ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೊಲೆ ಯತ್ನದ ಆರೋಪಿ ಪೂರ್ಣೇಶ್ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಶನಿವಾರ ಜಿಲ್ಲಾಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಪೂರ್ಣೇಶ್ ಬಂಧನಕ್ಕಾಗಿ ಎಸ್‌ಪಿ ವಿಕ್ರಂ ಅವರು ಏಳು ತಂಡ ರಚನೆ ಮಾಡಿದ್ದರು. ಮಂಗಳವಾರ ಬಾಳೆಹೊನ್ನೂರು ಸಮೀಪದ ಮಾಗಲು ಬಸ್ ನಿಲ್ದಾಣದಲ್ಲಿ ಆರೋಪಿಯ ಬಂಧನವಾಗಿದೆ.
ಕೊಲೆ ಪ್ರಕರಣದ ಆರೋಪಿ ಪೂರ್ಣೇಶ್ ಕಾಲಿಗೆ ಅ. 30ರಂದು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು, ನಂತರ ಆತನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಗ ಪೂರ್ಣೇಶ್ ಎಸ್ಕೇಪ್ ಆಗಿದ್ದ. ವಾರಂಟ್ ಜಾರಿಯಾಗಿದ್ದರೂ ಕೋರ್ಟ್‌ಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಪೂರ್ಣೇಶ್ ಬಂಧನವಾಗಿತ್ತು.
ಕಾಡಿನಲ್ಲಿ ದೊಡ್ಡ-ದೊಡ್ಡ ಮರಗಳ ಮೇಲೆ ವಾಸ ಮಾಡುತ್ತಾ ಪೊಲೀಸರಿಗೂ ಆರೋಪಿ ಸಿಕ್ಕಿರಲಿಲ್ಲ. ವಶಕ್ಕೆ ಪಡೆಯಲು ಹೋಗಿದ್ದಾಗ ಅ. 30ರಂದು ಪೊಲೀಸರ ಮೇಲೂ ಪೂರ್ಣೇಶ್ ಮಚ್ಚು ಬೀಸಿದ್ದ. ಹೀಗಾಗಿ ಆತನ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು. ಎಸ್ಕೇಪ್ ಆಗಿದ್ದ ಆತನನ್ನು ಬಾಳೆಹೊನ್ನೂರು ಸಮೀಪ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Ghati Subramanya: ಘಾಟಿ ಬ್ರಹ್ಮರಥೋತ್ಸವದಲ್ಲಿ ರಥದಡಿ ಸಿಲುಕಿದ ಮಹಿಳೆ ಪವಾಡ ಸದೃಶ ಪಾರು
ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆ; ಕಾರಣ ನಿಗೂಢ
ಮಡಿಕೇರಿ: ಬೆಂಗಳೂರು ಮೂಲದ ಸಾಫ್ಟ್ ವೇರ್ ಎಂಜಿನಿಯರ್ (Software Engineer) ಒಬ್ಬರು ಮಡಿಕೇರಿಯ ಹೋಟೆಲ್‌ನಲ್ಲಿ (Lodge in Madikeri) ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದಾರೆ (Self Harming). ಬೆಂಗಳೂರಿನ ಸಂದೇಶ್ (35) ಅತ್ಮಹತ್ಯೆಗೆ ಶರಣಾದವರು.
ಕಳೆದ 2 ದಿನಗಳಿಂದ ಹೊಟೆಲ್‌ನಲ್ಲಿ ತಂಗಿದ್ದ ಸಂದೇಶ್ ಅವರು ಕಿಟಕಿಯ ಸರಳಿಗೆ ಬಟ್ಟೆಯನ್ನೇ ನೇಣಾಗಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಕೋಣೆಯಲ್ಲಿ ಡೆತ್ ನೋಟ್ ಕೂಡಾ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ಎಲ್ಲರಿಗೂ ಗುಡ್ ಬೈ, ಯಾರೂ ಬೇಸರ ಮಾಡಬಾರದು ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕನ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ | Self Harming: ಜೀವನದಲ್ಲಿ ಜಿಗುಪ್ಸೆಗೊಂಡು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ