Site icon Vistara News

Aero India 2023: ಏರೋ ಇಂಡಿಯಾ 2023 ಹೊಸ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ- ಪ್ರಧಾನಿ ಮೋದಿ ಬಣ್ಣನೆ

Aero India 2023 New live updates

ಬೆಂಗಳೂರು: ಜಗತ್ತಿನ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ-2023ಕ್ಕೆ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಂಗಳೂರಲ್ಲಿ ಆಯೋಜಿಸಲಾಗಿರುವ ಈ ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿಯಾಗಿದೆ. ಈ ಹಿಂದೆ ಕೇವಲ ಇದನ್ನು ಸಾಂಪ್ರದಾಯಿಕ ರೀತಿಯಲ್ಲಿ ನೋಡಲಾಗುತ್ತಿತ್ತು. ಆದರೆ, ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದೆ. ಇದೊಂದು ಅವಕಾಶಗಳ ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

1996ರಿಂದ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್‌ ಸ್ಟೇಶನ್‌ನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. (Aero India 2023) ಹಲವಾರು ದೇಶಗಳ ರಕ್ಷಣಾ ಸಚಿವರುಗಳು ಕೂಡ ಶೋದಲ್ಲಿ ಭಾಗವಹಿಸಸಿದ್ದಾರೆ. ಈ ಸಲದ ಏರ್‌ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ಪ್ರದರ್ಶನ ಜನರು ವೀಕ್ಷಿಸುತ್ತಿದ್ದಾರೆ. ಏರ್‌ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್‌, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ.

Mallikarjun Tippar

ಏರೋ ಇಂಡಿಯಾ- 2023 ಸ್ಟಾಂಪ್ ಬಿಡುಗಡೆ ಮಾಡಿದ ಮೋದಿ

Mallikarjun Tippar

ಸಾಧನೆಯ ಕನಸನ್ನು ಕಾಣುತ್ತಿರುವ ಮತ್ತು ಕನಸಗಳನ್ನು ಈಡೇರಿಸುತ್ತಿರುವ ಉದಾಹರಣೆಗಳೊಂದಿಗೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿಗೆ ಧನ್ಯವಾದ. ದೇಶದ ರಕ್ಷಣಾ ಕ್ಷೇತ್ರವನ್ನು ಬಲಪಡಿಸುವಲ್ಲಿ ಕರ್ನಾಟಕ ತನ್ನದೇ ಆದ ಕೊಡುಗೆಯನ್ನು ನೀಡಲಿದೆ- ಬೊಮ್ಮಾಯಿ

Mallikarjun Tippar

ಏರೋ ಇಂಡಿಯಾ 2023ರಿಂದ ನಮಗೆ ಹೆಮ್ಮೆ ಇದೆ. 1940ರಿಂದ ಎಚ್ಎಎಲ್ ಸ್ಥಾಪನೆಯಿಂದ ಕರ್ನಾಟಕವು ರಕ್ಷಣಾ ಕ್ಷೇತ್ರದಲ್ಲಿ ತನ್ನದೇ ಆದ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆರ್ಯಭಟ ಜೋಡಣೆಯಾಗಿದ್ದು ಬೆಂಗಳೂರಲ್ಲಿ. ಏರೋ ಸ್ಪೇಸ್, ಡಿಫೆನ್ಸ್‌ನಲ್ಲಿ ಕರ್ನಾಟಕವು ಮುಂದಿದೆ. ನಾವು ನಿಮಗೆ ಭರವಸೆ ನೀಡುತ್ತೇವೆ- ನಿಮ್ಮ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಭಾರತವನ್ನು ಗ್ಲೋಬಲ್ ಪವರ್ ಮಾಡುವ ನಿಮ್ಮ ಪ್ರಯತ್ನದಲ್ಲಿ ಕರ್ನಾಟಕ ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದ ಬೊಮ್ಮಾಯಿ

Mallikarjun Tippar

ಇದೊಂದು ವಿಶೇಷ ಏರೋ ಇಂಡಿಯಾ ಮೈಮಾನಿಕ ಪ್ರದರ್ಶನವಾಗಿದೆ. ಭಾರತವು ರಕ್ಷಣಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿದೆ-ಬೊಮ್ಮಾಯಿ

Mallikarjun Tippar

ಪ್ರಧಾನಿ, ರಕ್ಷಣಾ ಸಚಿವರು 14ನೇ ಬಾರಿ ಏರೋ ಇಂಡಿಯಾ ಏರ್ಪಡಿಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ- ಬೊಮ್ಮಾಯಿ

Exit mobile version