ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿರುವ ಏರೋ ಇಂಡಿಯಾ- 2023 ವೈಮಾನಿಕ ಪ್ರದರ್ಶನದಲ್ಲಿ ಇಂದು ಉದ್ಘಾಟನೆ ಕಾರ್ಯಕ್ರಮ, ಸೆಮಿನಾರ್ಗಳು ಹಾಗೂ ವಿಮಾನ ಹಾರಾಟ ಪ್ರದರ್ಶನವಿರಲಿದೆ.
- ಬೆಳಗ್ಗೆ 9.30ರಿಂದ 11.30ರವರೆಗೆ ಯಲಹಂಕದ ಏರ್ಫೋರ್ಸ್ ಸ್ಟೇಶನ್ನಲ್ಲಿ ಉದ್ಘಾಟನಾ ಕಾರ್ಯಕ್ರಮ. ಮೋದಿ ಭಾಗವಹಿಸಲಿದ್ದಾರೆ.
- 10.15ರಿಂದ 10.50ರವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ.
- ವಾಯುದಳದ ಮೂರು ಕಿರಣ್ ಎಂಕೆ-2 ಏರ್ಕ್ರಾಫ್ಟ್ಗಳು ಆಗಸದಲ್ಲಿ ಹಾರಾಡುತ್ತ ರಾಷ್ಟ್ರಧ್ವಜದ ತ್ರಿವರ್ಣ ರಂಗನ್ನು ರಚಿಸಲಿವೆ.
- ತ್ರಿವರ್ಣ ಧ್ವಜವನ್ನು ಹೊತ್ತ ಮೂರು ಮಿಗ್ 17 ವಿಮಾನಗಳು ಧ್ವಜ ರಚನೆಯನ್ನು ಪ್ರದರ್ಶಿಲಿವೆ.
- ಐದು ಹೆಲಿಕಾಪ್ಟರ್ಗಳ ಮೂರು ತಂಡಗಳು (ಒಟ್ಟು 15 ಹೆಲಿಕಾಪ್ಟರ್ಗಳು) ವೀಕ್ಷಕರ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಹಾರಾಡಿ ವಿಶಿಷ್ಟ ರಚನೆಗಳನ್ನು ರೂಪಿಸಲಿವೆ. ಇದರಲ್ಲಿ ಭಾಗವಹಿಸುವ ಹೆಲಿಕಾಪ್ಟರ್ಗಳು ಭೀಮ್, ದಕ್ಷ್, ರುದ್ರ, ಪ್ರಚಂಡ ಹಾಗೂ ರುದ್ರ.
- ಒಂದು LCA SPT ಏರ್ಕ್ರಾಫ್ಟ್, ಎರಡು ಹಿಂದೂಸ್ತಾನ್ ಟರ್ಬೋ ಟ್ರೇನರ್, ಎರಡು ಇಂಟರ್ಮೀಡಿಯೆಟ್ ಜೆಟ್ ಟ್ರೇನರ್, ಒಂದು HAWK ಹಾಗೂ ಒಂದು ಹಿಂದೂಸ್ತಾನ್- 228ಗಳು ಸೇರಿ ʼಗುರುಕುಲʼ ರಚನೆಯನ್ನು ಪ್ರದರ್ಶಿಸಲಿವೆ.
- EMBRAER-145 ಏರ್ಕ್ರಾಫ್ಟ್, ಎರಡು ಸುಖೋಯ್-30 ಹಾಗೂ ಎರಡು ಮಿಗ್-29ಗಳು ಸೇರಿ ʻನೇತ್ರʼ ರಚನೆಯನ್ನು ಪ್ರದರ್ಶಿಸಲಿವೆ.
- ಒಂದು ಮಿಗ್, ಎರಡು ಜಾಗುವಾರ್, ಎರಡು ಮಿರಾಜ್, ಎರಡು ರಫೇಲ್ ವಿಮಾನಗಳು ಸೇರಿ ʼಅರ್ಜುನʼ ರಚನೆಯನ್ನು ತೋರಿಸಲಿವೆ.
- ಭಾರತೀಯ ತಂತ್ರಜ್ಞಾನದ ಹಗುರ ಯುದ್ಧ ವಿಮಾನ ತೇಜಸ್ನ 9 ಏರ್ಕ್ರಾಫ್ಟ್ಗಳು ʼತೇಜಸ್ʼ ಸಂರಚನೆಯನ್ನು ಪ್ರದರ್ಶಿಸಲಿವೆ.
- ಭಾರತೀಯ ವೈಮಾನಿಕ ನೌಕಾದಳದ ವಿಮಾನ P8i- ಪೋಸಿಡಾನ್ ಹಾಗೂ ಎರಡು ಹಗುರ ಯುದ್ಧ ವಿಮಾನಗಳು ʼವರುಣʼ ರಚನೆಯನ್ನು ಕಾಣಿಸಲಿವೆ.
- ಮೂರು ಸುಖೋಯ್-30 ವಿಮಾನಗಳು ʼತ್ರಿಶೂಲʼ ರಚನೆಯನ್ನು ತೋರಿಸಲಿವೆ.
ಇದನ್ನೂ ಓದಿ: Aero India 2023 : ಒಂದು ಪೂರ್ಣ ವಿಮಾನವನ್ನು ರಾಜ್ಯದಲ್ಲೇ ನಿರ್ಮಿಸುವ ಗುರಿ ಶೀಘ್ರ ನನಸು ಎಂದ ಸಿಎಂ ಬೊಮ್ಮಾಯಿ