Site icon Vistara News

Aero India 2023: ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂ.1 ಆಗಲು ಅರ್ಹ: ಸಿಎಂ ಬೊಮ್ಮಾಯಿ

CM Basavaraj Bommai says Karnataka deserves to be no.1 in aerospace sector:

#image_title

ಬೆಂಗಳೂರು: ಏರೋಸ್ಪೇಸ್ (Aero India 2023) ವಲಯದಲ್ಲಿ ಲಂಡನ್ ಮತ್ತು ಸಿಂಗಾಪುರದ ನಂತರ ಕರ್ನಾಟಕ ರಾಜ್ಯವಿದ್ದು, ಕರ್ನಾಟಕ ನಂ.1 ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿ, ಬೆಂಗಳೂರು ಸತತ 14 ಬಾರಿ ಏರ್ ಶೋ ಏರ್ಪಡಿಸಿದೆ. ದೇಶದ ಯಾವುದೇ ರಾಜ್ಯ ಇಷ್ಟೊಂದು ಏರ್ ಶೋ ಏರ್ಪಡಿಸಿಲ್ಲ. ಈ ಬಾರಿ ಅತಿ ದೊಡ್ಡ ಶೋ, ಹೆಚ್ಚಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಪ್ರದರ್ಶನಗಳು ನಡೆಯುತ್ತಿದೆ ಎಂದರು.

ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಎಂಜಿನಿಯರ್‌ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೋ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಹಿರಿಯರು 1960ರಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಯಶಸ್ಬಿಯಾಗಿ ಏರ್ ಶೋ ಆಯೋಜನೆ ಮಾಡಿದ್ದಾರೆ ಎಂದು ಅಭಿನಂದಿಸಿದರು.‌

ನಮ್ಮ ರಾಜ್ಯ ಯುವ ಪ್ರತಿಭಾವಂತ ಉದ್ಯಮಿಗಳು, ತಂತ್ರಜ್ಞರು, ಉದ್ಯಮಗಳು ಬೆಳೆಯಲು ಕಾರಣರಾಗಿದ್ದಾರೆ. ಯುವ ಪ್ರತಿಭಾವಂತರು ಇರುವುದರಿಂದ ಏರೊ ಸ್ಪೇಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಏರೊಸ್ಪೇಸ್ ನೀತಿ ರಾಜ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಉದ್ಯಮಗಳಿಗೆ ಸೂಕ್ತ ಅವಕಾಶಗಳಿವೆ. ನಾವು ಶೇ.65 ರಷ್ಟು ರಕ್ಷಣಾ ಪರಿಕರ ಉತ್ಪಾದನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.70 ರಷ್ಟು ಉತ್ಪಾದನೆ ಮಾಡುತ್ತೇವೆ.
ಈಗಾಗಲೇ ಅನೇಕರು ಇಲ್ಲಿ ಬಂಡವಾಳ ಹೂಡಿದ್ದಾರೆ, ಇನ್ನು ಅನೇಕರು ಬಂಡವಾಳ ಹೂಡುವ ಇಚ್ಛೆ ಹೊಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Sevalal Jayanthi: ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಯುಎಸ್ ಕಾನ್ಸುಲೇಟ್ ರಾಯಭಾರಿ ಬೆಂಗಳೂರು ಏರೋ ಇಂಡಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿ ಉತ್ತಮ ಪರಿಸರ, ಆರ್ಥಿಕ ಪರಿಸ್ಥಿತಿಯಿದ್ದು, ನಮ್ಮ ಬೆಳವಣಿಗೆಯಲ್ಲಿ ನೀವು ಭಾಗಿದಾರರಾಗಿ ಎಂದು ಕರೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ ಹಾಜರಿದ್ದರು.

Exit mobile version