ಬೆಳಗಾವಿ: ನಗರ ಹೊರವಲಯದ ಅಲಾರವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ತಡರಾತ್ರಿ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಡಿಕ್ಕಿ (Accident Case) ಸಂಭವಿಸಿ, ಐವರು ಗಾಯಗೊಂಡಿದ್ದಾರೆ. ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.
ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಬೋರಲು ಬಿದ್ದಿದ್ದು, ಅದರಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ಟ್ರಾಲಿಗಳನ್ನು ಹೊಂದಿದ ಟ್ರ್ಯಾಕ್ಟರ್ನಲ್ಲಿ ಕಬ್ಬು ಕಟಾವು ಮಾಡುವವರು ಕೆಲಸ ಮುಗಿಸಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹುಬ್ಬಳ್ಳಿ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಬಂದ ಲಾರಿಯೊಂದು ವೇಗವಾಗಿ ಬಂದಿದ್ದು, ಚಾಲಕನ ಅಂದಾಜು ತಪ್ಪಿ ಟ್ರ್ಯಾಕ್ಟರ್ನ ಎರಡನೇ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ. ಈ ವೇಳೆ ಟ್ರಾಲಿಗಳ ಸಹಿತ ಅದರಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ. ಆಗ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರ ನೆರವಿನಿಂದ ಟ್ರಾಲಿಯನ್ನು ರಸ್ತೆ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ | Courtesy | ಅಪಘಾತದಲ್ಲಿ ಮೃತಪಟ್ಟ ಲೋಕಾಯುಕ್ತ ಎಸ್ಪಿ ಮಗಳನ್ನು ಕಮಿಷನರ್ ಸೀಟಲ್ಲಿ ಕೂರಿಸಿ ಗೌರವ