Site icon Vistara News

Accident Case | 16 ಜನರಿದ್ದ ಕ್ರೂಸರ್‌ ಪಲ್ಟಿ; ಮೂವರು ಗಂಭೀರ, 13 ಜನರಿಗೆ ಸಣ್ಣಪುಟ್ಟ ಗಾಯ

bagalakote accident

ಬಾಗಲಕೋಟೆ: ಗ್ರಾಮೀಣ ಕ್ರೀಡಾಕೂಟ ಮುಗಿಸಿ ವಾಪಸಾಗುತ್ತಿದ್ದಾಗ ಬೀಳಗಿ ತಾಲೂಕಿನ ಶಿರಗುಪ್ಪಿ ಬಳಿ ರಸ್ತೆ ಬದಿಯ ಬೋರ್ವೆಲ್‌ಗೆ ಡಿಕ್ಕಿ ಹೊಡೆದ ಕ್ರೂಸರ್‌ (Accident Case) ಪಲ್ಟಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, ೧೩ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಿರಗುಪ್ಪಿ ಗ್ರಾಮದ ಹತ್ತಿರ ಅಪಘಾತ ಸಂಭವಿಸಿದ್ದು, ಚಾಲಕ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಕ್ರೂಸರ್‌ನಲ್ಲಿ ಒಟ್ಟು ೧೬ ಯುವಕರು ಇದ್ದು, ಎಲ್ಲರೂ ಕಾತರಕಿ ಗ್ರಾಮದವರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡವರಿಗೆ ಕುಂದರಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕುಂದರಗಿ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ೬ ಗ್ರಾಮ ಪಂಚಾಯಿತಿಗಳನ್ನೊಳಗೊಂಡ ಗ್ರಾಮೀಣ ಕ್ರೀಡಾಕೂಟ ಇದಾಗಿತ್ತು. ಕ್ರೀಡಾಕೂಟ ಮುಗಿಸಿ ವಾಪಸಾಗುವಾಗ ಈ ಅವಘಡ ಸಂಭವಿಸಿದೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಪ್ಪ ಭೂಸನ್ನವರ ಕ್ರೂಸರ್ ಚಾಲಕ ಕಂ ಮಾಲೀಕರಾಗಿದ್ದಾರೆ. ಕ್ರೂಸರ್ ಚಾಲಕನ ಅಚಾತುರ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ | Accident Case | ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಬಿಕಾಂ ವಿದ್ಯಾರ್ಥಿನಿ ಸಾವು, ಇನ್ನೊಬ್ಬ ವಿದ್ಯಾರ್ಥಿ ಗಂಭೀರ

Exit mobile version