Site icon Vistara News

ನಾಯಿ ತಪ್ಪಿಸಲು ಹೋಗಿ ಪಲ್ಟಿಯಾದ ಆಟೊ, ಮೂವರು ವಿದ್ಯಾರ್ಥಿಗಳಿಗೆ ಗಾಯ

accident

ಯಾದಗಿರಿ: ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ವೇಳೆ ರಿಕ್ಷಾವೊಂದು ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಮತ್ತು ಚಾಲಕ ಗಾಯಗೊಂಡಿದ್ದಾರೆ.

ಯಾದಗಿರಿ ನಗರದ ಹೊರವಲಯದಲ್ಲಿರುವ ವಡಗೇರ ಕ್ರಾಸ್ ಬಳಿ ಘಟನೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅನೀಲ್, ರುಕ್ಸಾನಾ ಹಾಗೂ ಶೋಭಾ ಗಾಯಗೊಂಡ ವಿದ್ಯಾರ್ಥಿಗಳು.. ಇವರು ವಡಗೇರಾ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳಾಗಿದ್ದು, ವಡಗೇರಾ ಕ್ರಾಸ್ ಬಳಿಯ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದರು. ನಾಯಿಗಳು ಅಡ್ಡ ಬಂದಿರುವ ಕಾರಣಕ್ಕೆ ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಘಟನೆ…ನಡೆದಿದೆ.

ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Tumkur accident | ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, 9 ಕಾರ್ಮಿಕರ ಸಾವು

Exit mobile version