Site icon Vistara News

Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

Actor Darshan

ಬೆಂಗಳೂರು: ನಟ ದರ್ಶನ್‌ (Actor Darshan) ಜೈಲು ಸೇರಿದ ಮೇಲೆ ಅವರ ಕೈದಿ ನಂಬರ್ ಟ್ರೆಂಡ್‌ ಆಗುತ್ತಿದೆ. ಕೆಲ ಅಭಿಮಾನಿಗಳು ದರ್ಶನ್‌ ಕೈದಿ ಸಂಖ್ಯೆ 6106 ಅನ್ನು ವಾಹನಗಳ ಮೇಲೆ ಸ್ಟಿಕ್ಕರ್‌, ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮಗುವಿಗೆ ಕೈದಿ 6106 ಫೋಟೋ ಶೂಟ್ ಮಾಡಿಸಿದವರಿಗೆ ಇದೀಗ ಕಾನೂನು ಕಂಟಕ ಎದುರಾಗಿದೆ. ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೇಸ್ ದಾಖಲಿಸಿಕೊಂಡಿದ್ದು, ಕೈದಿ ಫೋಟೊ ಶೋಟ್‌ ಮಾಡಿಸಿದವರಿಗೆ ನೋಟಿಸ್‌ ನೀಡಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಹಾಗಿಲ್ಲ. ಕುಟುಂಬಸ್ಥರಿಗೆ ಸಮನ್ಸ್ ಜಾರಿ ಮಾಡುತ್ತೇವೆ. ಈ ಬಗ್ಗೆ ಪೊಲೀಸ್ ಐಟಿ ಸೆಲ್‌ಗೆ ಪತ್ರ ಬರೆಯಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ತಿಳಿಸಿದ್ದಾರೆ.

ಪೋಷಕರ ನಡೆಯಿಂದ ಮಗುವಿನ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ. ಮುಂದೆ ಆ ಮಗುವನ್ನು ಕೈದಿ ಎಂದು ಕರೆಯಬಹುದು. ಇದು ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಡ್ರೆಸ್ ಹಾಕಿರುವುದು ಮಗುವಿನ ಆಯ್ಕೆಯಾಗಿರಲ್ಲ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದಂತೆ. ಇದೇ ಕಾರಣಕ್ಕೆ ಆಯೋಗ ಕೇಸ್ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Murder Case: ರಾಜಧಾನಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Lovers Death: ನಾಪತ್ತೆಯಾಗಿದ್ದ ಪ್ರೇಮಿಗಳ ಶವ ನೈಸ್ ರಸ್ತೆ ಬಳಿ ಕೆರೆಯಲ್ಲಿ ಪತ್ತೆ

ಬೆಂಗಳೂರು: ಜುಲೈ 1ರಿಂದ ನಾಪತ್ತೆಯಾಗಿದ್ದ ಪ್ರೇಮಿಗಳ ಶವ (Lovers death) ನೈಸ್‌ ರಸ್ತೆ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ. ಪ್ರೀತಿಗೆ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ಅಂಜನಾಪುರದ ತುಳಸಿಪುರ ಕೆರೆಯಲ್ಲಿ ಶವಗಳು ಪತ್ತೆಯಾಗಿವೆ. ಕಾಲೇಜು ವಿದ್ಯಾರ್ಥಿನಿ ಅಂಜನಾ (20) ಮತ್ತು ಶ್ರೀಕಾಂತ್ (24) ಸಾವನ್ನಪ್ಪಿರುವ ದುರ್ದೈವಿಗಳು. ಬಿಬಿಎ ವಿದ್ಯಾರ್ಥಿಯಾಗಿದ್ದ ಅಂಜನಾ ತಲಘಟ್ಟಪುರ ಸಮೀಪದ ಅಂಜನಾಪುರ ನಿವಾಸಿ. ಬಿಕಾಂ ವ್ಯಾಸಂಗ ಮಾಡುತ್ತಿದ್ದ ಶ್ರೀಕಾಂತ್‌ ಕೋಣನಕುಂಟೆ ನಿವಾಸಿ. ನಾಪತ್ತೆ ಹಿನ್ನೆಲೆಯಲ್ಲಿ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳೆದ ಕೆಲ ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಲ್ಲಿ ಶ್ರೀಕಾಂತ್‌ ವಿವಾಹಿತನಾಗಿದ್ದ. ಆದರೆ ಅಂಜನಾಳನ್ನು ಪ್ರೀತಿಸುತ್ತಿದ್ದ. ಹೀಗಾಗಿ ಇವರಿಬ್ಬರ ಪ್ರೀತಿಗೆ ವಿದ್ಯಾರ್ಥಿನಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರೂ ಜುಲೈ 1ರಂದು ನಾಪತ್ತೆಯಾಗಿದ್ದರು. ಇಬ್ಬರೂ ದಾರದಿಂದ ಕೈ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ʼಕುಟುಂಬಸ್ಥರ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇಬ್ಬರೂ ಸ್ನೇಹಿತರಾಗಿದ್ದು, ಒಟ್ಟಿಗೆ ಓಡಾಡುತ್ತಿದ್ದರು. ಇಬ್ಬರಲ್ಲಿ ಶ್ರೀಕಾಂತ್‌ಗೆ ಮದುವೆಯಾಗಿದೆ. ಮದುವೆ ಆದ ಕಾರಣ ಒಟ್ಟಿಗೆ ಇರಲು ಆಗಲ್ಲ ಅನ್ನೋ ದುಃಖ ಇತ್ತು. ಇಬ್ಬರೂ ಒಟ್ಟಿಗೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ತನಿಖೆ ಮುಂದುವರೆದಿದೆʼ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೆಶ್ ಜಗಲಾಸರ್ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ʼಇಬ್ಬರು ಒಟ್ಟಿಗೆ ಬದುಕಲು ಆಗಲ್ಲ ಎಂದು ಸಾಯೊ‌ ನಿರ್ಧಾರ ಮಾಡಿದ್ದಾರೆ. ಯುವತಿ ಅಂಜನಾ ಸಾವಿಗೆ ಮುನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ನಮ್ಮ ಸಾವಿಗೆ ಯಾರೂ ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಅದನ್ನು ಆಟೋದಲ್ಲಿ ಬಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನ ಬಾಡಿ ಮೇಲೆತ್ತುವಾಗ ಅಂಜನಾ ಮೃತದೇಹ ಕೂಡ ಹೊರಗೆ ಬಂದಿದೆ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆʼ ಎಂದು ಜಗಲಾಸರ್‌ ತಿಳಿಸಿದ್ದಾರೆ.

Exit mobile version