Site icon Vistara News

Actress Abhinaya: ನಟಿ ಅಭಿನಯ ವರದಕ್ಷಿಣಿ ಕಿರುಕುಳ ಕೇಸ್‌; ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್‌

#image_title

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಟಿ ಅಭಿನಯ (Actress Abhinaya) ಹಾಗೂ ಅವರ ಕುಟುಂಬದ ಸದಸ್ಯರಿಗೆ ಸುಪ್ರೀಂಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಭಿನಯ ಅವರ ಅತ್ತಿಗೆ ಲಕ್ಷ್ಮೀದೇವಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಡೆದ ವಿಚಾರಣೆಯಲ್ಲಿ ಅಭಿನಯ, ಸಹೋದರ ಚಲುವರಾಜು ಹಾಗೂ ತಾಯಿಗೆ ಶಿಕ್ಷೆಯಾಗಿತ್ತು. ಇದಾದ ಬಳಿಕ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾಹಿತಿ ಇದ್ದರೆ ಬೆಂಗಳೂರಿನ ಚಂದ್ರಾಲೇಔಟ್​ನ ಪೊಲೀಸ್​ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದವರ ಬಂಧನಕ್ಕೆ ಲುಕ್​ಔಟ್​ ನೋಟಿಸ್ ಬಿಡುಗಡೆ ಮಾಡಿದ್ದರು.

ಸೆಷನ್ಸ್ ಕೋರ್ಟ್ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ನಟಿ ಅಭಿನಯ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅಭಿನಯ, ತಾಯಿ ಜಯಮ್ಮ, ಸೋದರ ಚಲುವರಾಜ್‌ಗೆ ಷರತ್ತು ಬದ್ಧ ಜಾಮೀನು ನೀಡಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಂದೂಡಿದೆ.

ಏನಿದು ಘಟನೆ?

ನಟಿ ಅಭಿನಯ ಹಾಗೂ ಅವರ ಕುಟುಂಬಸ್ಥರು ತಮಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಅವರ ಅತ್ತಿಗೆ 2012ರಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಅವರು ವೇಶ್ಯಾವಾಟಿಕೆ ಕೂಡ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದಲ್ಲಿ ಸೆಷೆನ್ಸ್​ ಕೋರ್ಟ್​ ಅಭಿನಯ ಹಾಗೂ ಇತರರು ತಪ್ಪಿತಸ್ಥರು ಎಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅಭಿನಯ ಹಾಗೂ ಅವರ ಸಹೋದರ ಹೈಕೋರ್ಟ್​ ಮೆಟ್ಟಿಲೇರಿದ್ದರು. ಅಲ್ಲೂ ಅವರಿಗೆ ಸೋಲಾಗಿತ್ತು. ಸೆಷನ್ಷ್​ ಕೋರ್ಟ್​​ನ ಆದೇಶವನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು.

ಶಿಕ್ಷೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಪೊಲೀಸರು ನಟಿ ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚಲುವರಾಜು ಅವರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಬೇಕಾಗಿತ್ತು. ಆದರೆ ಅವರು ನಾಪತ್ತೆಯಾಗಿರುವ ಕಾರಣ ಲುಕ್ಔಟ್​ ನೋಟಿಸ್​ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ: Budget session : ಹೊಸ ತೆರಿಗೆ ಪದ್ಧತಿಯಿಂದ ಜನತೆಗೆ ಹೆಚ್ಚಿನ ಉಳಿತಾಯ ಸಾಧ್ಯ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರ ಜತೆ ಲಕ್ಷ್ಮೀ ದೇವಿ ವಿವಾಹವಾಗಿದ್ದರು. ಈ ವೇಳೆ ವರದಕ್ಷಿಣೆ ನೀಡಲಾಗಿತ್ತು ಹಾಗೂ ನಂತರವೂ ಅಭಿನಯ ಸೇರಿದಂತೆ ಕುಟುಂಬಸ್ಥರು ಹೆಚ್ಚಿನ ಹಣಕ್ಕಾಗಿ ಪೀಡಿಸಿದ್ದರು. ಈ ಬಗ್ಗೆ 2012ರಲ್ಲಿ ದೂರು ದಾಖಲಾಗಿತ್ತು. ಮೊದಲಿಗೆ ಕೋರ್ಟ್​ ನೀಡಿದ್ದ ಶಿಕ್ಷೆಯನ್ನು ಅಭಿನಯ ಕುಟುಂಬದವರು ಪ್ರಶ್ನಿಸಿದ್ದರು. ಅಲ್ಲೂ ಅವರಿಗೆ ಸೋಲಾಗಿತ್ತು. ಇದೀಗ ಮೂವರಿಗೂ ಸುಪ್ರೀಂಕೋರ್ಟ್‌ ಜಾಮೀನಿಗೆ ಅಸ್ತು ಎಂದಿದ್ದು, ತೂಗುಕತ್ತಿಯಿಂದ ಪರಾಗಿದ್ದಾರೆ.

Exit mobile version