Aero India 2023: ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿ ತೇಜಸ್‌ ಯುದ್ಧ ವಿಮಾನ Vistara News

Aero India

Aero India 2023: ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿ ತೇಜಸ್‌ ಯುದ್ಧ ವಿಮಾನ

Aero India 2023: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ವರೆಗೆ ʼಏರೋ ಇಂಡಿಯಾ-2023ʼ ವೈಮಾನಿಕ ಪ್ರದರ್ಶನವನ್ನು ಕೇಂದ್ರ ರಕ್ಷಣಾ ಸಚಿವಾಲಯವು ಆಯೋಜಿಸಿದೆ.

VISTARANEWS.COM


on

809 Companies from 98 Countries are participating in Aero India 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ವರೆಗೆ ʼಏರೋ ಇಂಡಿಯಾ-2023ʼ (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಏರೋ ಇಂಡಿಯಾ ದ್ವೈವಾರ್ಷಿಕ ಏರೋ ಶೋ ಮತ್ತು ವೈಮಾನಿಕ ಪ್ರದರ್ಶನವಾಗಿದ್ದು, ಈ ಬಾರಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ʼತೇಜಸ್‌ʼ, ಪೂರ್ಣ ಕಾರ್ಯಾಚರಣೆ ಸಾಮರ್ಥ್ಯ (ಎಫ್ಒಸಿ) ವಿನ್ಯಾಸದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸುವ ʼಏರೋ ಇಂಡಿಯಾʼ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. “ದ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್”- ’ಬಿಲಿಯನ್ ಅವಕಾಶಗಳಿಗೆ ರಹದಾರಿ’ ಎಂಬ ಘೋಷವಾಕ್ಯದೊಂದಿಗೆ, ಏರೋ ಇಂಡಿಯಾ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಹಾಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ.

ಏರೋ ಇಂಡಿಯಾದ 14ನೇ ಆವೃತ್ತಿಯು ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಹೊಂದಿದೆ. ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ | Union Budget 2023: ನಮ್ಮ ಬಜೆಟ್‌ ಅನ್ನು ಜಗತ್ತು ಸ್ವೀಕರಿಸಲು 10 ಕಾರಣ ನೀಡಿದ ವಿದೇಶಾಂಗ ಸಚಿವ ಜೈಶಂಕರ್

ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್‌ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳು, ಸಿಸ್ಟಮ್‌ಗಳು (ಎಲ್‌ಆರ್‌ಯು) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ಪ್ಲಾಟ್‌ಫಾರ್ಮ್‌ಗಾಗಿ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂಡಿಯಾ ಪೆವಿಲಿಯನ್ ಭಾರತದ ಪ್ರಗತಿಯನ್ನು ಮತ್ತಷ್ಟು ಬಿಂಬಿಸುತ್ತದೆ. ರಕ್ಷಣಾ ಬಾಹ್ಯಾಕಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡಲಾಗುತ್ತದೆ.

ಎಲ್‌ಸಿಎ ತೇಜಸ್ ಒಂದೇ ಎಂಜಿನ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್‌ಸಿಎಸ್) ಜತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವನ್ನು ‘ಗಾಳಿ ಯುದ್ಧ’ ಮತ್ತು ’ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ‘ವಿಚಕ್ಷಣ’ ಮತ್ತು ಆ್ಯಂಟಿಶಿಪ್‌ ಆಗಿ ದ್ವಿತೀಯ ಪಾತ್ರಗಳನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ | Union Budget 2023: ರೈಲ್ವೆಗೆ 2.41 ಲಕ್ಷ ಕೋಟಿ ರೂ. ಹಂಚಿಕೆ, ಯಾವುದಕ್ಕೆಲ್ಲ ವೆಚ್ಚ?

ಏರ್‌ಫ್ರೇಮ್‌ನಲ್ಲಿ ಸುಧಾರಿತ ಸಂಯೋಜನೆಗಳ ವ್ಯಾಪಕ ಬಳಕೆಯು ತೂಕದ ಅನುಪಾತ, ಕಡಿಮೆ ರೇಡಾರ್ ಸಂಕೇತಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತೇಜಸ್ ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್‌ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್‌ಎ ರಾಡಾರ್, ಎಸ್‌ಪಿಜೆಯೊಂದಿಗೆ ಯುಇಡಬ್ಲ್ಯುಎಸ್, ಸಿಎಮ್‌ಡಿಎಸ್, ಎಚ್‌ಎಮ್‌ಡಿಎಸ್ ಡ್ಯಾಶ್‌ವಿ, ಬಿವಿಆರ್ ಕ್ಷಿಪಣಿ ಸಾಮರ್ಥ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲಘು ಯುದ್ಧ ವಿಮಾನ (ಎಲ್‌ಸಿಎ) ಪ್ರಸ್ತುತ ವಾಯುಪಡೆ ಯುದ್ಧ ವಿಮಾನ (ಎರಡು ಆಸನ), ಎಲ್‌ಸಿಎ ನೌಕಾ ವಿಮಾನ (ಎರಡು ಆಸನ) ಲಭ್ಯವಿದೆ. ತೇಜಸ್‌ಗಾಗಿ ಎಲ್‌ಸಿಎ, ಎಲ್‌ಐಎಫ್‌ಟಿ (ಲೀಡ್ ಇನ್ ಫೈಟರ್ ಟ್ರೈನರ್) ಮತ್ತು ಎಂಕೆ-2 ನಂತಹ ಇತರ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ತೇಜಸ್‌ ಲಘು ಯುದ್ಧ ವಿಮಾನದ ಕೆಲವು ವೈಶಿಷ್ಟತೆಗಳು

  • ಇದು ಚಿಕ್ಕ ಮತ್ತು ಹಗುರವಾದ ವಿಮಾನಗಳಲ್ಲಿ ಒಂದಾಗಿದೆ
  • ಅತ್ಯುತ್ತಮ ವಿಮಾನ ಸುರಕ್ಷತಾ ಇತಿಹಾಸ
  • ಎಲ್ಲ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಎಲ್ಲ ನಾಲ್ಕು ರೂಪಾಂತರಗಳಲ್ಲಿ ಲಭ್ಯ
  • ಶೇ.90ರಷ್ಟು ಪ್ರದೇಶ ಮತ್ತು ಶೇ.45ರಷ್ಟು ತೂಕ ಒಳಗೊಂಡಿದೆ
  • ಕನಿಷ್ಠ ಆರ್ ಸಿಎಸ್ ಜತೆಗೆ ಅತಿ ಎತ್ತರದಲ್ಲಿ ಹಾರಾಡುವ ಸೂಪರ್ ಸಾನಿಕ್
  • ವೈರ್ ಏರ್‌ಕ್ರಾಫ್ಟ್ ಮೂಲಕ ಕ್ವಾಡ್-ರೆಡಂಡೆಂಟ್ ಫ್ಲೈ
  • ಎಯುಡಬ್ಲೂನ ಶೇ.30ರ ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ (ಎಲ್ಲ ತೂಕವೂ ಸೇರಿ)
  • ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ (ಮುಕ್ತ ವಿನ್ಯಾಸ)
  • ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣೆ ಸ್ನೇಹಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Aero India

Aero india 2023 : ರಕ್ಷಣಾ ಇಲಾಖೆಯಿಂದ 32 ಕಂಪನಿಗಳ ಜತೆ ಒಪ್ಪಂದ

ಏರೋ ಇಂಡಿಯಾದಲ್ಲಿ (Aero india 2023) ರಕ್ಷಣಾ ವಲಯಕ್ಕೆ ಅಗತ್ಯಕ್ಕೆ ತಕ್ಕ ಹಾಗೆ ಒಂಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

VISTARANEWS.COM


on

Aero India
Koo

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ (Aero india 2023) 35 ಕಂಪನಿಗಳ ಜತೆ ರಕ್ಷಣಾ ಇಲಾಖೆಯು ಒಪ್ಪಂದ ಮಾಡಿಕೊಂಡಿದೆ. ಬಂಧನ್ ಕಾರ್ಯಕ್ರಮದಡಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2,930.98 ಕೋಟಿ ರೂಪಾಯಿ ಮೊತ್ತದ ಒಪ್ಪಂದ ನಡೆದಿದೆ. ಕಾರ್ಯಕ್ರಮದಲ್ಲಿ ಒಟ್ಟು 266 ಕಂಪನಿಗಳು ಪಾಲ್ಗೊಂಡಿದ್ದವು.

ಒಪ್ಪಂದಗಳಿಗೆ ಸಹಿ ಹಾಕಿದ ಕಂಪನಿಗಳು

ಬೆಲಾಟೆಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್-630 ಕೋಟಿ, ಏಡಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್-500 ಕೋಟಿ, ಫಿಕ್ಸಲ್ ಸ್ಪೇಸ್ ಇಂಡಿಯಾ ಪ್ರೈ.ಲಿ-300 ಕೋಟಿ, ಡೈನಾಮೆಟಿಕ್ ಟೆಕ್ನಾಲಜೀಸ್-250 ಕೋಟಿ, ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ &ಏರೋಸ್ಪೇಸ್ ಟೆಕ್ನಾಲಜೀಸ್ , TESCOM-100 ಕೋಟಿ, ಡೆಲ್ಪ್ಟ್ (ಜೆ.ಕೆ.ಪೇಪರ್ ಲಿ.)-100 ಕೋಟಿ, ನೆಕ್ಸ್ಟ್ ಬಿಗ್ ಇನೋವೇಷನ್ ಲ್ಯಾಬ್ಸ್ ಲಿ.-100 ಕೋಟಿ, SASMOS HET ಟೆಕ್ನಾಲಜಿಸ್ ಲಿ.-75 ಕೋಟಿ, MS ವೇವ್ಸ್ ಮಷಿನ್-50 ಕೋಟಿ, ಭೂಮಿ ಎನ್ ಟೆಕ್ ಇಕ್ವಿಪ್ ಮೆಂಟ್ಸ್ ಪ್ರೈ.ಲಿ-50 ಕೋಟಿ, ಏರೋ ಪ್ಲಾಟಿನ್ ಟೆಕ್ನಾಲಜಿಸ್ ಪ್ರೈ.ಲಿ-30 ಕೋಟಿ, ಕಾಸ್ಟ್ ಕ್ರಾಪ್ಟ್-30 ಕೋಟಿ, ಡಕಂ ಏರೋಸ್ಪೇಸ್ ಟೆಕ್ನಾಲಜೀಸ್ ಪ್ರೈ.ಲಿ-25 ಕೋಟಿ, ಎಲ್ಡಾಸ್ ಟೆಕ್ನಾಲಜಿ-23 ಕೋಟಿ, ಟೆಕ್ಸಲ್ ಎಂಜಿನಿಯರ್ಸ್-20 ಕೋಟಿ.

ಇದನ್ನೂ ಓದಿ : Aero India 2023 : ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ತಂಡ, ನೂತನ F-35 ಯುದ್ಧ ವಿಮಾನ ಪ್ರದರ್ಶನ

ವೈಭವ್ ಎಂಟರ್ ಪ್ರೈಸಸ್-20 ಕೋಟಿ, ಹಿಮಾನ್ಸಿ ಥರ್ಮಲ್ ಸೊಲ್ಯೂಷನ್ಸ್-16.28 ಕೋಟಿ, ಎವಿಟಮ್ ಟೆಕ್ನಾಲಜೀಸ್ -16 ಕೋಟಿ, ಆರವ ಏರೋಸ್ಪೇಸ್-16 ಕೋಟಿ, SST ಕಟಿಂಗ್ ಟೂಲ್ಸ್-15 ಕೋಟಿ, ಆಲ್ಟೀಸ್ ಏರೋಸ್ಪೇಸ್ ಪ್ರೈ.ಲಿ-15 ಕೋಟಿ, ಉದಯ್ ಎಂಟರ್ ಪ್ರೈಸಸ್-15 ಕೋಟಿ, ಸೋಮಾ ಆಟೋಮೇಶನ್-12 ಕೋಟಿ, IIGP ವಾಲ್ವ್ ಟೆಕ್ನಾಲಜೀಸ್ ಪ್ರೈ.ಲಿ-12 ಕೋಟಿ, ಲವೀರಾ ಟೆಕ್ನಾಲಜಿ ಪ್ರೈ.ಲಿ-11 ಕೋಟಿ, ಗರುಡ ಏರೋಟೆಕ್-10 ಕೋಟಿ, G S ಗಿಯರ್ಸ್ ಪ್ರೈ.ಲಿ-8 ಕೋಟಿ, ಇನ್ಫಿನಿಟಿ ಏರೋಟೆಕ್-7 ಕೋಟಿ, ಡಟಾಕ್ಯೂ ಸರ್ವೀಸಸ್ ಪ್ರೈ.ಲಿ-2.70 ಕೋಟಿ, ಬುರ್ಜಿ ಏರೋಸ್ಪೇಸ್-2 ಕೋಟಿ, ಜನರಸ್ ಏರೋಸ್ಪೇಸ್ & ಇನ್ಪಾರ್ಮೇಶನ್ ಟೆಕ್ನಾಲಜಿ ಪ್ರೈ.ಲಿ-320 ಕೋಟಿ, ಏಸೋನಾಟೆಕ್ ಮ್ಯಾನಿಫ್ಯಾಕ್ಚರಿಂಗ್ ಪ್ರೈ.ಲಿ-150 ಕೋಟಿ.

Continue Reading

Aero India

Aero India 2023: ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65: ಸಿಎಂ ಬೊಮ್ಮಾಯಿ

Aero India 2023: ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ದೇಶೀಯ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

VISTARANEWS.COM


on

Approval for release of funds for various infrastructure projects in state cabinet meeting
Koo

ಬೆಂಗಳೂರು: ರಕ್ಷಣಾ ವಲಯದಲ್ಲಿ (Aero India 2023) ಬಂಧನ್‌ ಎನ್ನುವುದು ರಕ್ಷಣಾ ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮಧ್ಯೆ ಇರುವ ದೀರ್ಘಕಾಲದ ಸಂಬಂಧವಾಗಿದ್ದು, ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65 ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಏರೋ ಇಂಡಿಯಾ 2023ರ ಬಂಧನ್ – ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ರಕ್ಷಣೆ ಮತ್ತು ಏರೋಸ್ಪೇಸ್ ವಲಯವು ಸ್ಥಾಪಿತ ಕ್ಷೇತ್ರವಾಗಿದ್ದು, ಇದರಲ್ಲಿ ಅತ್ಯಂತ ಪರಿಣಿತರು ಮಾತ್ರ ಕೆಲಸವನ್ನು ಸಂಪೂರ್ಣಗೊಳಿಸಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದೊಂದಿಗೆ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ರಕ್ಷಣಾ ವಲಯವು ತೆರೆದುಕೊಂಡಿದೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಬೇಡಿಕೆಯ ಶೇ.80 ರಷ್ಟನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಪ್ರಧಾನಿಗಳ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ದೇಶದಲ್ಲಿಯೇ ತಯಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Budget: ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೇಕು ಪ್ರತ್ಯೇಕ ಅನುದಾನ: ಸಿಎಂಗೆ ಪ್ರೊ. ಎಂ.ಆರ್.‌ ದೊರೆಸ್ವಾಮಿ ಪತ್ರ

ನಮ್ಮ ಉತ್ಪಾದನೆ ಸಾಮರ್ಥ್ಯ ಅಂದುಕೊಂಡದ್ದಕ್ಕಿಂತ ಹೆಚ್ಚಿದೆ

ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ನಮ್ಮ ದೇಶದ ಉತ್ಪಾದನಾ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ. ಎಂಎಸ್ಎಂಇ ಕೂಡ ಇದನ್ನು ಉತ್ಪಾದನೆ ಮಾಡಬಲ್ಲುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಕ್ಷಣಾ ವಸ್ತುಗಳ ಉತ್ಪಾದನಾ ಸಂಸ್ಥೆಗಳು ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲುದಾಗಿದೆ ಎಂದು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ವಿಫುಲ ಅವಕಾಶ

ಉತ್ಪಾದನಾ ವಲಯದಲ್ಲಿ ಡೊಮೈನ್ ಬದಲಾವಣೆಯಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ಆದ್ದರಿಂದ ನಾವು ಮಹತ್ವಾಕಾಂಕ್ಷೆಯಿಂದ ವೈಜ್ಞಾನಿಕವಾಗಿ ಯೋಚನೆ ಮಾಡಬೇಕಿದೆ. ಈ ಎಲ್ಲ ವಿಷಯಗಳನ್ನು ಬಂಧನ್ ಹೆಸರಲ್ಲಿ ನಾವು ಒಟ್ಟಿಗೆ ತಂದಿದ್ದೇವೆ. ಇಂದು ಸಹಿ ಆಗಿರುವ ಎಲ್ಲ ಒಪ್ಪಂದಗಳು ಭವಿಷ್ಯದ ಅಗತ್ಯ, ಬೆಳವಣಿಗೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಾಕ್ಷಿಯಾಗಲಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | Payment aggregator : ರಿಲಯನ್ಸ್‌, ಜೊಮ್ಯಾಟೊ ಸೇರಿ 32 ಕಂಪನಿಗಳಿಗೆ ಪೇಮೆಂಟ್‌ ಅಗ್ರಿಗೇಟರ್‌ ಲೈಸೆನ್ಸ್ ವಿತರಣೆ

32 ಒಪ್ಪಂದಗಳಿಗೆ ರಾಜ್ಯ ಸಹಿ

ಬೆಂಗಳೂರಿನಲ್ಲಿ ಏರೋ ಸ್ಪೇಸ್ ಪಾರ್ಕ್ ಸ್ಥಾಪನೆ ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರದ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ಸಂಸ್ಥೆಗಳು ಶೇ.65 ಪಾಲನ್ನು ಪೂರೈಸುತ್ತಿದೆ. 2900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿವೆ. ಈ ಏರೋ ಇಂಡಿಯಾ ಪ್ರದರ್ಶನ “ಟಾಕ್ ಆಫ್ ದಿ ಟೌನ್” ಆಗಿದೆ ಎಂದು ಸಿಎಂ ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Continue Reading

Aero India

Aero India 2023: ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂ.1 ಆಗಲು ಅರ್ಹ: ಸಿಎಂ ಬೊಮ್ಮಾಯಿ

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

VISTARANEWS.COM


on

CM Basavaraj Bommai says Karnataka deserves to be no.1 in aerospace sector:
Koo

ಬೆಂಗಳೂರು: ಏರೋಸ್ಪೇಸ್ (Aero India 2023) ವಲಯದಲ್ಲಿ ಲಂಡನ್ ಮತ್ತು ಸಿಂಗಾಪುರದ ನಂತರ ಕರ್ನಾಟಕ ರಾಜ್ಯವಿದ್ದು, ಕರ್ನಾಟಕ ನಂ.1 ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿ, ಬೆಂಗಳೂರು ಸತತ 14 ಬಾರಿ ಏರ್ ಶೋ ಏರ್ಪಡಿಸಿದೆ. ದೇಶದ ಯಾವುದೇ ರಾಜ್ಯ ಇಷ್ಟೊಂದು ಏರ್ ಶೋ ಏರ್ಪಡಿಸಿಲ್ಲ. ಈ ಬಾರಿ ಅತಿ ದೊಡ್ಡ ಶೋ, ಹೆಚ್ಚಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಪ್ರದರ್ಶನಗಳು ನಡೆಯುತ್ತಿದೆ ಎಂದರು.

ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಎಂಜಿನಿಯರ್‌ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೋ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಹಿರಿಯರು 1960ರಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಯಶಸ್ಬಿಯಾಗಿ ಏರ್ ಶೋ ಆಯೋಜನೆ ಮಾಡಿದ್ದಾರೆ ಎಂದು ಅಭಿನಂದಿಸಿದರು.‌

ನಮ್ಮ ರಾಜ್ಯ ಯುವ ಪ್ರತಿಭಾವಂತ ಉದ್ಯಮಿಗಳು, ತಂತ್ರಜ್ಞರು, ಉದ್ಯಮಗಳು ಬೆಳೆಯಲು ಕಾರಣರಾಗಿದ್ದಾರೆ. ಯುವ ಪ್ರತಿಭಾವಂತರು ಇರುವುದರಿಂದ ಏರೊ ಸ್ಪೇಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಏರೊಸ್ಪೇಸ್ ನೀತಿ ರಾಜ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಉದ್ಯಮಗಳಿಗೆ ಸೂಕ್ತ ಅವಕಾಶಗಳಿವೆ. ನಾವು ಶೇ.65 ರಷ್ಟು ರಕ್ಷಣಾ ಪರಿಕರ ಉತ್ಪಾದನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.70 ರಷ್ಟು ಉತ್ಪಾದನೆ ಮಾಡುತ್ತೇವೆ.
ಈಗಾಗಲೇ ಅನೇಕರು ಇಲ್ಲಿ ಬಂಡವಾಳ ಹೂಡಿದ್ದಾರೆ, ಇನ್ನು ಅನೇಕರು ಬಂಡವಾಳ ಹೂಡುವ ಇಚ್ಛೆ ಹೊಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Sevalal Jayanthi: ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಯುಎಸ್ ಕಾನ್ಸುಲೇಟ್ ರಾಯಭಾರಿ ಬೆಂಗಳೂರು ಏರೋ ಇಂಡಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿ ಉತ್ತಮ ಪರಿಸರ, ಆರ್ಥಿಕ ಪರಿಸ್ಥಿತಿಯಿದ್ದು, ನಮ್ಮ ಬೆಳವಣಿಗೆಯಲ್ಲಿ ನೀವು ಭಾಗಿದಾರರಾಗಿ ಎಂದು ಕರೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ ಹಾಜರಿದ್ದರು.

Continue Reading

Aero India

Aero India 2023: ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಹೂಡಿಕೆದಾರರಿಗೆ ಸರ್ಕಾರ ಆಹ್ವಾನ

ಭಾರತದಲ್ಲಿ ರಕ್ಷಣಾ ವಲಯದ ಉದ್ದಿಮೆಗೆ ಸರ್ಕಾರ ಉತ್ತೇಜನ ಮುಂದುವರಿಸಲಿದೆ. ಇದು ದೇಶವನ್ನು ಸ್ವಾವಲಂಬಿಯಾಗಿಸುವುದಲ್ಲದೆ, ಉದ್ಯೋಗ ಸೃಷ್ಟಿಗೆ ಕೂಡ ಸಹಕಾರಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Aero India 2023) ವಿವರಿಸಿದ್ದಾರೆ.

VISTARANEWS.COM


on

rajanath singh
Koo

ಬೆಂಗಳೂರು: ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆಯುವಂತೆ ಜಾಗತಿಕ ಮಟ್ಟದ ಹೂಡಿಕೆದಾರರು, ಉದ್ಯಮಿಗಳು, ನಾನಾ ಉತ್ಪನ್ನಗಳ ಮೂಲ ಉತ್ಪಾದಕರಿಗೆ (Global original equipment manufactures) ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ-ಇಂಡಿಯಾ ಏರ್‌ ಶೋದ (Aero India 2023) ನೇಪಥ್ಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳ ಸಿಇಒಗಳನ್ನು ಅವರು ಭೇಟಿಯಾದರು.

ಜಾಗತಿಕ ಉತ್ಪಾದಕರು ಭಾರತದಲ್ಲಿ ಜಂಟಿಯಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬಹುದು. ಇಲ್ಲಿಂದಲೇ ಜಗತ್ತಿಗೆ ರಫ್ತು ಮಾಡಬಹುದು ಎಂದು ಅವರು ಆಹ್ವಾನಿಸಿದರು. ಜನರಲ್‌ ಆಟೋಮಿಕ್ಸ್‌, ಬೋಯಿಂಗ್‌, ಎಂಬ್ರೇರ್‌, ರಾಫೆಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರು ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದರು.

ಉದ್ದಿಮೆ ಸ್ಥಾಪಿಸುವವರಿಗೆ ಭೂಮಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚ, ಸರ್ಕಾರದ ರೀತಿ-ನೀತಿ, ಉತ್ತೇಜನ, ಮಾನವ ಸಂಪನ್ಮೂಲದ ಲಭ್ಯತೆ, ದೇಶೀಯ ರಕ್ಷಣಾ ವಲಯದ ಮಾರುಕಟ್ಟೆಯ ವಿವರಗಳನ್ನು ಸಚಿವರು ನೀಡಿದರು.

ಭಾರತವು ರಕ್ಷಣಾ ವಲಯದ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಭಾರತ ಈ ವಲಯದಲ್ಲಿ ಸ್ವಾವಲಂಬಿಯಾಗಲು ಹಾಗೂ ಉದ್ಯೋಗ ಸೃಷ್ಟಿಗೆ ಇದು ಮಹತ್ತರ ಪಾತ್ರ ವಹಿಸಲಿದೆ ಎಂದರು. ರಕ್ಷಣಾ ಉದ್ಯಮ ಕಾರಿಡಾರ್‌ಗಳ ಸ್ಥಾಪನೆಗೆ ಉತ್ತರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಘೋಷಿಸಿರುವ ಇನ್ಸೆಂಟಿವ್‌ಗಳನ್ನೂ ಸಚಿವರು ಪ್ರಸ್ತಾಪಿಸಿದರು.

ಸ್ವದೇಶಿ ಎಲ್‌ಸಿಎ ಎಂಜಿನ್‌ ಉತ್ಪಾದನೆಗೆ ಸಿದ್ಧತೆ: ಭಾರತವು ಶೀಘ್ರದಲ್ಲಿಯೇ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಜಿನ್‌ಗಳನ್ನು ತಯಾರಿಸಲಿದೆ ಎಂದು (light combat aircraft engine) ಡಿಆರ್‌ ಡಿಒ ಮುಖ್ಯಸ್ಥ ಸಮೀರ್ ಕಾಮತ್‌ ತಿಳಿಸಿದ್ದಾರೆ.

Continue Reading
Advertisement
Rambhapuri seer and MB Patil
ಕರ್ನಾಟಕ11 mins ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್11 mins ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Reliance Retail launches beauty retail store 'Tira' in Bengaluru
ದೇಶ27 mins ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್45 mins ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Shri Ram Janmabhoomi Mandir carvings are wonderful
ದೇಶ50 mins ago

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Bus-jeep accident
ಉಡುಪಿ56 mins ago

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Killers who killed lawyer for property in kalaburagi
ಕರ್ನಾಟಕ1 hour ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ1 hour ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

man accused of murder wins acquittal after studying law and fighting own Case
ದೇಶ1 hour ago

ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಾಯಕ, ಲಾ ಓದಿ ತನ್ನ ಕೇಸನ್ನು ತಾನೇ ಗೆದ್ದ!

Kate Cross reveals ‘soft spot for RCB’ after bagging deal
ಕ್ರಿಕೆಟ್1 hour ago

ಚೆನ್ನೈ ತಂಡದ ಕಟ್ಟರ್‌ ಅಭಿಮಾನಿಯನ್ನು ಖರೀದಿ ಮಾಡಿದ ಆರ್​ಸಿಬಿ ಫ್ರಾಂಚೈಸಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ4 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ7 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌