Site icon Vistara News

Accidental death : ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೆಂಗಿನ ಮರ ಉರುಳಿಬಿದ್ದು ರೈತ ಸಾವು

accidental death

#image_title

ರಾಮನಗರ: ಕೆಲವೊಂದು ಆಕಸ್ಮಿಕಗಳು ಹೇಗೆ ಸಂಭವಿಸುತ್ತವೆ (Accidental death) ಎಂದು ಹೇಳುವುದಕ್ಕೇ ಸಾಧ್ಯವಿಲ್ಲ. ಜಮೀನಿನಲ್ಲಿ ನಡೆದುಕೊಂಡು ಹೋಗುವಾಗ ತೆಂಗಿನಮರವೊಂದು ಉರುಳಿಬಿದ್ದು ಅದರ ಅಡಿಗೆ ಸಿಲುಕಿ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ಗಿಜಗದಾಸನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪುಟ್ಟಸ್ವಾಮಿಗೌಡ (56) ಮೃತಪಟ್ಟ ದುರ್ದೈವಿ ರೈತರಾಗಿದ್ದಾರೆ.

ಇವರು ತೆಂಗಿನ ತೋಟದಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಮರ ಉರುಳಿಬಿದ್ದಿದೆ. ಕೊನೆಯ ಕ್ಷಣದಲ್ಲಿ ಮರ ಉರುಳುವುದು ಗೊತ್ತಾದರೂ ತಪ್ಪಿಸಿಕೊಳ್ಳುವಷ್ಟು ಸಮಯಾವಕಾಶವೇ ಸಿಗಲಿಲ್ಲ. ಹೀಗಾಗಿ ನೇರವಾಗಿ ಅವರ ಮೇಲೆಯೇ ಮರ ಉರುಳಿ ಬಿದ್ದಿದೆ. ಮರದಡಿ ಸಿಲುಕಿದ ಅವರು ರಕ್ತ ಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಅಕ್ಕೂರು ಠಾಣೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಯುತ್ತಿದೆ. ರೈತರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

ದಾಯಾದಿ ಕಲಹ ; ಕಾರು ನಿಲ್ಲಿಸುವ ಗಲಾಟೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ಕಾರು ನಿಲ್ಲಿಸುವ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ದಾಯಾದಿಗಳ ನಡುವಿನ ಹಿಂದಿನ ವೈಷಮ್ಯ ಸಣ್ಣ ಕಿಡಿಯಾಗಿ, ಬೂದಿ ಮುಚ್ಚಿದ ಕೆಂಡವಾಗಿದ್ದದ್ದು ಈಗ ರಕ್ತಪಾತಕ್ಕೆ ಕಾರಣವಾಗಿದೆ (Murder case) ಎಂದು ಹೇಳಲಾಗಿದೆ.

ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಇಸ್ಮಾಯಿಲ್ ಖಾನ್ ( 26 ) ಅವರನ್ನು ಕೊಂದು ಹಾಕಲಾಗಿದೆ. ಗ್ರಾಮದ ನಿವಾಸಿಗಳೇ ಆದ ಸೈಯದ್ ಹಿದಾಯತ್ ಶಾ, ಸೈಯದ್ ಅಜಿಮ್ ಶಾ, ಮತ್ತು ಸಯ್ಯದ್ ಅಖಿಲ್ ಶಾ ಅವರೇ ಚೂರಿಯಿಂದ ಇರಿದು ಕೊಲೆ ಮಾಡಿದವರು.

ಕೊಲೆಯಾದವರು ಮತ್ತು ಕೊಲೆ ಮಾಡಿದವರು ದಾಯಾದಿಗಳು. ಹಲವು ಸಮಯದಿಂದ ಇವರ ನಡುವೆ ಆಸ್ತಿ ವಿಚಾರ ಸೇರಿದಂತೆ ನಾನಾ ಕಾರಣಗಳಿಗಾಗಿ ಕಲಹ ನಡೆಯುತ್ತಲೇ ಇತ್ತು. ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಕಿರಿಕ್ ಶುರುವಾಗಿದೆ.

ಇಸ್ಮಾಯಿಲ್‌ ಖಾನ್‌ ಕಾರು ನಿಲ್ಲಿಸಲು ಹೋದಾಗ ಮಾತಿನ‌ ಚಕಮಕಿ ಆರಂಭವಾಗಿ ಅದು ವಿಕೋಪಕ್ಕೆ ತಿರುಗಿತು. ಅಂತಿಮವಾಗಿ ಡ್ರಾಗರ್ ನಿಂದ ಹಲ್ಲೆ ಮಾಡಲಾಯಿತು. ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವು ಸಂಭವಿಸಿದೆ.

ಇಸ್ಮಾಯಿಲ್‌ ಸತ್ತು ಬೀಳುತ್ತಿದ್ದಂತೆಯೇ ಆತೋಪಿಗಳು ಎಸ್ಕೇಪ್‌ ಆಗಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ : World sparrow day : ಗೂಡಿನಲ್ಲಿ ಗುಬ್ಬಚ್ಚಿ ಇಲ್ಲ ಎಂದರೆ ನಮ್ಮ ಗೂಡು ಕೂಡಾ ಸುರಕ್ಷಿತವಾಗಿಲ್ಲ ಎಂದೇ ಅರ್ಥ!

Exit mobile version