Site icon Vistara News

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Action to reduce pulses price says Union Minister Pralhad Joshi

ನವದೆಹಲಿ: ಬೇಳೆ-ಕಾಳು ಬೆಲೆ ಇಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಸಚಿವರು ಈ ಬಗ್ಗೆ ತ್ವರಿತ ಕ್ರಮಕ್ಕೆ ಸಲಹೆ ನೀಡಿದ್ದಾರೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಧಾನ್ಯಗಳು ಲಭಿಸುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಸಚಿವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

ಸಣ್ಣ ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ

2025ಕ್ಕೆ ಜಿಡಿಪಿ ಶೇ.7ರಷ್ಟು ಬೆಳವಣಿಗೆ

ಐಎಂಎಫ್ ವರದಿ ಪರಿಷ್ಕರಿಸಿದ್ದು, 2025 ರಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಶೇ.7 ರಷ್ಟು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕತೆಯ ಸಾಲಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಐಎಂಎಫ್‌ನ ಈ ವರದಿಯೇ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಭಾರತದ ಬೆಳವಣಿಗೆಯು ಆರ್ಥಿಕ ವರ್ಷ 2025 ರಲ್ಲಿ ಶೇ.7ರಷ್ಟು ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆ ನೀಡಿದ್ದು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದ್ದಾರೆ.

Exit mobile version