Site icon Vistara News

Accident | ಮಗನನ್ನು ಶಾಲೆಗೆ ಸೇರಿಸಲು ಬಂದಿದ್ದ ತಂದೆ ಅಪಘಾತಕ್ಕೆ ಬಲಿ, ಪುತ್ರನಿಗೂ ಗಂಭೀರ ಗಾಯ

Accident

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಳಗಾವಿ ಮೂಲದ ಪ್ರಭಾಕರ್ ಕೋತ ಅವರು ತಮ್ಮ ಮಗ ಸಮರ್ಥ್‌ ಜತೆ ಬಂದು ಬಸ್ಸಿಳಿದು ರಸ್ತೆ ಬದಿಯಲ್ಲಿ ನಿಂತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಪ್ರಭಾಕರ್‌ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಮಗ ಸಮರ್ಥ್‌ (೧೪) ತೀವ್ರವಾಗಿ ಗಾಯಗೊಂಡು ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಭಾಕರ್‌ ಅವರು ತಮ್ಮ ಮಗನನ್ನು ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ದಾಖಲಿಸಲೆಂದು ಬೆಳಗಾವಿಯಿಂದ ಬಂದಿದ್ದರು. ಅವರು ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಮಗನನ್ನು ಕಷ್ಟಪಟ್ಟು ಓದಿಸುವ ಅವರ ಕನಸು ಹೊತ್ತ ಪ್ರಭಾಕರ್‌ ಅವರು ರಸ್ತೆಯಲ್ಲಿ ಶವವಾದರು.

ವೃತ್ತ ನಿರೀಕ್ಷಕ, ಕೆ.ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ಹಾಗು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Exit mobile version