ಶಿವಮೊಗ್ಗ: ನಗರದಲ್ಲಿ ಹಲ್ಲೆ, ಬೆದರಿಕೆ ಮತ್ತಿತರ ಘಟನೆಗಳಿಂದ ಸೃಷ್ಟಿಯಾದ ಉದ್ವಿಗ್ನತೆಯ ನಡುವೆಯೇ ವೈಯಕ್ತಿಕ ಕಾರಣಗಳಿಗಾಗಿ ಕೊಲೆಯೊಂದು ನಡೆದಿದೆ.
ಶಿವಮೊಗ್ಗದ ವೆಂಕಟೇಶನಗರದಲ್ಲಿ ವಿಜಯ (37) ಎಂಬವರನ್ನು ಕೊಲೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದು ವೈಯಕ್ತಿಕ ಕಾರಣಗಳಿಗಾಗಿ ನಡೆದ ಕೊಲೆ, ಶಿವಮೊಗ್ಗದಲ್ಲಿ ನಡೆದ ಇತರ ಘಟನೆಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಶಿವಮೊಗ್ಗ ಎಸ್‌ಪಿ ಹೇಳಿದ್ದೇನು?
ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ರಾತ್ರಿ ಎರಡು ಘಟನೆಗಳು ನಡೆದಿವೆ. ಒಂದು ಪ್ರಕರಣದಲ್ಲಿ ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ, ಇನ್ನೊಂದರಲ್ಲಿ ಹರ್ಷ ಮನೆ ಸಮೀಪ ಹೋಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ʻʻಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ. ಸ್ಥಳದಲ್ಲಿ ಕೆಎಸ್ ಆರ್ ಪಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವುದು, ಭಯಭೀತರಾಗುವುದು ಬೇಡʼʼ ಎಂದಿದ್ದಾರೆ ಎಸ್‌ಪಿ.
ಶಿವಮೊಗ್ಗದಲ್ಲಿ ಬುಧವಾರದಿಂದ ಚೆಕ್ ಪೋಸ್ಟ್ ತೆರೆಯಲಾಗುವುದು. ತ್ರಿಬಲ್ ರೈಡ್ ಹೋಗುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಹೇಳಿದರು.
ಇದನ್ನೂ ಓದಿ | Shivamogga violence | ಮುಸ್ಲಿಂ ಗೂಂಡಾಗಳಿಗೆ ಪೊಲೀಸ್, ಸರ್ಕಾರದ ಭಯ ಇಲ್ಲ ಎಂದ ಈಶ್ವರಪ್ಪ