Site icon Vistara News

Aero India 2023: ಆಗಸದಲ್ಲಿ ಸುಖೋಯ್, ಹೆಲಿಕಾಪ್ಟರ್, ತೇಜಸ್ ಫೈಟರ್ ಜೆಟ್‌ಗಳ ನರ್ತನ

Aero India 2023: Sukhoi, helicopters, Tejas fighter jets performed in Sky

ಬೆಂಗಳೂರು: ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 14ನೇ ಆವೃತ್ತಿ ಏರೋ ಇಂಡಿಯಾ 2023ಕ್ಕೆ ಸೋಮವಾರ ಬೆಳಗ್ಗೆ ಪಿಎಂ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಭಾರತೀಯ ಸೇನಾ ಹೆಲಿಕಾಫ್ಟರ್‌ಗಳು ತಮ್ಮ ಕಸರತ್ತುಗಳ ಮೂಲಕ ಪ್ರಧಾನಿಗೆ ವಿಶೇಷ ಸ್ವಾಗತವನ್ನು ಕೋರಿದವು. ಬಳಿಕ ವಿವಿಧ ಯುದ್ಧ ವಿಮಾನಗಳಿಂದ ಬಾನಾಂಗಳದಲ್ಲಿ ವೈಮಾನಿಕ ಪ್ರದರ್ಶನ ನಡೆಯಿತು. ನೋಡುಗರ ಕಣ್ಮನ ಸೆಳೆಯಿತು(Aero India 2023).

ಸುಖೋಯ್‌ ಎಸ್‌ಯು-30 ಎಂಕೆಐ

ಸುಖೋಯ್. ಇದು ಭಾರತೀಯ ವಾಯುಪಡೆಯ ಪ್ರಮುಖ ಯುದ್ಧ ವಿಮಾನವಾಗಿದೆ. ಏರ್‌ ಟು ಏರ್‌ ಮತ್ತು ಏರ್‌ ಟು ಗ್ರೌಂಡ್‌ ಕ್ಷಮತೆಯಲ್ಲಿ ಹೆಸರು ಮಾಡಿದ ವಿಮಾನವಿದು. ಗಂಟೆಗೆ 2120 ಕಿಲೋಮೀಟರ್‌ ವೇಗದಲ್ಲಿ ಹಾರುವ ಈ ಯುದ್ಧ ವಿಮಾನವು ಒಟ್ಟು 38 ಸಾವಿರ ಕೆಜಿ ಭಾರದೊಂದಿಗೆ ಆಕಾಶಕ್ಕೆ ನೆಗೆಯಬಲ್ಲದು. ವಿವಿಧ ರೀತಿಯ ರೇಡಾರ್‌ಗಳು, ಕ್ಷಿಪಣಿಗಳು, ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಕೂಡ ಹೊತ್ತು ಹಾರಬಲ್ಲದು.

ಲೈಟ್ ವೇಟ್ ಹೆಲಿಕಾಪ್ಟರ್ ಪ್ರಚಂಡದಿಂದ ವೈಮಾನಿಕ ಪ್ರದರ್ಶನ ನಡೆಯಿತು. ಸಿಯಾಚಿನ್ ಅಂತಹ ಪ್ರದೇಶಗಳಲ್ಲಿ ಬಳಕೆ ಆಗುವಂತ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರ್ ಇದಾಗಿದೆ. 6 ನಿಮಿಷಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಿತು. ಮತ್ತೊಂದೆಡೆ, ತೇಜಸ್ ಫೈಟರ್ ಜೆಟ್ ನಿಂದ ಸಾಹಸಮಯ ವೈಮಾನಿಕ ಪ್ರದರ್ಶನ ನಡೆಯಿತು ಮತ್ತು ಇದು ಅತ್ಯಾಕರ್ಷಕವಾಗಿತ್ತು.

ಇದನ್ನೂ ಓದಿ: Aero India 2023: ಏರೋ ಇಂಡಿಯಾ 2023 ಹೊಸ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ- ಪ್ರಧಾನಿ ಮೋದಿ ಬಣ್ಣನೆ

ಸೂರ್ಯ ಕಿರಣ್ ಟೀಂ ನಡೆಸಿದ ಪ್ರದರ್ಶನ

9 ಸೂರ್ಯಕಿರಣ್ ಯುದ್ಧ ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಿತು. ಆಗಸದಲ್ಲಿ ಈ ತಂಡದಿಂದ ನಡೆದ ಪ್ರದರ್ಶನವು ನೋಡಗರನ್ನು ಬೆಚ್ಚಿ ಬೀಳಿಸಿತು. ಸೂರ್ಯ ಕಿರಣ್ C17 globe master ಯುದ್ದ ವಿಮಾನಗಳಿಂದ ಪ್ರದರ್ಶನವು ಅತ್ಯಾಕರ್ಷಕವಾಗಿತ್ತು.

Exit mobile version