Site icon Vistara News

Accident News | ಭಟ್ಕಳದಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಪಲ್ಟಿ; ಒಬ್ಬ ಸಾವು, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

car accident Bhatkal

ಕಾರವಾರ: ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಮೂಡಭಟ್ಕಳ ಬೈಪಾಸ್ ಬಳಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಕಾರೊಂದು (Accident News) ಪಲ್ಟಿಯಾಗಿದ್ದು, ಸ್ಥಳದಲ್ಲೇ ಒಬ್ಬ ಮೃತಪಟ್ಟರೆ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಂಭೀರಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಮ್ಮದ್ ಉನೈಸ್ ಅಮ್ಜದ್ ಖತೀಬ್

ಮಹಮ್ಮದ್ ಉನೈಸ್ ಅಮ್ಜದ್ ಖತೀಬ್ (20) ಮೃತ ದುರ್ದೈವಿ. ಫುರ್ಖಾನ್ ಗಂಗವಾಲಿ, ಸುಹೇಲ್ ಗೋಲಿವಾಲೆ, ಸೈಯದ್ ಇಸ್ಮಾಯಿಲ್ ಇಬ್ರಾಹಿಂ ಲಂಕಾ, ಅಬ್ದುಲ್ ರೆಹಮಾನ್ ಅಕ್ರಮಿ ಗಾಯಗೊಂಡವರಾಗಿದ್ದಾರೆ. ಇವರೆಲ್ಲರೂ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಶಿರೂರಿನಿಂದ ಭಟ್ಕಳಕ್ಕೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಮನೆಗೆ ವಾಪಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಭಟ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಅದು ಅಪಘಾತವಲ್ಲ ಕೊಲೆ; ಪ್ರಿಯಕರನ ಪ್ರೇಮಪಾಶಕ್ಕೆ ಸಿಲುಕಿ ಪ್ರಾಣಕಾಂತನ ಜೀವ ತೆಗೆದಳು

Exit mobile version