Site icon Vistara News

ಬೆಂಗಳೂರು, ಹಾಸನ, ಕೊಪ್ಪಳ ಸೇರಿ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಎಸಿಬಿ ಬೇಟೆ

acb attack

ಬೆಂಗಳೂರು/ಹಾಸನ/ಕೊಪ್ಪಳ: ರಾಜ್ಯದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರು, ಹಾಸನ, ಕೊಪ್ಪಳ ಸೇರಿದಂತೆ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿತು.

ಮುನ್ನೂರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಡೆ ಭ್ರಷ್ಟರ ವಿರುದ್ಧ ತನಿಖೆ ಚುರುಕುಗೊಳಿಸಿತು. 21 ಸರ್ಕಾರಿ ಅಧಿಕಾರಿಗಳ ನಿವಾಸಕ್ಕೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹೊಂದಿರುವ ಬಗ್ಗೆ ಈ ತನಿಖೆ ನಡೆಯುತ್ತಿದೆ.

ಎಸಿಬಿ ದಾಳಿಗೆ ಗುರಿಯಾಗಿರುವ ಅಧಿಕಾರಿಗಳ ಪಟ್ಟಿ

1.ಭೀಮಾ ರಾವ್ ವೈ ಪವಾರ್, ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್. ಬೆಳಗಾವಿ.
2.ಹರೀಶ್.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ. ಉಡುಪಿ.
3.ರಾಮಕೃಷ್ಣ ಎಚ್ .ವಿ. ,AEE.ಮೈನರ್ ನೀರಾವರಿ. ಹಾಸನ.
4.ರಾಜೀವ್ ಪುರಸಯ್ಯ ನಾಯಕ್,ಸಹಾಯಕ ಇಂಜಿನಿಯರ್.PWD. ಕಾರವಾರ.
5.ಬಿ ಆರ್ ಬೋಪಯ್ಯ,ಜೂನಿಯರ್ ಇಂಜಿನಿಯರ್.ಪೊನ್ನಂಪೇಟೆ ಜಿಲ್ಲಾ ಪಂಚಾಯತ್.
6 .ಮಧುಸೂಧನ್. ಜಿಲ್ಲಾ ನೋಂದಣಾಧಿಕಾರಿ.IGR ಕಛೇರಿ. ಬೆಳಗಾವಿ.
7.ಪರಮೇಶ್ವರಪ್ಪ.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ. ಹೂವಿನಹಡಗಲಿ.
8.ಯಲ್ಲಪ್ಪ ಎನ್ ಪಡಸಾಲಿ .RTO.ಬಾಗಲಕೋಟೆ.
9.ಶಂಕರಪ್ಪ ನಾಗಪ್ಪ ಗೋಗಿ.ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ .ಬಾಗಲಕೋಟೆ.
10 .ಪ್ರದೀಪ್ ಎಸ್ ಆಲೂರ್.ಪಂಚಾಯತ್ ಗ್ರೇಡ್ ಎರಡು ಕಾರ್ಯದರ್ಶಿ.RDPR .ಗದಗ.
11.ಸಿದ್ದಪ್ಪ ಟಿ .ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು.
12.ತಿಪ್ಪಣ್ಣ ಪಿ ಸಿರಸಗಿ.ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್.
13.ಮುರುತುಂಜಯ ಚೆನ್ನಬಸಯ್ಯ ತಿರಾಣಿ.ಸಹಾಯಕ ಕಂಟ್ರೋಲರ್.ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ಬೀದರ್.
14.ಮೋಹನ್ ಕುಮಾರ್.ಕಾರ್ಯನಿರ್ವಾಹಕ ಇಂಜಿನಿಯರ್. ನೀರಾವರಿ .ಚಿಕ್ಕಬಳ್ಳಾಪುರ ಜಿಲ್ಲೆ.

15. ಶ್ರೀಧರ್. ಜಿಲ್ಲಾ ನೋಂದಣಾಧಿಕಾರಿ ಕಾರವಾರ .

16.ಮಂಜುನಾಥ್ ಜಿ.ನಿವೃತ್ತ ಇಇ. PWD.

17.ಶಿವಲಿಂಗಯ್ಯ. ಗುಂಪು C. ಬಿಡಿಎ.

18.ಉದಯ ರವಿ .ಪೊಲೀಸ್ ಇನ್ಸ್‌ಪೆಕ್ಟರ್.ಕೊಪ್ಪಳ.

19.ಬಿ. ಜಿ.ತಿಮ್ಮಯ್ಯ.ಕೇಸ್ ವರ್ಕರ್.ಕಡೂರು ಪುರಸಭೆ.

20.ಚಂದ್ರಪ್ಪ ಸಿ ಹೋಳೇಕರ್.UTP ಕಛೇರಿ. ರಾಣೆಬೆನ್ನೂರು.

21.ಜನಾರ್ದನ್.ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ). ಬೆಂಗಳೂರು.

ನಿವೃತ್ತಿ ಅಂಚಿನಲ್ಲಿದ್ದ ಹಿರಿಯ ಅಧಿಕಾರಿ ಎಸಿಬಿ ಬಲೆಗೆ

ಬೆಳಗಾವಿಯ ಲೋಕೋಪಯೋಗಿ ಇಲಾಖೆ ಅಧಿಕಾರಿ ಮೇಲೆ ದಾಳಿ ನಡೆದಿದ್ದು, ಈ ಹಿರಿಯ ಅಧಿಕಾರಿ ನಿವೃತ್ತಿಯ ಕೊನೆ ದಿನಕ್ಕೆ ಸನಿಹದಲ್ಲಿದ್ದರು.

PWD ಬೆಳಗಾವಿ ಅಧೀಕ್ಷಕ ಬಿ.ವೈ ಪವಾರ್ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಇವರು ಇದೇ ಜೂನ್‌ 30ಕ್ಕೆ ನಿವೃತ್ತರಾಗಲಿದ್ದರು.

ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ನಿಪ್ಪಾಣಿ ಮನೆ, ಬೋರಗಾಂವಿನಲ್ಲಿರುವ ಕಾರ್ಖಾನೆ ಮೇಲೂ ದಾಳಿ ನಡೆದಿದೆ. ಬಿ.ವೈ ಪವಾರ್‌ಗೆ ಸೇರಿದ ಮನೆ, ಕಚೇರಿ ಸೇರಿ ಐದು ಕಡೆ ದಾಳಿ ಆಗಿದೆ.

ಬೆಂಗಳೂರಿನಲ್ಲೂ ಎಸಿಬಿ ದಾಳಿ

ಬೆಂಗಳೂರಿನಲ್ಲಿ ಬಿಡಿಎ ಗಾರ್ಡನರ್ ಶಿವಲಿಂಗಯ್ಯರ ಕೋಣನಕುಂಟೆ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ.

ಬನಶಂಕರಿಯ ಬಿಡಿಎ ಕಚೇರಿಯ ಎಇಇ ಜೊತೆ ಸಹಾಯಕರಾಗಿ ಅವರು ಕೆಲಸ ನಿರ್ವಹಿಸುತ್ತಿದ್ದರು.

ನಗರದ ಬಸವೇಶ್ವರನಗರ, ಕ್ರೆಸೆಂಟ್ ರಸ್ತೆ ಹಾಗೂ ಉತ್ತರಹಳ್ಳಿ ಭಾಗದಲ್ಲಿ ಎಸಿಬಿ ದಾಳಿ ನಡೆದಿದೆ. ಪಿಡಬ್ಲ್ಯುಡಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ರ ಬಸವೇಶ್ವರ ನಗರದಲ್ಲಿರೋ ಮನೆ ಮೇಲೆ‌ ದಾಳಿ ನಡೆಯಿತು. ಕ್ರೆಸೆಂಟ್ ರಸ್ತೆಯಲ್ಲಿರುವ ನಿವೃತ್ತ ಲ್ಯಾಂಡ್ ರೆಕಾರ್ಡ್ ಆಫೀಸರ್ ಜನಾರ್ಧನ್ ಮನೆ ಮೇಲೆ ದಾಳಿ ಮುಂದುವರಿದಿದೆ.

Exit mobile version