಿಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ತೊಡಗುತ್ತಾರೆ. ಹೀಗಾಗಿ ಎಲ್ಲ ರೀತಿಯಲ್ಲೂ ಪರಿಶೀಲನೆ ನಡೆಸಿ ಬಳಿಕ ದಾಳಿ ನಡೆಸಲಾಗುತ್ತದೆ.

ಇದನ್ನೂ ಓದಿ | ACB raid |ಬಿಡಿಎ ಗಾರ್ಡನರ್‌ ಕೂಡ ಕೋಟಿ ಕೋಟಿ ಕುಳ: 48 ಸಾವಿರ ಸಂಬಳ ಪಡೆಯುವವನ ಆಸ್ತಿ ಎಷ್ಟು ನೋಡಿ!

Exit mobile version