Site icon Vistara News

ಅಕ್ಕ-ತಮ್ಮನ ಮೇಲೆ ನೈತಿಕ ಪೊಲೀಸ್ ಗಿರಿ ಕೇಸ್‌; ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

Moral policing

ಬೆಳಗಾವಿ: ಅಕ್ಕ-ತಮ್ಮನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣದ (moral policing case) ಬಂಧಿತ 9 ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಳಗಾವಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿಗಳಲ್ಲಿ ಇಬ್ಬರಿಗೆ ಮಾತ್ರ 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಸೂಚಿಸಲಾಗಿದೆ.

ಏನಿದು ಘಟನೆ?

ಅಕ್ಕ -ತಮ್ಮ. ಕೆಲಸದ ನಿಮಿತ್ತ ಬೆಳಗಾವಿ ನಗರಕ್ಕೆ ಶನಿವಾರ ಬಂದಿದ್ದಾಗ ಯುವಕರ ಗುಂಪೊಂದು ಏಕಾಏಕಿ ದಾಳಿ ಮಾಡಿ, ಮನಬಂದಂತೆ (Moral Policing) ಥಳಿಸಿತ್ತು. ಬೆಳಗಾವಿಯ ಯಮನಾಪುರದ ನಿವಾಸಿಗಳಾದ ಸಚಿನ್‌ ಮತ್ತು ಮುಸ್ಕಾನ್ ಯುವನಿಧಿಗೆ ಅಪ್ಲಿಕೇಷನ್ ಹಾಕಬೇಕು ಎಂದು ತಮ್ಮೂರಿನಿಂದ ಬೆಳಗಾವಿಗೆ ಬಂದಿದ್ದರು. ಅಪ್ಲಿಕೇಷನ್ ಹಾಕುವ ಕೇಂದ್ರದಲ್ಲಿ ಗದ್ದಲ ಇದ್ದ ಕಾರಣ ಸಚಿನ್‌ ಮತ್ತು ಮುಸ್ಕಾನ್ ಕೋಟೆ ಕೆರೆಯ ಆವರಣದಲ್ಲಿ ಮಾತಾನಾಡುತ್ತಾ ಕುಳಿತ್ತಿದ್ದರು.

ಈ ವೇಳೆ ಏಕಾಏಕಿ ದುಷ್ಕರ್ಮಿಗಳ ತಂಡವೊಂದು ಸಚಿನ್ ಹಾಗೂ ಮುಸ್ಕಾನ್ ಜತೆಗೆ ತಗಾದೆ ತೆಗೆದಿದೆ. ಮುಸ್ಲಿಂ ಹುಡುಗಿ ಜತೆಗೆ ಹಿಂದು ಹುಡುಗನ ಕೆಲಸ ಏನು ಎಂದು ಸಚಿನ್‌ನನ್ನು ಎಳೆದಾಡಲು ಶುರು ಮಾಡಿದ್ದಾರೆ. ನಾವು ಪ್ರೇಮಿಗಳಲ್ಲ, ಅಕ್ಕ-ತಮ್ಮ ಎಂದು ಹೇಳಿದರೂ ಸಹ ದುಷ್ಕರ್ಮಿಗಳು ಕೇಳಲಿಲ್ಲವಂತೆ. ಸಾಲದೆಂಬಂತೆ ಮುಸ್ಕಾನ್ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿ ಕೊಟ್ಟರೂ ಸಹ ಕೇಳದೆ ಇಬ್ಬರನ್ನೂ ಪಕ್ಕದಲ್ಲಿಯೇ ಇದ್ದ ಶೆಡ್‌ನಲ್ಲಿ ಕೂಡಿ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Hariprakash Konemane: ನೈತಿಕ ಪೊಲೀಸ್‌ಗಿರಿ ತಡೆ ಕಾಯ್ದೆ ಹಿಂದುಗಳಿಗೆ ಮಾತ್ರವೇ? ಸರ್ಕಾರಕ್ಕೆ ಹರಿಪ್ರಕಾಶ್‌ ಕೋಣೆಮನೆ ಚಾಟಿ

ಇತ್ತ ಮುಸ್ಕಾನ್ ಮೊಬೈಲ್ ಸ್ವಿಚ್ ಆಫ್ ಆಗುತ್ತಿದ್ದಂತೆ ಆಕೆಯ ಪೋಷಕರು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರಿಗೆ ಗಲಾಟೆಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೋಟೆ ಕೆರೆ ಬಳಿ ಹುಡುಕಾಡುತ್ತಾ ಬಂದ ಸಚಿನ್ ಚಿಕ್ಕಪ್ಪ ವಾಲಪ್ಪ ಲಮಾಣಿ, ಮುಸ್ಕಾನ್ ಹಾಗೂ ಸಚಿನ್ ಕಿರುಚಾಟ ಕೇಳಿದ್ದಾರೆ. ಶೆಡ್ ಬಳಿ ಹೋದಾಗ ಹಲ್ಲೆ ನಡೆಯುತ್ತಿರುವ ವಿಚಾರ ವಾಲಪ್ಪಗೆ ತಿಳಿದಿದೆ. ಗಾಯಗೊಂಡು ನರಳಾಡುತ್ತಿದ್ದ ಸಚಿನ್‌ ಹಾಗೂ ಮುಸ್ಕಾನ್‌ಳನ್ನು ಕೂಡಲೇ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Namma Metro : ನಮ್ಮ ಮೆಟ್ರೋ ಟ್ರ್ಯಾಕ್‌ನಲ್ಲಿ ಜಿಗಿದು ಕುಳಿತ ಬ್ಲ್ಯಾಕ್‌ ಕ್ಯಾಟ್! ಎದ್ದನೋ ಬಿದ್ದನೋ ಎಂದು ಓಡಿದ ಸಿಬ್ಬಂದಿ

ಒಟ್ಟು 9 ಜನರನ್ನು ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಮೂವರು ಅಪ್ರಾಪ್ತರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ರೋಹನ್ ಜಗದೀಶ್‌ ಮಾಹಿತಿ ನೀಡಿದ್ದಾರೆ. ಮೊಹಮ್ಮದ್ ಇನಾಮದಾರ್(22), ಆತೀಫ್ ಅಹಮ್ಮದ್ ಶೇಖ(22), ಮೊಹಮ್ಮದ್ ಅಮನ್(27) ಹಾಗೂ ಸೈಫಅಲಿ ಮಗ್ದುಮ್(27), ಉಮರ ಬಡೇಗರ್(19), ಅಜಾನ್ ಕಾಲಕುಂದ್ರಿ(19), ರಿಯಾನ್ ರೋಟವಾಲೆ(19) ಬಂಧಿತ ಆರೋಪಿಗಳು. ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧಿತ ಆರೋಪಿಗಳಿಂದ ಸ್ಥಳ‌ ಮಹಜರ್ ಮಾಡಲಾಗಿದೆ. ಬೆಳಗಾವಿ ಕೋಟೆ ಕೆರೆ ಆವರಣದಲ್ಲಿ ಆರೋಪಿಗಳ ಮಹಜರ್ ಮಾಡಲಾಗಿದೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು.

Exit mobile version