Site icon Vistara News

ತುಳಜಾಪುರ ದೇವಸ್ಥಾನದಿಂದ ದೇವಿ ದೀಪ ತರುವ ವೇಳೆ ಅಪಘಾತ, ವಾಹನ ಹರಿದು ಯುವಕ ಮೃತ್ಯು

accident

ವಿಜಯಪುರ: ಮಹಾರಾಷ್ಟ್ರದ ತುಳಜಾಪುರದ ಅಂಬಾ ಭವಾನಿ ದೇವಸ್ಥಾನದಿಂದ ಯುವಕರ ಗುಂಪು ದೇವಿ ದೀಪ ತರುವ ವೇಳೆ ನಡೆದ ಅಪಘಾತದಲ್ಲಿ ಒಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಸರ್ವಿಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ಜತ್ ತಾಲೂಕಿನ ಉಮದಿ ಮೂಲದ ಕರನ್ ಕೆಂಗಾರ್ (25) ಎಂದು ಗುರುತಿಸಲಾಗಿದೆ.

ನವರಾತ್ರಿ ಪ್ರಯುಕ್ತ ತುಳಜಾಪುರದಿಂದ ಅಂಬಾಭವಾನಿ ದೇಗುಲದಿಂದ ಯುವಕರ ಗುಂಪು ದೀಪದ ಪಂಜು ತರುತ್ತಿದ್ದ ವೇಳೆ, ದೀಪ ಇನ್ನೊಬ್ಬ ಯುವಕನಿಗೆ ಹಸ್ತಾಂತರಿಸಿದ ಕರನ್ ವಾಹನ ಹತ್ತುವ ವೇಳೆ ಆಯತಪ್ಪಿ ಬಿದ್ದ. ಈ ವೇಳೆ, ಹಿಂಬದಿಯಿಂದ ಬಂದ ಇನ್ನೊಂದು ವಾಹನ ಹರಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಪರಿಣಾಮ ಕರನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ವಿಜಯಪುರ ಜಿಲ್ಲೆಯ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿ ಅನುಮಾಸ್ಪದ ಸಾವು
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೇವಪ್ಪ ಮಡ್ಡಿ ಎಂಬಲ್ಲಿ ಸಾವಿತ್ರಿ ಸಂತೋಷ ನಾವಿ (೨೩) ಎಂಬ ಮಹಿಳೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version