Site icon Vistara News

Accidental death : ರಬ್ಬರ್‌ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ಎದೆಗೆ ಕತ್ತಿ ತಾಗಿ ಮಹಿಳೆ ದಾರುಣ ಸಾವು

rubber plantation death

#image_title

ಮಂಗಳೂರು: ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಎದೆಗೇ ಕತ್ತಿ ತಾಗಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟಿದ್ದಾರೆ (Accidental death). ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಬಳಕ್ಕಬೆ ನಿವಾಸಿ ಗೀತಾ (37) ಎಂದು ಗುರುತಿಸಲಾಗಿದೆ.

ಇವರು ಬೆಳಗ್ಗೆ 6.30 ಗಂಟೆ ಹೊತ್ತಿಗೆ ಗಂಡನ ಜೊತೆ ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದರು. ಅವರು ತಮ್ಮದೇ ರಬ್ಬರ್ ತೋಟದ ಟ್ಯಾಪಿಂಗ್ ಮಾಡುತ್ತಿದ್ದರು. ಈ ನಡುವೆ ಇಳಿಜಾರು ಪ್ರದೇಶದಲ್ಲಿ ಗೀತಾ ಅವರು ಕಾಲು ಜಾರಿ ಬಿದ್ದರು. ಹೀಗೆ ಬೀಳುವಾಗ ಕೈಯಲ್ಲಿದ್ದ ಟ್ಯಾಪಿಂಗ್ ಕತ್ತಿ ಎದೆಗೆ ತಾಗಿ ಸಾವು ಸಂಭವಿಸಿದೆ.

ಬಿದ್ದ ಹೊಡೆತಕ್ಕೆ ಕತ್ತಿ ನೇರವಾಗಿ ಎದೆಯನ್ನೇ ಹೊಕ್ಕಿದೆ. ಪತಿ ಶಿವರಾಮು ಅವರು ಗೀತಾ ಅವರ ಎದೆಯನ್ನು ಹೊಕ್ಕಿದ್ದ ಕತ್ತಿಯನ್ನು ಹೊರ ತೆಗೆದಿದ್ದಾರೆ. ಕತ್ತಿ ಹೊರ ತೆಗೆದ ತಕ್ಷಣವೇ ಗೀತಾ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಗೀತಾ ಅವರಿಗೆ 8 ನೇ ತರಗತಿ ಓದುತ್ತಿರುವ ಪುತ್ರ ಹಾಗೂ ಎಲ್.ಕೆ.ಜಿಯಲ್ಲಿ ಕಲಿಯುತ್ತಿರುವ ಪುಟ್ಟ ಮಗಳಿದ್ದಾಳೆ.

ಮೈಸೂರು: ಬೈಕ್ ಮತ್ತು ಕಾರು ಅಪಘಾತದಲ್ಲಿ ಸವಾರ ಸಾವು

ಮೈಸೂರಿನಲ್ಲಿ ಸಂಭವಿಸಿದ ಬೈಕ್‌ ಮತ್ತು ಕಾರು ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈಸೂರು- ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದ ಬಳಿ ತಡರಾತ್ರಿ ಘಟನೆ ನಡೆದಿದೆ.

ಮೃತ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಇಡಲಾಗಿದೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಬಸ್‌; ಇಬ್ಬರು ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಟಾಟಾ ಏಸ್‌ಗೆ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾರೆ. ಶಂಕರ್ (34), ವಿಲ್ಸನ್‌ ಗಲ್ಬಟ್ (32) ಮೃತ ದುರ್ದೈವಿಗಳು.

ಮೃತರು ಬೆಂಗಳೂರಿನ ಎಚ್ಎಎಲ್ ನಿವಾಸಿಗಳಾಗಿದ್ದು, ಶ್ರೀವಾಸ್ (35) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂವರು ಪೈಂಟರ್ಸ್‌ಗಳಾಗಿದ್ದು, ತುಮಕೂರಿನಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road accident : ಕೋಲಾರ ಬಳಿ ಭೀಕರ ಅಪಘಾತ: ಕಾರು ರಸ್ತೆಯಿಂದ ಹೊಂಡಕ್ಕೆ ಉರುಳಿ ದಂಪತಿ ಮೃತ್ಯು

Exit mobile version