ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ವರೆಗೆ ʼಏರೋ ಇಂಡಿಯಾ-2023ʼ (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಏರೋ ಇಂಡಿಯಾ ದ್ವೈವಾರ್ಷಿಕ ಏರೋ ಶೋ ಮತ್ತು ವೈಮಾನಿಕ ಪ್ರದರ್ಶನವಾಗಿದ್ದು, ಈ ಬಾರಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ʼತೇಜಸ್ʼ, ಪೂರ್ಣ ಕಾರ್ಯಾಚರಣೆ ಸಾಮರ್ಥ್ಯ (ಎಫ್ಒಸಿ) ವಿನ್ಯಾಸದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸುವ ʼಏರೋ ಇಂಡಿಯಾʼ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. “ದ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್”- ’ಬಿಲಿಯನ್ ಅವಕಾಶಗಳಿಗೆ ರಹದಾರಿ’ ಎಂಬ ಘೋಷವಾಕ್ಯದೊಂದಿಗೆ, ಏರೋ ಇಂಡಿಯಾ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಹಾಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ.
ಏರೋ ಇಂಡಿಯಾದ 14ನೇ ಆವೃತ್ತಿಯು ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಹೊಂದಿದೆ. ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ | Union Budget 2023: ನಮ್ಮ ಬಜೆಟ್ ಅನ್ನು ಜಗತ್ತು ಸ್ವೀಕರಿಸಲು 10 ಕಾರಣ ನೀಡಿದ ವಿದೇಶಾಂಗ ಸಚಿವ ಜೈಶಂಕರ್
ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್‌ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳು, ಸಿಸ್ಟಮ್‌ಗಳು (ಎಲ್‌ಆರ್‌ಯು) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್‌ಗಾಗಿ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂಡಿಯಾ ಪೆವಿಲಿಯನ್ ಭಾರತದ ಪ್ರಗತಿಯನ್ನು ಮತ್ತಷ್ಟು ಬಿಂಬಿಸುತ್ತದೆ. ರಕ್ಷಣಾ ಬಾಹ್ಯಾಕಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡಲಾಗುತ್ತದೆ.
ಎಲ್‌ಸಿಎ ತೇಜಸ್ ಒಂದೇ ಎಂಜಿನ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್‌ಸಿಎಸ್) ಜತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವನ್ನು ‘ಗಾಳಿ ಯುದ್ಧ’ ಮತ್ತು ’ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ‘ವಿಚಕ್ಷಣ’ ಮತ್ತು ಆ್ಯಂಟಿಶಿಪ್ ಆಗಿ ದ್ವಿತೀಯ ಪಾತ್ರಗಳನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ | Union Budget 2023: ರೈಲ್ವೆಗೆ 2.41 ಲಕ್ಷ ಕೋಟಿ ರೂ. ಹಂಚಿಕೆ, ಯಾವುದಕ್ಕೆಲ್ಲ ವೆಚ್ಚ?
ಏರ್‌ಫ್ರೇಮ್‌ನಲ್ಲಿ ಸುಧಾರಿತ ಸಂಯೋಜನೆಗಳ ವ್ಯಾಪಕ ಬಳಕೆಯು ತೂಕದ ಅನುಪಾತ, ಕಡಿಮೆ ರೇಡಾರ್ ಸಂಕೇತಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತೇಜಸ್ ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್‌ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್‌ಎ ರಾಡಾರ್, ಎಸ್‌ಪಿಜೆಯೊಂದಿಗೆ ಯುಇಡಬ್ಲ್ಯುಎಸ್, ಸಿಎಮ್‌ಡಿಎಸ್, ಎಚ್‌ಎಮ್‌ಡಿಎಸ್ ಡ್ಯಾಶ್‌ವಿ, ಬಿವಿಆರ್ ಕ್ಷಿಪಣಿ ಸಾಮರ್ಥ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲಘು ಯುದ್ಧ ವಿಮಾನ (ಎಲ್‌ಸಿಎ) ಪ್ರಸ್ತುತ ವಾಯುಪಡೆ ಯುದ್ಧ ವಿಮಾನ (ಎರಡು ಆಸನ), ಎಲ್‌ಸಿಎ ನೌಕಾ ವಿಮಾನ (ಎರಡು ಆಸನ) ಲಭ್ಯವಿದೆ. ತೇಜಸ್‌ಗಾಗಿ ಎಲ್‌ಸಿಎ, ಎಲ್‌ಐಎಫ್‌ಟಿ (ಲೀಡ್ ಇನ್ ಫೈಟರ್ ಟ್ರೈನರ್) ಮತ್ತು ಎಂಕೆ-2 ನಂತಹ ಇತರ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ತೇಜಸ್ ಲಘು ಯುದ್ಧ ವಿಮಾನದ ಕೆಲವು ವೈಶಿಷ್ಟತೆಗಳು
- ಇದು ಚಿಕ್ಕ ಮತ್ತು ಹಗುರವಾದ ವಿಮಾನಗಳಲ್ಲಿ ಒಂದಾಗಿದೆ
- ಅತ್ಯುತ್ತಮ ವಿಮಾನ ಸುರಕ್ಷತಾ ಇತಿಹಾಸ
- ಎಲ್ಲ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಎಲ್ಲ ನಾಲ್ಕು ರೂಪಾಂತರಗಳಲ್ಲಿ ಲಭ್ಯ
- ಶೇ.90ರಷ್ಟು ಪ್ರದೇಶ ಮತ್ತು ಶೇ.45ರಷ್ಟು ತೂಕ ಒಳಗೊಂಡಿದೆ
- ಕನಿಷ್ಠ ಆರ್ ಸಿಎಸ್ ಜತೆಗೆ ಅತಿ ಎತ್ತರದಲ್ಲಿ ಹಾರಾಡುವ ಸೂಪರ್ ಸಾನಿಕ್
- ವೈರ್ ಏರ್ಕ್ರಾಫ್ಟ್ ಮೂಲಕ ಕ್ವಾಡ್-ರೆಡಂಡೆಂಟ್ ಫ್ಲೈ
- ಎಯುಡಬ್ಲೂನ ಶೇ.30ರ ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ (ಎಲ್ಲ ತೂಕವೂ ಸೇರಿ)
- ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ (ಮುಕ್ತ ವಿನ್ಯಾಸ)
- ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣೆ ಸ್ನೇಹಿ