ಬೆಳಗಾವಿ: ಕಿತ್ತೂರು ಪಟ್ಟಣದಲ್ಲಿ ನಡೆದ ಕಿತ್ತೂರು ಉತ್ಸವ ನೋಡಿಕೊಂಡು ಹಿಂದಿರುಗುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33), ಕರೆಪ್ಪ ತಳವಾರ (36) ಮೃತಪಟ್ಟ ದುರ್ದೈವಿಗಳು. ಕಿತ್ತೂರು ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಘಟನೆ ನಡೆದಿದೆ.
ಮಧ್ಯ ರಾತ್ರಿ ೧೨ ಗಂಟೆಯ ಹೊತ್ತಿಗೆ ರಸ್ತೆ ದಾಟುತ್ತಿದ್ದ ಇವರಿಬ್ಬರ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಧಾರವಾಡದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಡ ಕುಟುಂಬಗಳು
ಕಿತ್ತೂರು ಉತ್ಸವ ಮುಗಿಸಿಕೊಂಡು ಬಂದ ಈ ಇಬ್ಬರು ಅಂಡರ್ ಪಾಸ್ ಮೂಲಕ ಸಾಗಬೇಕಾಗಿತ್ತು. ಆದರೆ, ಅಲ್ಲಿ ಬೆಳಕಿಲ್ಲ ಎಂಬ ಕಾರಣಕ್ಕಾಗಿ ಹೆದ್ದಾರಿ ಮೂಲಕ ದಾಟಿದ್ದಾರೆ. ಆಗ ಅವಘಡ ಸಂಭವಿಸಿದೆ. ಮೃತರಿಬ್ಬರೂ ಕೃಷಿಕರು ಮತ್ತು ಕಾರ್ಮಿಕರಾಗಿದ್ದಾರೆ. ಜತೆಗೆ ದಲಿತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಕರೆಪ್ಪ ತಳವಾರ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದರೆ, ಬಾಳಪ್ಪ ತಳವಾರ ಅವರಿಗೆ ಪತ್ನಿ, ಇಬ್ಬರು ಮಕ್ಕಳು ಮತ್ತು ವಯಸ್ಸಾದ ತಂದೆ ತಾಯಿ ಇದ್ದಾರೆ.
ಇದನ್ನೂ ಓದಿ | 14 ದಿನದ ಹೋರಾಟ ಮುಗಿಸಿದ ಶಿಲ್ಪಾ: ಬೆಂಗಳೂರು ವಿವಿ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು