Site icon Vistara News

Actor Darshan: ನಟ ದರ್ಶನ್‌ಗೆ ಇನ್ನೂ 3 ದಿನ ಜೈಲೂಟವೇ ಗತಿ; ಜು.25ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Actor Darshan

ಬೆಂಗಳೂರು: ಮನೆ ಊಟ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನಗರದ 24ನೇ ಎಸಿಎಂಎಂ ಕೋರ್ಟ್, ಆದೇಶವನ್ನು ಜುಲೈ 25ಕ್ಕೆ ಕಾಯ್ದಿರಿಸಿದೆ. ಇದರಿಂದ ಇನ್ನೂ ಮೂರು ದಿನಗಳ ಕಾಲ ನಟ ದರ್ಶನ್‌ಗೆ (Actor Darshan) ಜೈಲೂಟವೇ ಗತಿಯಾಗಿದೆ.

ದರ್ಶನ್ ಪರ ವಕೀಲ ವಕೀಲ ರಾಘವೇಂದ್ರ ವಾದ ಮಂಡಿಸಿ, ದರ್ಶನ್‌ಗೆ ಜೈಲು ಊಟ ಜೀರ್ಣವಾಗುತ್ತಿಲ್ಲ, ಅತಿಸಾರವಾಗುತ್ತಿದೆ. ಹೀಗಾಗಿ ಖಾಸಗಿ ಊಟ, ಹಾಸಿಗೆ ಕೆಳಲಾಗುತ್ತಿದೆ. ವಿಚಾರಣಾಧೀನ ಕೈದಿಗೆ ಮನೆಯೂಟ ಪಡೆಯಲು ಅವಕಾಶವಿದೆ. ತನಿಖೆ ಪೂರ್ಣವಾಗದ ಸಂಧರ್ಬದಲ್ಲಿ ಮನೆ ಊಟ ನೀಡಲು ಅವಕಾಶವಿದೆ. ಕರ್ನಾಟಕ ಕಾರಾಗೃಹ ಕಾಯ್ದೆ ಪ್ರಕಾರ ಸಿವಿಲ್ ಕೈದಿ ಹಾಗೂ ವಿಚಾರಣಾಧೀನ ಕೈದಿಗೆ ಸ್ವಂತ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಧಿಕಾರಿಗಳೇ ರೇಷನ್ ನೀಡಬೇಕು. ಸೆಂಟ್ರಲ್ ಕಿಚನ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ದರ್ಶನ್ ಒಬ್ಬ ಸೆಲೆಬ್ರಿಟಿ ಅಗಿರುವುದರಿಂದ ಪ್ರಚಾರ ಸಿಗುತ್ತದೆ. ಆಗಾಗಿಯೇ ಜೈಲು ಅಧಿಕಾರಿಗಳು ಮನೆ ಊಟಕ್ಕೆ ಅವಕಾಶ ನೀಡುತ್ತಿಲ್ಲ. ಆರೋಪ ಸಾಬೀತಾಗುವವರೆಗೂ ಮುಗ್ಧನೆಂದು ಪರಿಗಣಿಸಿ ಮನೆ ಊಟ, ಹಾಸಿಗೆ ಒದಗಿಸಬೇಕೆಂದು ಮನವಿ ಮಾಡಿ ವಾದ ಮುಕ್ತಾಯಗೊಳಿಸಿದರು.

ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ

ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಆರಂಭಿಸಿ, ಜೈಲು ಊಟ ಜೀರ್ಣವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೆಡಿಕಲ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಆರ್ಥೋಪೆಡಿಕ್ ಸಮಸ್ಯೆ ಇದೆ. ಅದಕ್ಕೆ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನ ಮುಂದುವರಿಸಲು ಸೂಚನೆ ನೀಡಿದ್ದರು. ಈಗ ಡಯಟ್ ಪುಡ್ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಏನೇನು ನೀಡಬೇಕೋ ಅದನ್ನು ನೀಡುತ್ತಿದ್ದೇವೆ. ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ಹುಷಾರಿಲ್ಲದ ವೇಳೆ ಎಕ್ಟ್ರಾ ಡಯಟ್ 30 ದಿನ ನೀಡಬಹುದು. ವಾರದಲ್ಲಿ ಒಂದು ದಿನ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡಬಹುದು. ಜ್ವರ ಇದ್ದಾಗ ಬಿಸಿ ನೀರು ನೀಡುತ್ತಾರೆ. ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.

ಸದ್ಯ ದರ್ಶನ್ ಮೆಡಿಕಲ್ ರಿಪೋರ್ಟ್‌ನಲ್ಲಿ ಬೆಡ್ ರೆಸ್ಟ್ ಬೇಕು ಎಂದಿದೆ. ಜೈಲು ವೈದ್ಯಾಧಿಕಾರಿಗಳು ಅಗತ್ಯವಿದ್ದರೆ ವಿಶೇಷ ಆಹಾರವನ್ನು ನೀಡಬಹುದು. ಜೈಲು ನಿಯಮ 728 ರಲ್ಲಿ ಬಟ್ಟೆ, ಹಾಸಿಗೆ ನೀಡುವ ನಿಯಮವಿದೆ. ಇದು ಕೊಲೆ ಆರೋಪಿಯನ್ನು ಹೊರತು ಪಡಿಸಿ ಬೇರೆ ಕೈದಿಗಳಿಗೆ ಅನ್ವಯವಾಗುತ್ತದೆ. ದರ್ಶನ್ ನಾನು ನಿತ್ಯ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದೆ. ಹೀಗಾಗಿ ಜೈಲಿನಲ್ಲಿ ನೀಡುವ ಊಟದ ಜೊತೆಗೆ ಎಕ್ಟ್ರಾ ಪ್ರೋಟಿನ್ ನೀಡಬೇಕೆಂದು ಮಾನವಿ ಮಾಡಿದ್ದಾರೆ. ಪ್ರತಿ ಭಾರಿ ನಾನು ಮನೆಯಲ್ಲಿ ವ್ಯಾಯಾಮ ಮಾಡ್ತಿದ್ದೆ. ಪ್ರೋಟಿನ್ ಆಹಾರ ತಿನ್ನುತ್ತಿದ್ದೆ. ಹೀಗಾಗಿ ಮನೆ ಊಟ ಬೇಕು ಎಂದಿದ್ದಾರೆ. ದರ್ಶನ್ ಬಂಧನವಾಗೋವರೆಗೂ ವ್ಯಾಯಾಮ ಮಾಡಿಕೊಂಡಿದ್ದರು, ಈಗ ಬಂಧಿಯಾಗಿದ್ದಾರೆ. ಜೈಲಿನಲ್ಲಿದ್ದಾಗಲೂ ಎಲ್ಲಾ ಸೌಲಭ್ಯಗಳು ಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಕೆಲವು ಸಮಯದಲ್ಲಿ ಮಾತ್ರ ಮನೆಯ ಊಟ ನೀಡಲು ಅವಕಾಶ ಇದೆ. ನಿಮಗೆ ಬೆನ್ನು ನೋವು ಇದ್ದರೆ, ಜ್ವರ ಇದ್ದರೆ ಚಿಕಿತ್ಸೆ ಕೊಡಿಸಿ. ಜೈಲಿನಲ್ಲಿ ಆಸ್ಪತ್ರೆಯಲ್ಲಿ ಇದೆ ಚಿಕಿತ್ಸೆ ಕೊಡಿಸಿ. ದಿನ 5 ಸಾವಿರ ಜನ ಅದೇ ಜೈಲಿನಲ್ಲಿ ಊಟ ಮಾಡುತ್ತಾರೆ. ಅವರ ಪರಿಸ್ಥಿತಿಯೂ ನೋಡಬೇಕಲ್ಲವೇ. ಅವರ‍್ಯಾರಿಗೂ ವಾಂತಿ-ಭೇದಿ ಆಗುತ್ತಿಲ್ಲ ಎಂದು ಹೇಳಿದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಜುಲೈ 25ಕ್ಕೆ ಆದೇಶವನ್ನು ಕಾಯ್ದಿರಿಸಿದರು.

Exit mobile version