Site icon Vistara News

Actress Usha: ಮದುವೆ ಹೆಸರಲ್ಲಿ ಯುವಕನಿಗೆ 5 ಲಕ್ಷ ರೂ. ವಂಚಿಸಿದ ನಟಿ ಉಷಾ ಬಂಧನ

sandalwood actress Usha R

#image_title

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವಕನಿಗೆ 5 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ಚಲನಚಿತ್ರ ನಟಿ ಉಷಾ ರವಿಶಂಕರ್ ಅವರನ್ನು ಬಂಧಿಸಲಾಗಿದೆ. ಶಿವಮೊಗ್ಗದ ಕಿರುತೆರೆ ನಟನಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದ ಹಿನ್ನೆಲೆಯಲ್ಲಿ ವಿನೋಬ ನಗರ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಉಷಾ ಆರ್. ಬಂಧಿತ ಚಿತ್ರನಟಿ. ಕಿರುತೆರೆ ನಟ ಶರವಣನ್‌ ವಂಚನೆಗೊಳಗಾದವರು. ನಟಿ ವಂಚಿಸಿದ್ದಾರೆ ಎಂದು ಶಿವಮೊಗ್ಗ ಕೋರ್ಟ್‌ಗೆ ನಟ ಖಾಸಗಿ ದೂರು ಸಲ್ಲಿಸಿದ್ದರು. ಹೀಗಾಗಿ ವಾರಂಟ್ ಜಾರಿ ಮಾಡಲಾಗಿತ್ತು. ಅದರಂತೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಚಿತ್ರನಟಿಯನ್ನು ಪೊಲೀಸರು ಬಂಧಿಸಿ ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ.

ಇದನ್ನೂ ಓದಿ | kidnapping case: ಬಾಲಕಿಗೆ ‘ಕಿಡ್ನ್ಯಾಪ್’ ಆಟ; ಡೆಲಿವರಿ ಬಾಯ್‌ಗೆ ಪ್ರಾಣ ಸಂಕಟ

ಒಂದಲ್ಲ ಎರಡಲ್ಲ, ದ್ರೋಣ, ಸಲಗ ಚಿತ್ರಗಳಲ್ಲಿ ನಟಿಸಿರುವ ಉಷಾ, ಸಲಗ ಚಿತ್ರದಲ್ಲಿ ದುನಿಯಾ ವಿಜಿ ತಾಯಿಯಾಗಿ ನಟನೆ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಪೊಲೀಸರು ನಟಿಯನ್ನು ಕರೆದೊಯ್ದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಶಿವಮೊಗ್ಗದ 3ನೇ ಜೆಎಂಎಫ್ ನ್ಯಾಯಾಲಯ ಚಿತ್ರನಟಿ ಉಷಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.

ನಟಿ ವಿರುದ್ಧ ಇರುವ ಆರೋಪವೇನು?

2020ರಲ್ಲಿ ಶಿವಮೊಗ್ಗ ಮೂಲದ ಕಿರುತೆರೆ ನಟ ಶರವಣನ್‌ಗೆ ಫೇಸ್‌ಬುಕ್‌ನಲ್ಲಿ ನಟಿ ಉಷಾ ಅವರ ಪರಿಚಯ ಉಂಟಾಗಿತ್ತು. ಬಳಿಕ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಂತರ ನಟಿ ಉಷಾ, ಶರವಣನ್‌ರನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿ ನಟ ಹಣ ನೀಡಿದ್ದರು ಎಂದು ತಿಳಿದುಬಂದಿದೆ.

Exit mobile version