ಬೆಂಗಳೂರು : ಒಟ್ಟು 21 ಜನ ಭ್ರಷ್ಟ ಕುಳಗಳಿಗೆ ಎಸಿಬಿ (ACB raid) ಅಧಿಕಾರಿಗಳು ಬೆವರಿಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ಲಗ್ಗೆ ಇಟ್ಟು ಮೂಲೆ ಮೂಲೆ ತಡಕಾಡಿದ್ದಾರೆ. ಈ ವೇಳೆ ಎಸಿಬಿ ಸಿಬ್ಬಂದಿಯೇ ಶಾಕ್ ಆಗುವಷ್ಟು ಸಂಪತ್ತು ಪತ್ತೆಯಾಗಿದೆ. ಸರಕಾರಿ ಅಧಿಕಾರಿಯಾಗಿರುವ ಒಬ್ಬರ ಮನೆಯಲ್ಲಿ ಚಿನ್ನ, ಬೆಳ್ಳಿ ಸಿಕ್ಕರೆ ಮತ್ತೊಬ್ಬರ ಮನೆಯಲ್ಲಿ ಕಂತೆ ಕಂತೆ ನೋಟು ಕಾಣಿಸಿದೆ. ಇದೀಗ ಹಣವನ್ನೇ ಹೊದ್ದು ಮಲಗಿದ್ದ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ ಎಸಿಬಿ (ACB raid) ಅಧಿಕಾರಿಗಳು.
80 ಸ್ಥಳಗಳಿಗೆ ಲಗ್ಗೆ ಇಟ್ಟಿದ್ದ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ ಒಬ್ಬೊಬ್ಬರ ಮನೆಯಲ್ಲೂ ಕೆಜಿಗಟ್ಟಲೆ ಚಿನ್ನ, ಕಂತೆ ಕಂತೆ ಹಣ, ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿರುವುದು ಗೊತ್ತಾಗಿದೆ.
ಇದನ್ನೂ ಓದಿ | ACB raid | ದಾಳಿಯಲ್ಲಿ ಬಗೆದಷ್ಟು ಹಣ, ಆಭರಣ, ದಂಗಾದ ಅಧಿಕಾರಿಗಳು
ಬಾಗಲಕೋಟೆ ಆರ್.ಟಿ ಒ ಅಧಿಕಾರಿ ಯಲ್ಲಪ್ಪ ಪಡಶಾಲಿ ಮನೆಯಲ್ಲಿ ಎಸಿಬಿ ಅಧಿಕಾರಿಗಳ ದಾಳಿ ವೇಳೆ ಅತ್ಯಂತ ಬೆಲೆ ಬಾಳುವ ಮದ್ಯ ದೊರೆತಿದೆ. ಲೋ ಬ್ಯ್ರಾಂಡ್‌ನಿಂದ ಹೈ ಬ್ಯ್ರಾಂಡ್‌ನವರೆಗೆ ಮದ್ಯ ಸ್ಟಾಕ್ ಇದ್ದು, ಬರೋಬ್ಬರಿ ೩೦ ಲೀಟರ್ ಲಿಕ್ಕರ್ ಪತ್ತೆಯಾಗಿದೆ.
ಬಿ.ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ಚಿನ್ನಾಭರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಕ್ಕಳ ಹೆಸರಲ್ಲಿ ನಿಪ್ಪಾಣಿಯಲ್ಲಿ ಏಳು ಎಕರೆ ಜಮೀನನ್ನು ಪವಾರ್ ಹೊಂದಿದ್ದಾನೆ. ಪುತ್ರನ ಹೆಸರಲ್ಲಿ ಜವಳಿ ಕಾರ್ಖಾನೆ ನಿರ್ಮಾಣಕ್ಕೆ ಹೂಡಿಕೆ ಮಾಡಿದ್ದು, ನಿಪ್ಪಾಣಿಯಲ್ಲಿ ಹೆಂಡತಿ ಹೆಸರಲ್ಲಿ ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡಿದ್ದಾನೆ. ಬೆಳಗಾವಿಯಲ್ಲಿ ತಮ್ಮ ಹೆಸರಿನಲ್ಲಿ ಎರಡೂವರೆ ಕೋಟಿ ರೂ. ಮೌಲ್ಯದ ಮನೆ, ಮೂರು ಕಾರು, ಮೂರು ಬೈಕ್ ಹೊಂದಿದ್ದಾರೆ. ದಾಳಿ ವೇಳೆ ಜಕ್ಕೇರಿ ಹೊಂಡದ ಮನೆಯಲ್ಲಿ ಅರ್ಧ ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಸುಮಾರು 900 ಗ್ರಾಂನ 50 ಲಕ್ಷ ಮೌಲ್ಯದ ಚಿನ್ನ, 8.5 ಲಕ್ಷ ನಗದು ಪತ್ತೆಯಾಗಿದೆ. ಲಾಕರ್‌ನಲ್ಲಿದ್ದ ಚಿನ್ನಾಭರಣ ಕಂಡು ಎಸಿಬಿಗಳು ದಂಗಾಗಿದ್ದಾರೆ. ಶನಿವಾರವೂ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.
ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರ ಮಂಜುನಾಥ್ ಮನೆಯಲ್ಲಿ 5 ಕೋಟಿಗೂ ಅಧಿಕ ಮೊತ್ತದ ಆಸ್ತಿ ದಾಖಲೆ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ದಾಖಲೆ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ | ACB raid | ಭ್ರಷ್ಟಾಚಾರಿಗೆ ಕೊನೆಯ ಚಾಟಿಯೇ ದಾಳಿ: ಎಸಿಬಿ ರೇಡ್ ಮಾಡೋದ್ಯಾಕೆ? ಇಲ್ಲಿದೆ ವಿವರ