ಬೆಂಗಳೂರು: ರಾಜ್ಯದಲ್ಲಿ ಹಿಜಾಬ್/ಕೇಸರಿ ಶಾಲು ವಿವಾದವೂ ಸಣ್ಣದಾಗಿ ಶುರುವಾಗಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಹೈಕೋರ್ಟ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿತ್ತು. ಹಿಜಾಬ್ / ಕೇಸರಿ ಶಾಲು ಬಳಿಕ ಮತ್ತೊಂದು ವಿವಾದವೂ ಸರ್ಕಾರಿ ನಿಗಮದಲ್ಲಿ ಆರಂಭವಾಗಿದೆ. ಬೆಂಗಳೂರಿನ ಜೀವನಾಡಿ ಆಗಿರುವ ಬಿಎಂಟಿಸಿಯಲ್ಲಿ ಟೋಪಿ V/S ಕೇಸರಿ ಶಾಲು ಕಿಡಿ ಮೂಲಕ ಧರ್ಮ ದಂಗಲ್ ಜೋರಾಗುತ್ತಿದೆ..
ಇದನ್ನೂ ಓದಿ | ಕೇಸರಿ ಅಂದರೆ ಕೆಲವರಿಗೆ ತುರಿಕೆ: ಹಿಜಾಬ್ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ
ಸಾರಿಗೆ ನಿಗಮ ನೌಕರರಿಂದ ಸಮವಸ್ತ್ರ ನೀತಿ ಉಲ್ಲಂಘನೆಯಾಗಿದ್ದು, ಡಿಪೋ ಮೇಲ್ವಿಚಾರಕ ಮುಸ್ಲಿಂ ಟೋಪಿ ಧರಿಸಿದಕ್ಕೆ ಚಾಲಕ, ನಿರ್ವಾಹಕರು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಈ ಘಟನೆಯು ಬನಶಂಕರಿ ಬಿಎಂಟಿಸಿ ಡಿಪೋದಲ್ಲಿ ನಡೆದಿದ್ದು, ಕಳೆದ ಒಂದು ತಿಂಗಳಿಂದ ಕೇಸರಿ ಶಾಲು, ಟೋಪಿ ಹಾಕಿಕೊಂಡು ಸಿಬ್ಬಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಈ ಮೂಲಕ ಧರ್ಮದಂಗಲ್ ಶಾಲಾ-ಕಾಲೇಜಿನಿಂದ ಸಾರಿಗೆ ಸಂಚಾರಕ್ಕೂ ಆವರಿಸಿದೆ.
ಟೋಪಿ – ಕೇಸರಿ ವಾರ್ ಹೇಗಿದೆ ಅಂದರೆ ಕೇಸರಿ ಕಾರ್ಮಿಕರ ಸಂಘ ಕಟ್ಟಿಕೊಂಡಿರುವ ಬಿಎಂಟಿಸಿ ನೌಕರರು ಸುಮಾರು 1,500 ಸಿಬ್ಬಂದಿ ಸಂಘದ ಸದಸ್ಯತ್ವವನ್ನೂ ಪಡೆದುಕೊಂಡಿದ್ದಾರಂತೆ. ಟೋಪಿ ಕಳಚುವವರೆಗೂ ಕೇಸರಿ ಶಾಲು ಹಾಕುತ್ತೇವೆ ಎಂದು ಕೆಲ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಸದ್ಯ ನಿಗಮದ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲವಾದರೆ ಈ ಘಟನೆಯೂ ಮುಂದೊಂದು ದಿನ ಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಯಿದೆ,
ಇದನ್ನೂ ಓದಿ | ಇದು ಹಿಜಾಬ್-ಕೇಸರಿ ಶಾಲು ವಿವಾದ ಅಲ್ಲ: ಸಮವಸ್ತ್ರದಿಂದ ಬಾಲಕ ಪತ್ತೆಯಾದ ಕತೆ !