ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bangalore-Mysore Express way) ಸಂಭವಿಸಿದ ಭೀಕರ ಅಪಘಾತದಲ್ಲಿ ಟೆಕ್ಕಿ ಯುವತಿ ಮೃತಪಟ್ಟಿದ್ದರೆ, ಬೈಕ್ ಸವಾರ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ನೂತನ ಎಕ್ಸ್ ಪ್ರೆಸ್ ವೇನ ಅವೈಜ್ಞಾನಿಕ ಕಾಮಗಾರಿಯಿಂದ ಬೈಕ್ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ TCS ಕಂಪನಿಯ ಸಹೋದ್ಯೋಗಿಗಳಾಗಿರುವ ಹಾಸನದ ದಾಸನಕೊಪ್ಪಲು ನಿವಾಸಿ ಲಕ್ಷ್ಮೀನಾರಾಯಣಗೌಡ ಮತ್ತು ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಅವರು ಬೈಕ್‌ನಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದಾಗ ಮಂಡ್ಯ ಬಳಿಕ ಬೈಕ್ ನಿಯಂತ್ರಣ ತಪ್ಪಿ ಉರುಳಿದೆ. ಪ್ರಿಯಾಂಕ ರಾಜು ಅವರು ಸ್ಥಳದಲ್ಲೇ ಮೃತಪಟ್ಟರೆ, ಬೈಕ್ ಚಲಾಯಿಸುತ್ತಿದ್ದ ಲಕ್ಷ್ಮೀನಾರಾಯಣ ಅವರು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಇವರಿಬ್ಬರೂ ಬೈಕಿನಲ್ಲಿ ಮೈಸೂರಿನ ಪ್ರವಾಸಕ್ಕೆಂದು ಹೋಗಿದ್ದರು. ವಾಪಸ್ ಬೆಂಗಳೂರಿಗೆ ಹೋಗುವಾಗ ದುರ್ಘಟನೆ ಸಂಭವಿಸಿವೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಬೈಕ್‌ನಿಂದ ಇವರಿಬ್ಬರೂ ಉರುಳಿದ್ದಾರೆ. ಅಪಘಾತದ ರಭಸಕ್ಕೆ ಸವಾರನ ಕುತ್ತಿಗೆ ಸೀಳಿ, ಎಡಗೈ ಕಟ್ ಆಗಿದೆ.
ಗಾಯಾಳು ಲಕ್ಷ್ಮೀನಾರಾಯಣ ಗೌಡಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಪ್ರಿಯಾಂಕಾ ರಾಜು ಅವರ ಶವ ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿದೆ.
ಎರಡು ದಿನದ ಹಿಂದಷ್ಟೇ ಹೆದ್ದಾರಿ ಅಪಘಾತದಲ್ಲಿ ಕೊಡಗು ಮೂಲದ ತಾಯಿ-ಮಗ ಮೃತಪಟ್ಟಿದ್ದರು.
ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ Fire tragedy : ಬೆಂಕಿ ಬಿದ್ದ ಕೊಟ್ಟಿಗೆಯಿಂದ ನಾಲ್ಕು ದನಗಳನ್ನು ರಕ್ಷಿಸಿದ ಸಾಹಸಿ ಕೊನೆಗೆ ತಾನೇ ಸುಟ್ಟು ಹೋದ