ಬೆಂಗಳೂರು: ಜಗತ್ತಿನ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ-2023ಕ್ಕೆ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಂಗಳೂರಲ್ಲಿ ಆಯೋಜಿಸಲಾಗಿರುವ ಈ ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿಯಾಗಿದೆ. ಈ ಹಿಂದೆ ಕೇವಲ ಇದನ್ನು ಸಾಂಪ್ರದಾಯಿಕ ರೀತಿಯಲ್ಲಿ ನೋಡಲಾಗುತ್ತಿತ್ತು. ಆದರೆ, ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದೆ. ಇದೊಂದು ಅವಕಾಶಗಳ ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
1996ರಿಂದ ಬೆಂಗಳೂರಿನ ಯಲಹಂಕ ಏರ್ಫೋರ್ಸ್ ಸ್ಟೇಶನ್ನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. (Aero India 2023) ಹಲವಾರು ದೇಶಗಳ ರಕ್ಷಣಾ ಸಚಿವರುಗಳು ಕೂಡ ಶೋದಲ್ಲಿ ಭಾಗವಹಿಸಸಿದ್ದಾರೆ. ಈ ಸಲದ ಏರ್ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್ಗಳ ರೋಚಕ ಹಾರಾಟವನ್ನು ಪ್ರದರ್ಶನ ಜನರು ವೀಕ್ಷಿಸುತ್ತಿದ್ದಾರೆ. ಏರ್ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ.
ದೇಶ ಹೊಸ ದೃಷ್ಟಿಯಿಂದ ಮುಂದೆ ಹೋಗುತ್ತಿದೆ. ಇದು ಹೊಸ ಭಾರತವನ್ನು ಪ್ರತಿಬಿಂಬಿಸುತ್ತದೆ. ಹಿಂದೆ ಇದನ್ನು ಕೇವಲ ಶೋ ಎಂದು ನೋಡಲಾಗುತ್ತಿತ್ತು. ಕಳೆದ ಹೋದ ವರ್ಷಗಳಲ್ಲಿ ಈ ಗ್ರಹಿಕೆಯನ್ನು ಬದಲಿಸಲಾಗಿದೆ. ಇಂದು ಕೇವಲ ಶೋ ಅಲ್ಲ. ಇದು ಭಾರತದ ಶಕ್ತಿಯಾಗಿದೆ. ವಿಸ್ವಾಸವನ್ನು ವೃದ್ಧಿಸಿದೆ. ಆದ್ದರಿಂದ ನಾವು ಇಂದು ಡಿಫೆನ್ಸ್ ಕಂಪನಿಗಳಿಗೆ ಕೇವಲ ಒಂದು ಮಾರುಕಟ್ಟೆಯಲ್ಲ, ಒಂದು ಡಿಫೆನ್ಸ್ ಪಾರ್ಟನರ್ ಹೌದು.
-ಪ್ರಧಾನಿ ನರೇಂದ್ರ ಮೋದಿ
ಗೆಳೆಯರೇ, ಕರ್ನಾಟಕದಂಥ ಭಾರತದ ತಂತ್ರಜ್ಞಾನ, ತಂತ್ರಜ್ಞಾನ ಜಗತ್ತಿನಲ್ಲಿ ಮಹಾರಥವಾಗಿದೆ. ಇದು ಕರ್ನಾಟಕದಲ್ಲಾಗುತ್ತಿದೆ. ಏರೋ ಸ್ಪೇಸ್, ಡಿಫೆನ್ಸ್ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಕರ್ನಾಟಕದ ಯುವಕರಿಗೆ ಹೊಸ ಅವಕಾಶಗಳು ದೊರೆಯಲಿವೆ. ಕರ್ನಾಟಕದ ಯುವಕರಿಗೆ ಆಹ್ವಾನಿಸುತ್ತಾನೆ. ತಂತ್ರಜ್ಞಾನದಲ್ಲಿ ನಿಮ್ಮ ಪ್ರತಿಭೆಯನ್ನು ರಕ್ಷಣಾ ಕ್ಷೇತ್ರದಲ್ಲಿ ಬಳಸಿ ದೇಶವನ್ನು ಬಲಿಷ್ಠಗೊಳಿಸಿ- ಮೋದಿ
ಭೂಮಿಯಿಂದ ಆಕಾಶ ತನಕ ಅವಕಾಶಗಳು ಕಾಣುತ್ತಿವೆ. ಆತ್ಮ ನಿರ್ಭರ ಭಾರತದ ತಾಖತ್ ಹೀಗೆ ಮುಂದುವರಿಯಲಿದೆ. ಏರೋ ಇಂಡಿಯಾ ಜತೆಗೆ ಡಿಫೆನ್ಸ್ ಮಿನಿಸ್ಟರ್ ಕಾನಕ್ಲೇವ್ ಕೂಡ ನಡೆಯಲಿದೆ. ಜಗತ್ತಿನ ಬಹುತೇಕರು ಭಾಗಿಯಾಗಿದ್ದಾರೆ. ಮಿತ್ರ ದೇಶಗಳ ಜತೆಗೆ ಭಾರತದ ಭಾಗಿದಾರಿಕೆ ಮುಂದುವರಿಯ ಮಾಧ್ಯವಾಗಲಿದೆ- ಮೋದಿ
ಏರೋ ಇಂಡಿಯಾದ ರೋಮಾಂಚನ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ಬೆಂಗಳೂರಿನ ಆಗಸ ಹೊಸ ಭಾರತದ ಸಾಕ್ಷಿಯಾಗಿದೆ. ಹೊಸ ಎತ್ತರ ಹೊಸ ಭಾರತದ ಸತ್ಯವಾಗಿದೆ. ಇಂದು ದೇಶ ಹೊಸ ಎತ್ತರವನ್ನು ಮುಟ್ಟುತ್ತಿದೆ. ಅದನ್ನು ಪಾರು ಕೂಡ ಮಾಡುತ್ತಿದೆ.
ಏರೋ ಇಂಡಿಯಾವು ಭಾರತದ ಸಾಮರ್ಥ್ಯದ ಉದಾಹರಣೆಯಾಗಿದೆ. 100 ದೇಶಗಳು ಪಾಲ್ಗೊಂಡಿವೆ. ಇದರಲ್ಲಿ ಭಾಗವಹಿಸಿದ್ದಾರೆ. ಈವರೆಗಿನ ಎಲ್ಲ ದಾಖಲೆಗಳನ್ನು ಮುರಿಯಲಾಗಿದೆ.
– ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾಷಣ ಶುರು