Site icon Vistara News

ಪೊಲೀಸರ ಥರ್ಡ್ ಗ್ರೇಡ್ ಟಾರ್ಚರ್; ಆರೋಪಿ ಮರ್ಡರ್! ಹಸಿಮೆಣಸಿನ ಕಾಯಿ ರುಬ್ಬಿ ಗುದದ್ವಾರಕ್ಕೆ ತುರುಕಿದ್ರಾ?

Accused dies of third-grade torture by hsr layout police

ಬೆಂಗಳೂರು: ಆತ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿ ಕಾಲ್ಕಿತ್ತಿದ್ದ. ಈ ಬಗ್ಗೆ ದೂರು ಬಂದ ಕೂಡಲೇ ಅಲರ್ಟ್‌ ಆದ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು (Torture in Police Custody) ಆರೋಪಿಯನ್ನು ಹಿಡಿದಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪೊಲೀಸರು ಆರೋಪಿಗೆ ಥರ್ಡ್ ಗ್ರೇಟ್ ಟ್ರೀಟ್ಮೆಂಟ್‌ ನೀಡಿದ್ದು, ಇದರಿಂದಲೇ ಆತ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಡಿ.12ರ ರಾತ್ರಿ 9:30ಕ್ಕೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಸಂಜೀವ್ ಕುಮಾರ್ ಬೊರೊ ಹಾಗೂ ಜನ್ನಿಫರ್ ದಂಪತಿ ಇದ್ದ ಮನೆಗೆ ಪೊಲೀಸರ ಸೋಗಿನಲ್ಲಿ ಗಣೇಶ್‌ ಎಂಬಾತ ಎಂಟ್ರಿ ಕೊಟ್ಟಿದ್ದ. ತಾನು ಎಚ್‌ಎಸ್‌ಆರ್‌ ಲೇಔಟ್ ಪೊಲೀಸ್‌ ಎಂದು ದಂಪತಿಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಅಕ್ಕ-ಪಕ್ಕದ ಮನೆಯ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುತ್ತಿದೆ ಎಂದು ದೂರು ಬಂದಿದೆ ಎಂದು ಕಥೆ ಕಟ್ಟಿದ್ದ.

ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಇಲ್ಲಸಲ್ಲದ ಪ್ರಕರಣದಲ್ಲಿ ಸಿಲುಕಿಸುತ್ತೇನೆ. ಗಾಂಜಾ ಮಾರಾಟ ಮಾಡುವುದಾಗಿ ಮಾಧ್ಯಮಗಳಿಗೆ ತಿಳಿಸುತ್ತೇನೆಂದು ಎಂದು ದಂಪತಿಗೆ ಹೆದರಿಸಿದ್ದ. ಈತನ ಮಾತುಗಳಿಂದ ಗಾಬರಿಗೊಂಡ ದಂಪತಿ, ಆರೋಪಿ ಗಣೇಶ್‌ ಹೇಳಿದ್ದಂತೆ ಕೇಳಿದ್ದಾರೆ. ಬಳಿಕ ಕೇಸ್‌ ಏನು ಆಗಬಾರದು ಎಂದರೆ ಹಣ ನೀಡಿ ಎಂದು ಗಣೇಶ್‌ ಡಿಮ್ಯಾಂಡ್‌ ಮಾಡಿದ್ದಾನೆ.

ಮನೆಯಲ್ಲಿದ್ದ ಲಾಕರ್ ಓಪನ್ ಮಾಡುವಂತೆ ಹೇಳಿ ಹಣ, ಒಡವೆ ನೀಡುವಂತೆ ಕೇಳಿದ್ದಾನೆ. ಆದರೆ ಮನೆಯಲ್ಲಿ ಏನು ಸಿಗದೆ ಇದ್ದಾಗ, ಕಾರಲ್ಲಿ ಸಂಜೀವ್ ಕುಮಾರ್‌ನನ್ನು ಕೂರಿಸಿಕೊಂಡು ಹೊರ ಹೋಗಿದ್ದಾನೆ. ಅವರ ಬಳಿಯಿದ್ದ ಎಟಿಎಂ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ನಿಂದ ಡ್ರಾ ಮಾಡಿ ಸುಮಾರು 2.5 ಲಕ್ಷ ರೂ ಹಣವನ್ನು ಪಡೆದಿದ್ದಾನೆ. ಈ ವಿಚಾರ ಯಾರಿಗೂ ತಿಳಿಸಬಾರದು, ಜತೆಗೆ ಮನೆಯನ್ನು ಕೂಡಲೇ ಖಾಲಿ ಮಾಡಿಕೊಂಡು ಹೋಗಬೇಕೆಂದು ಆ ದಂಪತಿಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದ.

ಈತನ ನಡೆಯಿಂದ ಅನುಮಾನಗೊಂಡ ದಂಪತಿ ಧೈರ್ಯ ಮಾಡಿ ನಡೆದ ಘಟನೆಯನ್ನೆಲ್ಲ ಎಚ್‌ಎಸ್‌ಆರ್‌ ಪೊಲೀಸರಿಗೆ ತಿಳಿಸಿ, ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮಡಿವಾಳದ ತಾವರೆಕೆರೆ ಮೂಲದ ಗಣೇಶ್‌ನನ್ನು ಕಳೆದ ಡಿ.22ರಂದು ಹಿಡಿದು ಬಂಧಿಸಿದ್ದರು.

ಇದನ್ನೂ ಓದಿ: Skeletons found : ಪಾಳು ಬಿದ್ದ ಮನೆ ಗೋಡೆ ಮೇಲೆ ಪತ್ತೆಯಾದ್ವು 5 ಕೈ ಗುರುತುಗಳು! ಅಸ್ಥಿಪಂಜರ ಕೇಸ್‌ಗೆ ಟ್ವಿಸ್ಟ್‌

ಥರ್ಡ್ ಗ್ರೇಡ್ ಟ್ರೀಮ್ ಮೆಂಟ್

ಡಕಾಯಿತಿ ಪ್ರಕರಣದಲ್ಲಿ ಗಣೇಶ್‌ನನ್ನು ಠಾಣೆಗೆ ಕರೆತಂದ ಪೊಲೀಸರು ತಮ್ಮದೇ ಶೈಲಿಯಲ್ಲಿ ಬಾಯಿಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಥರ್ಡ್ ಗ್ರೇಡ್ ಟ್ರೀಮ್ ಮೆಂಟ್ ಕೊಟ್ಟ ಪೊಲೀಸರು ಗಣೇಶನ ಮರ್ಮಾಂಗಕ್ಕೆ ಖಾರದ ಪುಡಿ ಹಚ್ಚಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಗಣೇಶ್‌ನನ್ನು ಜೈಲಿಗೆ ಅಟ್ಟಿದ್ದರು. ಇತ್ತ ಜೈಲಾಧಿಕಾರಿಗಳು ಸಹ ಆರೋಪಿಯ ಆರೋಗ್ಯ ವಿಚಾರಣೆ ಮಾಡದೆ ಜೈಲಿನ ಒಳಗೆ ಬಿಟ್ಟುಕೊಂಡಿದ್ದರು.

ಜೈಲಿನಲ್ಲಿದ್ದ ಗಣೇಶ್‌ ತೀವ್ರ ನೋವಿನಿಂದ ಒದ್ದಾಡುತ್ತಿದ್ದ ಕಾರಣಕ್ಕೆ ನಿನ್ನೆ ಶನಿವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆ ಮೃತಪಟ್ಟಿದ್ದ. ಸದ್ಯ ಗಣೇಶ್‌ ಸಾವಿಗೆ ಎಚ್‌ಎಸ್‌ಆರ್‌ ಪೊಲೀಸರ ಥರ್ಡ್ ಗ್ರೇಡ್ ಟ್ರೀಮ್ ಮೆಂಟ್‌ ಕಾರಣವೆಂದು ಮೃತನ ಕುಟುಂಬಸ್ಥರು ಹಾಗೂ ಸ್ನೇಹಿತರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Skeletons found : ಕಾಲು ಕಟ್ಟಿದ ಸ್ಥಿತಿಯಲ್ಲಿ ಇಬ್ಬರ ಅಸ್ಥಿಪಂಜರ ಪತ್ತೆ! ಕೊಲೆನಾ? ಆತ್ಮಹತ್ಯೆನಾ

ಮರ್ಮಾಂಗಕ್ಕೆ ಕಾರದಪುಡಿ ಎರಚಿದ್ರಾ?

ಗಣೇಶ್‌ನ ಮರ್ಮಾಂಗಕ್ಕೆ ಕಾರದಪುಡಿ ಎರಚಿ ಬಳಿಕ ಹಸಿ ಮೆಣಸಿನಕಾಯಿ ರುಬ್ಬಿ ಗುದಕ್ಕೆ ಹಚ್ಚಿರುವ ಆರೋಪ ಕೇಳಿ ಬಂದಿದೆ. ಕ್ಯಾರಟ್ ಮತ್ತು ಮೂಲಂಗಿಗೆ ಹಸಿ ಮೆಣಸಿನಕಾಯಿ ಸವರಿ ಗುದದ್ವಾರಕ್ಕೆ ಹಚ್ಚಿದ್ದಾರೆ. ಪೊಲೀಸರ ಈ ಟಾರ್ಚರ್‌ಗೆ ಗಣೇಶ್‌ ತೀವ್ರ ನೋವು ಅನುಭವಿಸಿದ್ದ. ನೋವಿನ ನಡುವೆಯು ಪೊಲೀಸರು ನಾಲ್ಕು ದಿನ ಠಾಣೆಯಲ್ಲಿರಿಸಿಕೊಂಡಿದ್ದರು. ಕೊನೆಗೆ ಗಣೇಶ್‌ನ ಆರೋಗ್ಯ ಹದಗೆಡುತ್ತಿದ್ದಂತೆ ತರಾತುರಿಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ ಎಂದು ಗಣೇಶ್ ಸ್ನೇಹಿತ ವಿನೋದ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿನೋದ್‌, ಗಣೇಶ್ ನನಗೆ ಎರಡೂವರೆ ಲಕ್ಷ ರೂ. ಹಣವನ್ನು ನೀಡಿದ್ದ. ಹಲವು ಬಾರಿ ಗಣೇಶ್‌ ಫೋನ್ ಮಾಡಿದ್ದ. ಫೋನ್ ಕರೆ ಆಧರಿಸಿ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದಿದ್ದರು. ನನ್ನ ಐದು ದಿನ ಠಾಣೆಯಲ್ಲಿ ಅಕ್ರಮವಾಗಿರಿಸಿಕೊಂಡಿದ್ದರು. ನನ್ನನ್ನು ಠಾಣೆಯಿಂದ ಹೊರ ಬಿಡಲು ಆರೂವರೆ ಲಕ್ಷ ರೂ. , ಹತ್ತು ಗ್ರಾಂ ಚಿನ್ನ ತೆಗೆದುಕೊಂಡರು. ಮಾತ್ರವಲ್ಲದೇ ನನ್ನ ತಂದೆಯ ಮೇಲೂ ಹಲ್ಲೆ ನಡೆಸಿದರು. ಬಳಿಕ ಎಚ್‌ಎಸ್ಆರ್ ಲೇಔಟ್‌ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಬಸವರಾಜ್ ಬೆದರಿಸಿ ನಮ್ಮ ತಂದೆ ಬಳಿ ಹಣ ಮತ್ತು ಚಿನ್ನ ಪಡೆದುಕೊಂಡರು ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version