Site icon Vistara News

Aero India 2023: ಏರೋ ಇಂಡಿಯಾ 2023 ಹೊಸ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ- ಪ್ರಧಾನಿ ಮೋದಿ ಬಣ್ಣನೆ

Aero India 2023 New live updates

ಬೆಂಗಳೂರು: ಜಗತ್ತಿನ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ-2023ಕ್ಕೆ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಂಗಳೂರಲ್ಲಿ ಆಯೋಜಿಸಲಾಗಿರುವ ಈ ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿಯಾಗಿದೆ. ಈ ಹಿಂದೆ ಕೇವಲ ಇದನ್ನು ಸಾಂಪ್ರದಾಯಿಕ ರೀತಿಯಲ್ಲಿ ನೋಡಲಾಗುತ್ತಿತ್ತು. ಆದರೆ, ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದೆ. ಇದೊಂದು ಅವಕಾಶಗಳ ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

1996ರಿಂದ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್‌ ಸ್ಟೇಶನ್‌ನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. (Aero India 2023) ಹಲವಾರು ದೇಶಗಳ ರಕ್ಷಣಾ ಸಚಿವರುಗಳು ಕೂಡ ಶೋದಲ್ಲಿ ಭಾಗವಹಿಸಸಿದ್ದಾರೆ. ಈ ಸಲದ ಏರ್‌ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ಪ್ರದರ್ಶನ ಜನರು ವೀಕ್ಷಿಸುತ್ತಿದ್ದಾರೆ. ಏರ್‌ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್‌, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ.

Mallikarjun Tippar

ಪ್ರಧಾನಿ ನರೇಂದ್ರ ಮೋದಿ ಅವರು ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿ, ಯಲಹಂಕ ವಾಯು ನೆಲೆಯಿಂದ ತೆರಳಿದರು.

Mallikarjun Tippar

ಬಜೆಟ್‌ನಲ್ಲಿ ತೆರಿಗೆಯನ್ನ ಕಡಿಮೆ ಮಾಡಲಾಗಿದೆ. ಇದರ ಲಾಭ ಪಡೆದುಕೊಳ್ಳಬೇಕು. ಭಾರತದಲ್ಲಿ ರಕ್ಷಣಾ ಸೆಕ್ಟರ್ ಬಲಗೊಳಿಸುವ ಪ್ರಯತ್ನ ಮುಂದೆಯು ನಡೆಯಲಿದೆ. ನಾವೆಲ್ಲ ಜತೆಗೂಡಿ ಮುಂದೆ ಹೋಗಬೇಕಾಗಿದೆ. ಮುಂದೆಯೂ ಭವ್ಯ ಏರೋ ಇಂಡಿಯಾ ಆಯೋಜಿಸುವ ಆಶಾ ಭಾವನೆಯನ್ನು ವ್ಯಕ್ತಪಡಿಸುತ್ತೇನೆ- ಮೋದಿ

Mallikarjun Tippar

ಅಮೃತ್ ಕಾಲದಲ್ಲಿ ಭಾರತವು ಪೈಲಟ್ ತರಹ ಮುಂದೆ ಹೋಗುತ್ತಿದೆ. ಇಂದಿನ ಭಾರತವು ವೇಗವಾಗಿ, ದೂರದ ಬಗ್ಗೆ ಯೋಚಿಸುತ್ತದೆ, ತ್ವರಿತವಾಗಿ ನಿರ್ಧರಿಸುತ್ತದೆ. ಭಾರತದ ವೇಗ ಎಷ್ಟೇ ವೇಗವಾಗಿರಲಿ, ಎಷ್ಟೇ ಎತ್ತರಕ್ಕೆ ಏರಲಿ. ಯಾವಾಗಲೂ ತನ್ನ ಬೇರುಗಳಿಗೆ ಅಂಟಿಕೊಂಡಿರುತ್ತದೆ. ಇದನ್ನೇ ನಮ್ಮ ಪೈಲಟ್ ಕೂಡ ಮಾಡುತ್ತಾರೆ. ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆಯಾಗುತ್ತಿದೆ. ಎಲ್ಲದಕ್ಕೂ ಬೆಂಬಲ ನೀಡುತ್ತದೆ. ಭಾರತದಲ್ಲಿನ ಸುಧಾರಣೆಗಳಿಂದ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ನಿಯಮಗಳನ್ನು ಸರಳಗೊಳಿಸಲಾಗಿದೆ. ಉದ್ಯೋಗ ಪ್ರಕ್ರಿಯೆ ಸರಳಗೊಳಿಸಲಾಗಿದೆ. ವ್ಯಾಲಿಡಿಟಿ ಹೆಚ್ಚಿಸಲಾಗಿದೆ.

– ಪ್ರಧಾನಿ ನರೇಂದ್ರ ಮೋದಿ

Mallikarjun Tippar

ಭಾರತವು ಈಗ ಆಮದು ಮಾಡುವುದಿಲ್ಲ. ಈಗ ರಫ್ತು ಮಾಡುತ್ತಿದೆ. ನಾವು ಸಾಕಷ್ಟು ಯಶಸ್ಸು ಸಾಧಿಸುತ್ತಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಯಾರದ್ದು ಇದೆಯೋ ಅವರದ್ದೇ ಮೇಲುಗೇ ಇರುತ್ತದೆ. ಭಾರತದಲ್ಲಿ 8-9 ವರ್ಷದಲ್ಲಿ ಡಿಫೆನ್ಸ್ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಭಾರತವು 2025ರ ಹೊತ್ತಿಗೆ ರಫ್ತು ಪ್ರಮಾಣವನ್ನು 5 ಬಿಲಿಯನ್ ಡಾಲರ್‌ಗೆ ತೆಗೆದುಕೊಂಡು ಹೋಗಲಿದೆ. ಭಾರತವು ಲಾಂಚ್ ಪ್ಯಾಡ್ ತರಹ ಕೆಲಸ ಮಾಡಲಿದೆ. ಭಾರತವು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದೆ. ಭಾರತವು ಸರ್ಕಾರವು ಆಹ್ವಾನ ನೀಡುತ್ತಿದೆ. ಖಾಸಗಿ ಕಂಪನಿಗಳು ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು. ಆ ಮೂಲಕ ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ರೂಪಿಸಬೇಕು.

– ಪ್ರಧಾನಿ ನರೇಂದ್ರ ಮೋದಿ

Mallikarjun Tippar

ಭಾರತವ ತಂತ್ರಜ್ಞಾನವು ಈ ದೇಶಗಳಲ್ಲಿ ಕಾಸ್ಟ್ ಇಫೆಕ್ಟ್, ಕ್ರೆಡಿಬಲ್ ಕೂಡ ಹೌದು. ನಿಮಗೆ ಉದ್ದೇಶವೂ ಸಿಗಲಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸುವ ಅಗತ್ಯವಿಲ್ಲ. ಭಾರತದ ಸಾಮರ್ಥ್ಯವು ನಮ್ಮ ಯಶಸ್ಸು ದೊರೆಯುತ್ತಿದೆ. ಮೇಕ್ ಇನ್ ಇಂಡಿಯಾ ಪ್ರಮಾಣ ಇದಾಗಿದೆ. ಹಿಂದು ಮಹಾ ಸಾಗರದಲ್ಲಿ ಐಎನ್ಎಸ್ ವಿಕ್ರಾಂತ್ ಮೇಕ್ ಇನ್ ಇಂಡಿಯಾ ಪ್ರತಿಫಲವಾಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕಗಳು… ಇವು ಹೊಸ ಭಾರತದ ಶಕ್ತಿಗಳಾಗಿವೆ. 21 ಶತಮಾನದ ಹೊಸ ಭಾರತ ಯಾವುದೇ ಅವಕಾಶ ಬಿಟ್ಟುಕೊಡುವುದಿಲ್ಲ, ಪ್ರಯತ್ನದಲ್ಲಿ ಯಾವುದೇ ಲೋಪ ಇರುವುದಿಲ್ಲ.

– ಪ್ರಧಾನಿ ನರೇಂದ್ರ ಮೋದಿ

Exit mobile version