Site icon Vistara News

Karnataka: ಜನರಿಗೆ ಕಾನೂನು ಸೇವೆ; ದೇಶದಲ್ಲೇ ಕರ್ನಾಟಕ ನಂ.1, ಟಾಪ್‌ 5 ಪಟ್ಟಿಯಲ್ಲಿ ದಕ್ಷಿಣ ಭಾರತದ 4 ರಾಜ್ಯಗಳು

high court gives bail to rape accused boy

ನವದೆಹಲಿ: ಜನರಿಗೆ ಕಾನೂನು ಸೇವೆ ಒದಗಿಸುವುದರಲ್ಲಿ (Access To Justice) ದೇಶದಲ್ಲೇ ಕರ್ನಾಟಕ (Karnataka) ಅಗ್ರಸ್ಥಾನಿಯಾಗಿದೆ. ಜತೆಗೆ, ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿವೆ ಎಂದು ಇಂಡಿಯಾ ಜಸ್ಟೀಸ್ ರಿಪೋರ್ಟ್ 2022 (IJR) ಹೇಳಿದೆ. ಮಂಗಳವಾರ ಐಜೆಆರ್ ರಿಪೋರ್ಟ್ ಬಿಡುಗಡೆ ಮಾಡಲಾಗಿದ್ದು, ದಿಲ್ಲಿ ಮತ್ತು ಚಂಡೀಗಢ ಹೊರತುಪಡಿಸಿ ಬೇರೆ ಯಾವುದೇ ರಾಜ್ಯವಾಗಲೀ, ಕೇಂದ್ರಾಡಳಿತ ಪ್ರದೇಶವಾಗಲೀ ತಮ್ಮ ವಾರ್ಷಿಕ ವೆಚ್ಚದಲ್ಲಿ ಶೇ.1ರಷ್ಟನ್ನೂ ನ್ಯಾಯಾಂಗದ ಮೇಲೆ ವೆಚ್ಚ ಮಾಡುವುದಿಲ್ಲ. ಹಾಗಾಗಿ, ಹೈಕೋರ್ಟ್‌ಗಳಲ್ಲಿ ಜಡ್ಜ್ ಖಾಲಿ ಹುದ್ದೆಗಳು ಶೇ.30ರಷ್ಟಿದೆ ಎಂದು ತಿಳಿಸಿದೆ.

ತಲಾ 1 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು, ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶವು ನಂತರದ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಒಂದು ಕೋಟಿಗೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ 7 ರಾಜ್ಯಗಳಿವೆ. ಈ ಪೈಕಿ ಸಿಕ್ಕಿಮ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಹಾಗೂ ತ್ರಿಪುರಾ ರಾಜ್ಯಗಳಿವೆ.

ಐಜೆಆರ್, 2019ರಲ್ಲಿ ಟಾಟಾ ಟ್ರಸ್ಟ್ಸ್ ಆರಂಭಿಸಿದ ಉಪಕ್ರಮವಾಗಿದೆ. 2022ರ ಡಿಸೆಂಬರ್‌ವರೆಗೆ ದೇಶದ ಪ್ರತಿ 10 ಲಕ್ಷ ಜನಕ್ಕೆ 19 ನ್ಯಾಯಾಧೀಶರಿದ್ದಾರೆ. 4.8 ಕೋಟಿ ಪ್ರಕರಣಗಳು ವಿಚಾರಣಗೆ ಬಾಕಿ ಇವೆ. 1987ರ ಆರಂಭದಲ್ಲಿ ಕಾನೂನು ಆಯೋಗವು ಪ್ರತಿ 10 ಲಕ್ಷ ಮಂದಿಗೆ 50 ನ್ಯಾಯಾಧೀಶರು ಇರಬೇಕು ಎಂದು ಸಲಹೆ ನೀಡಿತ್ತು.

ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳು, ಬಜೆಟ್ ಹಂಚಿಕೆಗಳು, ಮೂಲಸೌಕರ್ಯ, ಮಾನವ ಸಂಪನ್ಮೂಲಗಳು, ಕಾನೂನು ನೆರವು, ಕಾರಾಗೃಹಗಳ ಸ್ಥಿತಿ, ಪೊಲೀಸ್ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಕಾರ್ಯನಿರ್ವಹಣೆಯಂತಹ ವಿವಿಧ ನಿಯತಾಂಕಗಳ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕವನ್ನು ಐಜೆಆರ್ ಗುರುತಿಸಿದೆ.

ಕಡಿಮೆ ಬಜೆಟ್‌ ಒದಗಿಸುವುದರಿಂದ ಇಡೀ ನ್ಯಾಯಾಂಗ ವ್ಯವಸ್ಥೆಯ ಪರಿಣಾಮ ಬೀರಿದೆ. ದಿಲ್ಲಿ ಮತ್ತು ಚಂಡೀಗಢ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳು ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮ್ಮ ವಾರ್ಷಿಕ ವೆಚ್ಚದ ಪೈಕಿ ಶೇ.1ರಷ್ಚೂ ವೆಚ್ಚ ಮಾಡುವುದಿಲ್ಲ.

ಪೊಲೀಸ್, ಬಂದಿಖಾನೆ ಸಿಬ್ಬಂದಿ, ಕಾನೂನು ನೆರವು ಮತ್ತು ನ್ಯಾಯಾಂಗ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಿರುವುದು ಮತ್ತೊಂದು ಸಮಸ್ಯೆಯಾಗಿದೆ. 140 ಕೋಟಿ ಜನರಿಗೆ ಭಾರತದಲ್ಲಿ ಕೇವಲ 20,076 ಜನರಿದ್ದಾರೆ. ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ.22ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಹೈಕೋರ್ಟ್‌ ಜಡ್ಜ್ ಖಾಲಿ ಹುದ್ದೆಗಳ ಪ್ರಮಾಣ ಶೇ.30ರಷ್ಟಿದೆ.

ಇದನ್ನೂ ಓದಿ: Digitization of Judiciary | ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ಚಿಂತನೆ: ಸಚಿವ ಜೆ.ಸಿ.ಮಾಧುಸ್ವಾಮಿ

ಕಳೆದ ದಶಕದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ದ್ವಿಗುಣವಾಗಿದ್ದರೂ, ಪೊಲೀಸರಲ್ಲಿ ಕೇವಲ ಶೇ.11.75 ರಷ್ಟಿದೆ. ಸುಮಾರು ಶೇ.29 ರಷ್ಟು ಅಧಿಕಾರಿ ಹುದ್ದೆಗಳು ಖಾಲಿ ಇವೆ. ಪೊಲೀಸ್ ಮತ್ತು ಜನಸಂಖ್ಯೆಯ ಅನುಪಾತವು ಲಕ್ಷಕ್ಕೆ 152.8 ಆಗಿದೆ. ಅಂತರಾಷ್ಟ್ರೀಯ ಮಾನದಂಡವು 222 ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version