Site icon Vistara News

ಹುಬ್ಬಳ್ಳಿ ಬಳಿ ಅಪಘಾತ: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಹುಡಾ ಮಾಜಿ ಅಧ್ಯಕ್ಷರ ಪುತ್ರ ಸಾವು

accident hubli

ಹುಬ್ಬಳ್ಳಿ: ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ. ತಿಲಕ್ ಕಲಬುರ್ಗಿ (22) ಮೃತಪಟ್ಟ ದುರ್ದೈವಿ. ಇವರು ಹುಬ್ಬಳ್ಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ್‌ ಕಲಬುರ್ಗಿ ಅವರ ಪುತ್ರ.

ಇವರು ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಅವಘಡ ಸಂಭವಿಸಿದೆ. ರಸ್ತೆ ಬದಿ‌ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದರಿಂದ ಅವರು ರಸ್ತೆಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಯುವಕನಿಗೆ ಗಂಭೀರ ಗಾಯವಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಆಸ್ಪತ್ರೆಗೆ ಸಾಗಿಸಿದ ಶಾಸಕ ಹರತಾಳು ಹಾಲಪ್ಪ; ಸಾರ್ವಜನಿಕರ ಪ್ರಶಂಸೆ

Exit mobile version