Site icon Vistara News

Actor Death: ಸ್ಯಾಂಡಲ್‌ವುಡ್‌ ನಟ ಠಪೋರಿ ಸತ್ಯ ನಿಧನ

Actor Death

ಬೆಂಗಳೂರು: ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಠಪೋರಿ ಸತ್ಯ ನಿಧನರಾಗಿದ್ದಾರೆ.

ಶ್ವಾಸಕೋಶದ ಅನಾರೋಗ್ಯದಿಂದ ಬಳಲುತ್ತಿದ್ದ ಠಪೋರಿ ಸತ್ಯ (45) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವಾರದಿಂದ ಚಿಕಿತ್ಸೆ ‌ಪಡೆಯುತ್ತಿದ್ದು, ಫಲಕಾರಿಯಾಗದ್ದರಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳು ಇದ್ದಾರೆ.

ʼನಂದ ಲವ್ಸ್ ನಂದಿತಾʼ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಠಪೋರಿ ಸತ್ಯ ನಟಿಸಿದ್ದರು. ಮೇಳ ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದರು. ಬನಶಂಕರಿ ಮೂರನೇ ಹಂತದಲ್ಲಿ ಇರುವ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಯುವನಟ ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್‌ವುಡ್ ಯುವ ನಟ ಸಂಪತ್‌ ಜಯರಾಮ್‌ ಅವರು (Sampath Jayaram) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಕಳೆದ ವರ್ಷದಿಂದೀಚೆಗೆ ಕಿರುತೆರೆ-ಬೆಳ್ಳಿತೆರೆಯಲ್ಲಿ ಯಾವುದೇ ಆಫರ್ ಸಿಗದಿದ್ದರಿಂದ ಸಂಪತ್‌ ಜಯರಾಮ್‌ ಅವರು ನೊಂದುಕೊಂಡಿದ್ದರು ಎನ್ನಲಾಗಿದೆ. ಅವರಿಗೆ ಮದುವೆಯಾಗಿ ಒಂದು ವರ್ಷ ಆಗಿತ್ತು.

ಕಿರುತೆರೆ ನಟರಾಗಿದ್ದ ಅವರು ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ನೆಲಮಂಗಲದಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ಆಸ್ಪತ್ರೆಯಿಂದ ಎನ್ ಆರ್ ಪುರಕ್ಕೆ ಮೃತದೇಹ ರವಾನೆಯಾಗಲಿದೆ.

Exit mobile version